ಮುಡಿಪು: ಇಲ್ಲಿನ ಎಜುಪಾರ್ಕ್ ನಲ್ಲಿ ಮಾಸಂಪ್ರತಿ ನಡೆಸಲ್ಪಡುವ ಸಖಾಫಿಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮವು ಮಾರ್ಚ್.8 ರಂದು ಸಂಜೆ 6.30 ಕ್ಕೆ ನಡೆಯಲಿದೆ.
ಸಹಸ್ರಾರು ಜನರ ಸಮಸ್ಯೆಗಳಿಗೆ ಪರಿಹಾರವಾಗಿ ಪರಿಣಮಿಸಿರುವ, ಸಯ್ಯಿದ್ ಮುಹ್ಮದ್ ಅಶ್ರಫ್ ಅಸ್ಸಖಾಫ್ ಮದನಿ ತಂಙಳ್ ಆದೂರ್ ಇವರ ನೇತೃತ್ವದಲ್ಲಿ ನಡೆಯುವ ಪ್ರಸ್ತುತ ಕಾರ್ಯಕ್ರಮದಲ್ಲಿ ಪ್ರಮುಖ ವಾಗ್ಮಿ ಬಹು: ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಬಹು ರಪೀಕ್ ಅಹ್ಸನಿ. ಹೂಹಾಕುವ ಕಲ್ಲು ಕಾರ್ಯಕ್ರಮವನ್ನು ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಬಹು ಸಯ್ಯಿದ್ ಜಲಾಲುದ್ದೀನ್ ಜಮಲುಲೈಲಿ ಪಾತೂರು,N,ಮುಹಮ್ಮದ್ ,.ಕೆ.ಇ. ಸಾಲೆತ್ತೂರು, ಮುಹಮ್ಮದ್ ಹಾಜಿ ಪೂಯ್ಯತ್ತಬೈಲು, ಎಸ್.ಕೆ.ಖಾದರ್ ಹಾಜಿ.ಅಕರ್ಷನ್ ಹಾಜಿ ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಬಾಗವಹಿಸಿಲಿದ್ದಾರೆ ಎಂದು ಮಜ್ಲಿಸ್ಎಜು ಪಾರ್ಕ್ ಮಿಡಿಯಾ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದೆ.