ಜಿದ್ದಾ:- ಡಿಕೆಯಸ್ಸಿ ಮಕ್ಕಾ ವಲಯ ಸಮಿತಿ ಮಹಾಸಭೆಯು 19/06/2026 ಶುಕ್ರವಾರ ಜುಮ್ಅ ನಮಾಝ್ ಬಳಿಕ ವಲಯ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸೈಯದ್ ನಾಫೀ ತಂಙಳ್ ರವರ ಅಧ್ಯಕ್ಷತೆಯಲ್ಲಿ ಜಿದ್ದಾ ಮಹಾಜರ್ ನಲ್ಲಿ ನೆರವೇರಿತು. ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ರವರನ್ನು ಆಯ್ಕೆ ಮಾಡಲಾಯಿತು.

ಬಹು॥ ಸಯ್ಯಿದ್ ನಾಫೀ ತಂಙಳ್ ರವರ ದುಆಃ ದೊಂದಿಗೆ ಪ್ರಾರಂಭ ಗೊಂಡ ಸಭೆಯ ಉದ್ಘಾಟನೆಯನ್ನು ಕೇಂದ್ರ ಸಮಿತಿಯ ಆರ್ಗನೈಝರ್ ಉಸ್ತಾದ್ ಬಹು॥ ಅಬ್ದುರ್ರಶೀದ್ ಸಅದಿ ನೆರವೇರಿಸಿದರು . ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಮಜೀದ್ ಕಣ್ಣಂಗಾರ್, ಮಕ್ಕಾ ವಲಯದ ಉಸ್ತುವಾರಿ ಜನಾಬ್ ಹಸನ್ ಬಾವ ಕುಪ್ಪೆಪದವು ಹಾಗೂ ಕೇಂದ್ರ ಹಿರಿಯ ನಾಯಕರಾದ ಜನಾಬ್ ಅಬೂಬಕರ್ ಅಜಿಲಮೊಗರು ಭಾಗವಹಿಸಿ ಸಂಘಟನೆಯನ್ನು ಬಲಪಡಿಸುವ ಬಗ್ಗೆ ಹಿತವಚನವನ್ನು ನೀಡಿದರು.
ಚುನಾವಣಾ ಅಧಿಕಾರಿಯಾಗಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಮಜೀದ್ ಕಣ್ಣಂಗಾರ್ ಕಾರ್ಯನಿರ್ವಹಿಸಿದರು. ವಲಯದ ಹಿರಿಯ ನೇತಾರರು ಆದ ಜನಾಬ್ ಇಸ್ಮಾಯಿಲ್ ಹೈದ್ರೋಸ್ ಮೂಡಿಗೆರೆ ರವರು ತಮ್ಮ ಸ್ವಾಗತ ಭಾಷಣದಲ್ಲಿ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ ಇತ್ತೀಚೆಗೆ ನಡೆದ ಗಲ್ಫ್ ಮೀಟ್ ನಲ್ಲಿ ಭಾಗವಹಿಸಿದ ಬಗ್ಗೆ ತಮ್ಮ ಅನುಭವ ವನ್ನು ಸಭೆಯಲ್ಲಿ ಬಹಳ ಉತ್ತಮವಾಗಿ ವಿವರಿಸಿದರು. ಜಿದ್ದಾ ನಾರ್ತ್ ಯುನಿಟ್ ಅಧ್ಯಕ್ಷ ಜನಾಬ್ ಹಾರೂನ್ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಸನ್ ಜಿದ್ದಾ ಖಿರಾಅತ್ ಪಠಿಸಿದರು ಜನಾಬ್ ಇಬ್ರಾಹಿಂ ಕಣ್ಣಂಗಾರ್ ಧನ್ಯವಾದ ಗೈದರು ವಲಯದ ಪ್ರಧಾನ ಕಾರ್ಯದರ್ಶಿ ಜನಾಬ್ ರಫೀಖ್ ಎರ್ಮಾಲ್ ಕಾರ್ಯಕ್ರಮ ನಿರೂಪಿಸಿದರು.
ನೂತನ ಕಾರ್ಯಕಾರಿ ಸಮಿತಿ 2026-27
ಅಧ್ಯಕ್ಷ:
ಮುಹಮ್ಮದ್ ಶರೀಫ್ ಮರವೂರು
ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಫಝಲ್ ಸೂರಿಂಜೆ
ಹಣಕಾಸು ಕಾರ್ಯದರ್ಶಿ: ಮುಹಮ್ಮದ್ ಇಖ್ಬಾಲ್ ಅರಳ
ಸಂವಹನ ಕಾರ್ಯದರ್ಶಿ:
ಇಬ್ರಾಹೀಂ ಕಣ್ಣಂಗಾರ್
ಡೆವಲಪ್ಮೆಂಟ್ ಚೇರ್ಮನ್:
ಸೈಯದ್ ಮುಹಮ್ಮದ್ ತಂಙಳ್ ಉಚ್ಚಿಲ.
ಉಪಾಧ್ಯಕ್ಷರು:
1. ಸೈಯದ್ ನಾಫೀ ತಂಙಳ್
2. ಮುಹಮ್ಮದ್ ಮೋನು ದೊಂಪ ತಬೂಕ್
3. ಮುಹಮ್ಮದ್ ಇಕ್ಬಾಲ್ ಕೃಷ್ಣಾಪುರ (Al Falah)
ಕಾರ್ಯದರ್ಶಿ:
1. ಹೈದರ್ ಮೂಡಿಗೆರೆ
2. ಹಾರೂನ್ ಬಂಟ್ವಾಳ
ಮುಖ್ಯ ಸಲಹೆಗಾರರು :
ಬಹು॥ ಉಮರುಲ್ ಫಾರೂಖ್ ಸಅದಿ ಎಚ್ ಕಲ್ಲು
ಸಲಹೆಗಾರರು:
1. ಅಝರ್ ಕೃಷ್ಣಾಪುರ
2. ರಫೀಖ್ ಎರ್ಮಾಳ್
ಲೆಕ್ಕ ಪರಿಶೋಧಕ:
ಇಸ್ಮಾಯೀಲ್ ಹೈದ್ರೋಸ್ ಮೂಡಿಗೆರೆ
ಮೀಡಿಯಾ: ಆಸಿಫ್ ಕೋಟ
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ