ದೋಹಾ: ಮೆಟ್ರಾಶ್ (Metrash) ಆಪ್ ಮೂಲಕ ವರ್ಕ್ ವೀಸಾ ವಿತರಣೆಗಾಗಿ ಸುಲಭವಾಗಿ ಮತ್ತು ಅನುಕೂಲಕರವಾಗಿ ಅರ್ಜಿ ಸಲ್ಲಿಸಬಹುದು ಎಂದು ಕತಾರ್ ಆಂತರಿಕ ಸಚಿವಾಲಯವು ಸಾರ್ವಜನಿಕರಿಗೆ ನೆನಪಿಸಿದೆ.
ವರ್ಕ್ ವೀಸಾ ಪಡೆಯಲು ಗ್ರಾಹಕರು ಜನರಲ್ ಡೈರೆಕ್ಟರೇಟ್ ಆಫ್ ಪಾಸ್‌ಪೋರ್ಟ್ ಕಚೇರಿ ಅಥವಾ ಏಕೀಕೃತ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಸಚಿವಾಲಯವು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದೆ.
ವರ್ಕ್ ವೀಸಾ ವಿತರಿಸುವ ಹಂತಗಳನ್ನು ಸಚಿವಾಲಯವು ವಿವರಿಸಿದೆ. ಮೆಟ್ರಾಶ್ ಪ್ಲಾಟ್‌ಫಾರ್ಮ್ ಮೂಲಕ ರೆಸಿಡೆನ್ಸಿ ವಿಚಾರಣೆಗಳು, ಸಂಚಾರ (ಟ್ರಾಫಿಕ್) ದಂಡ ಪಾವತಿ, ನೇರ ವರದಿ ಮಾಡುವಿಕೆ ಸೇರಿದಂತೆ ವಿವಿಧ ಸೇವೆಗಳು ಲಭ್ಯವಿವೆ. ಸರ್ಕಾರಿ ಸೇವೆಗಳನ್ನು ಸರಳಗೊಳಿಸುವುದು ಮತ್ತು ದಕ್ಷತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವರ್ಕ್ ವೀಸಾ ಅರ್ಜಿಯ ಹಂತಗಳು:
- ಆಪ್‌ನಲ್ಲಿರುವ ‘ವೀಸಾ’ (Visa) ಸೇವೆಗಳ ವಿಭಾಗಕ್ಕೆ ಪ್ರವೇಶಿಸಿ ‘ರಿಕ್ವೆಸ್ಟ್ ಅಪ್ಲಿಕೇಶನ್’ (Request Application) ಕ್ಲಿಕ್ ಮಾಡಿ.
- ಸರ್ವಿಸ್ ಟೈಪ್ (Service Type) ‘ವರ್ಕ್ ವೀಸಾ’ ಎಂದು ಆಯ್ಕೆಮಾಡಿ.
- ಅಗತ್ಯವಿರುವ ವೀಸಾವನ್ನು ಆಯ್ಕೆ ಮಾಡಿದ ನಂತರ ‘ಇಶ್ಯೂ ವೀಸಾ’ (Issue Visa) ಕ್ಲಿಕ್ ಮಾಡಿ.
- ನಿಗದಿತ ವಿವರಗಳನ್ನು ದಾಖಲಿಸಿ, ಪಾಸ್‌ಪೋರ್ಟ್ ಪ್ರತಿ ಮತ್ತು ವೈಯಕ್ತಿಕ ಫೋಟೋವನ್ನು ಅಪ್‌ಲೋಡ್ ಮಾಡಿ.
- ನೀಡಲಾದ ವಿವರಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರ, ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಿ.
- ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಅನುಮೋದನೆಗಾಗಿ (Approval) ಕಾಯಿರಿ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ