ಮಾರ್ಚ್ 23 ರಂದು ಜಿದ್ದಾದಲ್ಲಿ ಮೃತಪಟ್ಟ ಝೈನಬ ಕಾಗಡಿಕಟ್ಟೆಯವರ ಅಂತ್ಯಕ್ರಿಯೆಯು ಮಾರ್ಚ್ 25 ರಂದು ಜಿದ್ದಾದ ಹಂದಾನಿಯ್ಯಾದಲ್ಲಿರುವ ಮಖ್ಬರ ಅಲ್ ಸ್ವಾಲಿಹಿಯ್ಯಾದಲ್ಲಿ ಕುಟುಂಬಸ್ತರು, ಸ್ನೇಹಿತರು, ಕೆಸಿಎಫ್ ನ ನೇತಾರರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಪವಿತ್ರ ಉಮ್ರಾ ಝಿಯಾರ ಮುಗಿಸಿ ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 23 ಮೃತಪಟ್ಟಿದ್ದರು.
ಮರಣ ಹೊಂದಿದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತರಾದ ಕೆಸಿಎಫ್ ಜಿದ್ದಾ ಝೋನ್ ಸಾಂತ್ವನ ಇಲಾಖೆಯ ನೇತಾರರು ಮೃತರ ಅಂತ್ಯ ಸಂಸ್ಕಾರಕ್ಕೆ ಬೇಕಾದ ದಾಖಲೆ ಪತ್ರಗಳು, ಭಾರತೀಯ ರಾಯಭಾರಿ ಕಚೇರಿಗೆ ಬೇಕಾದ ಕಡತಗಳು ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಯನ್ನು ತ್ವರಿತ ಗತಿಯಲ್ಲಿ ಸಿದ್ಧಪಡಿಸಿ ಮಯ್ಯತ್ ದಫನ ಕಾರ್ಯ ಶೀಘ್ರ ಗತಿಯಲ್ಲಿ ನಡೆಸಲು ಸಹಕರಿಸಿದರು.
ಮಯ್ಯತ್ ದಫನ ಕಾರ್ಯದಲ್ಲಿ ಕೆಸಿಎಫ್ ಬವಾದಿ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ನಾಫಿ ತಂಙಳ್, ಸುಲೈಮಾನ್ ಸಅದಿ, ಅಶ್ರಫ್ MSM, ಕುಟುಂಬಸ್ತರಾದ ಅನ್ಸಾರ್ ಸೋಮವಾರಪೇಟೆ ಹಾಗೂ ಕೊಡಗು ಸುನ್ನಿ ವೆಲ್ಫೇರ್ ನ ಕಾರ್ಯಕರ್ತರು ಸೇರಿದಂತೆ ಹಲವಾರು ಕೆಸಿಎಫ್ ಕಾರ್ಯಕರ್ತರು ಹಿತೈಷಿಗಳು ಭಾಗವಹಿಸಿದ್ದರು.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್