ಸೌದಿ ಅರೇಬಿಯಾದ ಜುಬೈಲ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರು ತಾಲೂಕಿನ ಮಲ್ಲೂರು ಸುಲೈಮಾನ್(35) ಮೃತಪಟ್ಟಿರುವುದಾಗಿ ವರದಿಯಾಗಿದೆ.
ಲುಮಿನಾಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸುಲೈಮಾನ್ ಕಳೆದ ಐದು ದಿನಗಳಿಂದ ಯಾರದೇ ಸಂಪರ್ಕಕ್ಕೆ ಸಿಗದೆ, ನಾಪತ್ತೆಯಾಗಿರುವುದಾಗಿ ಸುದ್ದಿಯಾಗಿತ್ತು.ಆದರೆ, ಇಂದು ಮೃತಪಟ್ಟಿರುವ ವರದಿ ಲಭ್ಯವಾಗಿದೆ.
ಸುಲೈಮಾನ್ ರಸ್ತೆ ದಾಟುತ್ತಿದ್ದ ವೇಳೆ ಸೌದಿಯ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಅಪಘಾತದ ಸಂಪೂರ್ಣ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಅಂತ್ಯಕ್ರಿಯೆಗೆ ಸಂಬಂಧಿಸಿದ ದಾಖಲೆ ಪತ್ರಗಳ ಪ್ರಕ್ರಿಯೆ ನಡೆಸುತ್ತಿರುವುದಾಗಿ ಕೆಸಿಎಫ್ ಸಾಂತ್ವನ ವಿಂಗ್ ನಾಯಕರಾದ ಭಾಷ ಗಂಗಾವಳಿಯವರು ತಿಳಿಸಿದ್ದಾರೆ.