janadhvani

Kannada Online News Paper

ದಾರುನ್ನಜಾತ್ ಸ್ವಲಾತ್ ವಾರ್ಷಿಕ ಮತ್ತು ಮರ್ಹೂಂ ಅಬೂಬಕ್ಕರ್ ಉಸ್ತಾದ್ ಆಂಡ್ ನೇರ್ಚೆ ದಿನ ಘೋಷಣೆ

ವಿಟ್ಲ : ದಾರುನ್ನಜಾತ್ ಎಜುಕೇಷನಲ್ ಸೆಂಟರ್ ಟಿಪ್ಪು ನಗರ ಕೊಡಂಗಾಯಿ ಸಂಸ್ಥೆಯಲ್ಲಿ ವಾರಂಪ್ರತಿ ನಡೆಯುತ್ತಿರುವ ಸ್ವಲಾತ್ ಮಜ್ಲಿಸಿನ 10ನೇ ವಾರ್ಷಿಕ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶೈಖುನಾ ವಾಲಮುಂಡೋವು ಉಸ್ತಾದ್ ನಿರ್ವಹಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಅಸಯ್ಯದ್ ಸಮೀಮ್ ತಂಙಳ್ ಅಲ್ ಬುಖಾರಿ ದಾರುನ್ನಜಾತ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ದಾರುನ್ನಜಾತ್ ಸ್ಥಾಪಕ ಅಧ್ಯಕ್ಷರಾದ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಆಂಡ್ ನೇರ್ಚೆಯ ದಿವಸವನ್ನು ಸೆಪ್ಟಂಬರ್ 30 ಅಕ್ಟೋಬರ್ 1 ತಾರೀಕಿಗೆ ನಡೆಸಲಾಗುವುದು ಎಂದು ಬಹು ಅಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ಘೋಷಣೆ ಮಾಡಿ ಪ್ರಾರ್ಥನೆಗೆ ನೇತೃತ್ವ ನೀಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ ,ಡಾ| ಹಸೈನಾರ್,ಹಾಫಿಳ್ ಶರೀಫ್ ಮುಸ್ಲಿಯರ್, ಇಬ್ರಾಹಿಂ ಮುಸ್ಲಿಯಾರ್, ಉಸ್ಮಾನ್ ಹಾಜಿ, ಯೂನುಸ್ ಸಅದಿ ಉಪಸ್ಥಿತರಿದ್ದರು.
ಸಂಸ್ಥೆಯ ಮ್ಯಾನೇಜರ್ ಹಾಜಿ ಹಮೀದ್ ಕೊಡಂಗಾಯಿ ಸ್ವಾಗತಿಸಿದರು. ರಝಾಕ್ ಸಅದಿ ಕೊಡಿಪ್ಪಾಡಿ ಅಭಿನಂದನೆ ಸಲ್ಲಿಸಿದರು.