ಕುಪ್ಪೆಟ್ಟಿ: ಎಸ್ಸೆಸ್ಸೆಫ್ ಕುಪ್ಪೆಟ್ಟಿ ಸೆಕ್ಟರ್ ಹಾಗೂ ಹಬೀಬಿಯ ಟ್ರಸ್ಟ್ ವತಿಯಿಂದ ವಾಹ ಅಕಾಡೆಮಿ ಕುಪ್ಪೆಟ್ಟಿಯಲ್ಲಿ ಉಚಿತ ಹಿಜಾಮ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಎಸ್ಸೆಸ್ಸೆಫ್ ಕುಪ್ಪೆಟ್ಟಿ ಸೆಕ್ಟರ್ ಅಧ್ಯಕ್ಷರಾದ ಅತಾವುಲ್ಲ ಹಿಮಮಿ ಸಖಾಫಿ ಅಧ್ಯಕ್ಷತೆಯನ್ನು ವಹಿಸಿದ್ದರು. ಹಬೀಬಿಯ ಟ್ರಸ್ಟ್ ಇದರ ಉಪಾಧ್ಯಕ್ಷ ಫಾರೂಕ್ ಸಅದಿ ಕುಪ್ಪೆಟ್ಟಿ ಗಣ್ಯರನ್ನು ಸ್ವಾಗತಿಸಿದರು. ಸಭಾ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಉದ್ಘಾಟನೆಯನ್ನು ನೆರವೇರಿಸಿದ ಹನೀಫ್ ಸಖಾಫಿ ಕಿನ್ಯಾ ಉಸ್ತಾದರು ಹಿಜಾಮ ಚಿಕಿತ್ಸೆಯು ಇಸ್ಲಾಮ್ ಕೊಟ್ಟ ಮಹತ್ವದ ಬಗ್ಗೆ ತಿಳಿಸಿದರು.
ಹಿಜಾಮ ಚಿಕಿತ್ಸೆಯನ್ನು ಡಾ. ತಸ್ರೀಫಾ, ಡಾ.ಸರ್ಪರಾಝ್ ನಡೆಸಿಕೊಟ್ಟರು.
40ಪುರುಷರು 13 ಮಹಿಳೆಯರು ಹಿಜಾಮ ಚಿಕಿತ್ಸೆಯ ಪ್ರಯೋಜನ ಪಡೆದರು.
ಯಾಸೀನ್ ಸಖಾಫಿ ವಾಹಾ ಅಕಾಡೆಮಿ, ಶುಕೂರ್ ವಾಹ ಅಕಾಡೆಮಿ, ಸಂಶುದ್ದೀನ್ ಹಿಮಮಿ ಉಪಸ್ಥಿತರಿದ್ದರು. ರಶೀದ್ ಜೌಹರಿ ಕರಾಯ ವಂದಿಸಿದರು.