ದುಬೈ: ಹಿಂದೂಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಉದ್ಯೋಗಿಗಳಿಗೆ ಆಹ್ವಾನ ನೀಡಿ ಪ್ರಕಟಿಸಿರುವ ಜಾಹೀರಾತು ನಕಲಿಯಾಗಿದೆ ಎಂದು ದುಬೈ ಮೂಲದ ಕಂಪನಿ ಸ್ಪಷ್ಟಪಡಿಸಿದೆ.
ವ್ಯಾಪಕ ವಿವಾದವೆಬ್ಬಿಸಿದ GBMT ಕಂಪನಿಯ ಜಾಹೀರಾತು, ಧಾರ್ಮಿಕ ತಾರತಮ್ಯದ ಆರೋಪಗಳು ಕೇಳಿ ಬಂದ ನಂತರ ಕಂಪನಿಯ ವಿರುದ್ಧ ಸಾಮಾಜಿಕ ತಾಣದಲ್ಲಿ ಆಕ್ರೋಶ ಭುಗಿಲೆದ್ದಿತ್ತು.
GBMT ಸ್ಟೀಲ್ ಸೇವೆಯ ಹೆಸರಿನಲ್ಲಿ ಪ್ರಚಾರಗೊಂಡ ಜಾಹೀರಾತು ಪೋಸ್ಟರ್ ನಲ್ಲಿ, ಕಂಪನಿಯಲ್ಲಿ ಸುರಕ್ಷತಾ ಅಧಿಕಾರಿಗಳ ಐದು ಹುದ್ದೆಗಳು ಖಾಲಿ ಇದ್ದು, ಹಿಂದೂ ಉದ್ಯೋಗಾಕಾಂಕ್ಷಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. AED 3,000 ರಿಂದ AED 5,000 ವರೆಗೆ ವೇತನ ಇರುತ್ತದೆ. CV ಕಳುಹಿಸಲು ಇ-ಮೇಲ್ ಮತ್ತು ಫೋನ್ ಸಂಖ್ಯೆಯನ್ನೂ ಲಗತ್ತಿಸಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಕಂಪೆನಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಕಂಪನಿ ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಈ ಜಾಹೀರಾತು ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಮತ್ತು ದುಬೈ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.ಈ ನೋಟೀಸಿನ ಹಿಂದೆ ಯಾರೆಂದು ಗೊತ್ತಿಲ್ಲ. ಕೆಲವರು ಕಂಪನಿಯ ಹೆಸರಿಗೆ ಕಳಂಕವನ್ನುಂಟು ಮಾಡಲು ಮತ್ತು ಆ ಮೂಲಕ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂಪನಿ ಅಧಿಕೃತರು ಹೇಳಿದ್ದಾರೆ.
ಯುಎಇ ರಾಜಮನೆತನದ ಸದಸ್ಯೆ ಶೈಖಾ ಹಿಂದ್ ಫೈಸಲ್ ಆಲ್ ಖಾಸಿಮಿ ಸಹಿತವಿರುವ ಪ್ರಮುಖರಿಗೆ ನೋಟೀಸಿನ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.GBMT ಸ್ಟೀಲ್ ಎರಡು ದಶಕಗಳಿಂದ ದುಬೈ ಇನ್ವೆಸ್ಟ್‌ಮೆಂಟ್ ಪಾರ್ಕ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಕಂಪನಿಯು ಅಬುಧಾಬಿಯಲ್ಲೂ ಕಾರ್ಖಾನೆಯನ್ನು ಹೊಂದಿದೆ.
https://janadhvani.com/post/38409/
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ