ಸುಬ್ರಹ್ಮಣ್ಯ: ಕಡಬ ತಾಲೂಕು ಕುಕ್ಕೆ ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅನುಷ್ ಎ.ಎಲ್. 2019-20ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದುಕೊಂಡಿದ್ದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ.
ಬಳ್ಪ ಗ್ರಾಮದ ಲೊಕೇಶ್ ಮತ್ತು ಉಷಾ ಎಣ್ಣೆಮಜಲು ದಂಪತಿಗಳ ಪುತ್ರ ಅನುಷ್ ದ.ಕ.ಜಿಲ್ಲೆಗೆ ಅಭಿಮಾನವಾಗಿ ಹೊರಹೊಮ್ಮಿರುತ್ತಾರೆ.
ಅನುಷ್ ಮಹತ್ವಾಕಾಂಕ್ಷೆ
‘ನಾನು ಗ್ರಾಮೀಣ ಭಾಗದಲ್ಲಿ ಬೆಳೆದಿದ್ದು, ನಮ್ಮ ಶಾಲೆಯೂ ಪ್ರಕೃತಿ ಮಡಿಲಲ್ಲಿದೆ. ಪರಿಸರ ಮತ್ತು ವಿಜ್ಞಾನವು ನನ್ನ ಇಷ್ಟದ ವಿಷಯ. ಅದಕ್ಕಾಗಿ ಐಎಫ್‌ಎಸ್ ಮಾಡಿ, ಅರಣ್ಯ–ವನ್ಯಜೀವಿ ರಕ್ಷಣೆ ಮಾಡಬೇಕು ಎಂಬುದು ನನ್ನ ತುಡಿತ…’ ಎಂದು ಅನುಷ್ ಎ.ಎಲ್. ತನ್ನ ಕನಸುಗಳನ್ನು ಹಂಚಿಕೊಂಡಿದ್ದಾರೆ.
‘ಕೊರೊನಾ ಲಾಕ್‌ಡೌನ್‌ನಿಂದ ಓದಲು ಅವಕಾಶ ಸಿಕ್ಕಿತು. ಆದರೆ, ಶಿಕ್ಷಕರ ಹಾಗೂ ಹೆಚ್ಚುವರಿ ಪುಸ್ತಕಗಳ ಪ್ರಯೋಜನ ಪಡೆಯಲು ಹಿನ್ನಡೆಯಾಯಿತು. ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡ ಕೂಡಲೇ ಪೂರ್ಣ ತಯಾರಿಯಲ್ಲಿ ತಲ್ಲೀನನಾದೆ’ ಎಂದು ಲಾಕ್‌ಡೌನ್ ಕುರಿತು ಪ್ರತಿಕ್ರಿಯಿಸಿದರು.
‘ವಿಜ್ಞಾನ ಮಾದರಿ ತಯಾರಿ, ಭಾಷಣ, ಕಾರ್ಯಕ್ರಮ ನಿರೂಪಣೆ ಹಾಗೂ ವಾಲಿಬಾಲ್ ಇತ್ಯಾದಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ನನ್ನ ಪಠ್ಯೇತರ ಆಸಕ್ತಿಗಳು. ಆದರೆ, ಪ್ರತಿನಿತ್ಯ ಐದು ಗಂಟೆ ಅಧ್ಯಯನ ಮಾಡುತ್ತಿದ್ದೆನು. ಯಾವುದೇ ಕೋಚಿಂಗ್‌ಗೆ ಹೋಗಿಲ್ಲ’ ಎಂದರು.
‘ಮೊದಲ ರ್‍ಯಾಂಕ್ ಎಂದು ಅಪ್ಪ ಹೇಳುವಾಗ, ಶಾಕ್, ಖುಷಿ ಎಲ್ಲವೂ ಒಮ್ಮೆಗೆ ಆಯಿತು’ ಎಂದು ಸಂಭ್ರಮಿಸಿದರು.















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನಾಳೆಯಿಂದ ಎಸ್ಸೆಸ್ಸೆಫ್ ಕ್ಯಾಂಪಸ್ ಕಾನ್ಫರೆನ್ಸ್ – ಎಲ್ಲರ ಚಿತ್ತ ಮೈಸೂರಿನತ್ತ!
ನಂದಾವರ ಕೋಟೆ: ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 100% ಫಲಿತಾಂಶ
ಶಾಜ್ಮಿಯ ಡಿಸ್ಟಿಂಕ್ಷನ್ (557) ಅಂಕದೊಂದಿಗೆ ತೇರ್ಗಡೆ
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಶೇ. 73.40 ವಿದ್ಯಾರ್ಥಿಗಳು ಉತ್ತೀರ್ಣ- ಬಾಲಕಿಯರೇ ಮೇಲುಗೈ
ದ್ವಿತೀಯ ಪಿಯುಸಿ ಫಲಿತಾಂಶ: 542 ಅಂಕಗಳಿಸಿ ಕಳಂಜಿಬೈಲ್ ಗೆ ಕೀರ್ತಿ ತಂದ ಶಝ್ಮಿಯಾ
ಪಿಯುಸಿ ಕೆಜಿಎನ್ ಶೀ ಕ್ಯಾಂಪಸ್ ಗೆ 100%
ಕಾವೂರು BGS ಫ್ರೌಡಶಾಲೆಯ ವಿದ್ಯಾರ್ಥಿನಿ ಮರಿಯಮ್ ಸಲ್ವಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
ಕೃಷ್ಣಾಪುರದ ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಸುಝಐಫಾ ಫರಹಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ