janadhvani

Kannada Online News Paper

ಬಹರೈನ್ : ಅಲ್ ಮದೀನಾ ಮಂಜನಾಡಿ ಬೆಳ್ಳಿಹಬ್ಬ ಪ್ರಚಾರ ಸಮ್ಮೇಳನ ಯಶಸ್ವಿ

ಮನಾಮ: ಫೆಬ್ರವರಿ 1,2,3 ರಂದು ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿಯಲ್ಲಿ ನಡೆಯಲಿರುವ ಐತಿಹಾಸಿಕ ಬೆಳ್ಳಿ ಹಬ್ಬ ಸಮಾರಂಭದ ಪ್ರಚಾರಾರ್ಥಕವಾಗಿ ಬಹರೈನ್ ಅಲ್ ಮದೀನ ಸಮಿತಿಯ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡ ಪ್ರಚಾರ ಸಮ್ಮೇಳನವು ಪಾಕಿಸ್ತಾನ್ ಕ್ಲಬ್ನಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವು ಸಿದ್ದೀಕ್ ಮುಸ್ಲಿಯಾರ್ ಮಂಜನಾಡಿರವರ ದುವಾದೊಂದಿಗೆ ಪ್ರಾರಂಭಗೊಂಡಿತು. ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಸಮದ್ ಉಜಿರೆಬೆಟ್ಟು ಖಿರಾಅ ತ್ ಪಠಿಸಿದರು.
ಸ್ವಾಗತ ಭಾಷಣವನ್ನು ಮಾಡಿದ ಹಾರಿಸ್ ಸಂಪ್ಯ ರವರು ಅಲ್ ಮದೀನಾ ಮಂಜನಾಡಿ ಸಂಸ್ಥೆಯ ಸಂಕ್ಷಿಪ್ತ ವಿವರಣೆಯನ್ನು ನೀಡಿದರು.
ಉದ್ಘಾಟನೆಯನ್ನು ಮಾಡಿದ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಯವರು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಗ್ರ ವಿವರಣೆಯನ್ನು ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಅಲ್ ಮದೀನಾ ಸ್ಥಾಪನೆಯ ಶಿಲ್ಪಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರು ಸಂಸ್ಥೆಯ ಉನ್ನತಿಗೆ ಪ್ರವಾದಿ ಪ್ರೇಮದ ಅನುಭಂದವೇ ಕಾರಣ, ಸಂಸ್ಥೆಯ ಕಾರ್ಯಾಚರಣೆಯಲ್ಲಿ ಸರ್ವರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.

ಮುಖ್ಯ ಭಾಷಣಗಾರರಾಗಿ ಆಗಮಿಸಿದ ಪ್ರಮುಖ ವಾಗ್ಮಿ, ಕೇರಳ ಎಸ್. ಎಸ್.ಎಫ್ ರಾಜ್ಯಾಧ್ಯಕ್ಷ ಡಾ. ಫಾರೂಕ್ ನಈಮಿ ಉಸ್ತಾದರು, ಇಂದು ನಾಡಿನೆಲ್ಲೆಡೆ ತಲೆ ಎತ್ತಿ ನಿಂತಿರುವ ಸ್ಥಾಪನೆಗಳಲ್ಲಿ ಉಲಮಾಗಳ ಪಾತ್ರ ಮಹತ್ತರವಾದುದು. ಅಲ್ ಮದೀನಾದಂತಹ ಎಲ್ಲಾ ಸ್ಥಾಪನೆಗಳ ಅಭಿವೃದ್ಧಿಗೆ ನಾವೆಲ್ಲರೂ ಉಲಮಾಗಳೊಂದಿಗೆ ಕೈ ಜೋಡಿಸಬೇಕಾಗಿದೆ ಎಂದರು.

ಐ.ಸಿ.ಎಫ್ ಬಹರೈನ್ ನೇತಾರರಾದ ಅಲ್ ಹಾಫಿಲ್ ಅಝ್ಹರ್ ತಂಙಳ್, ಝೈನುದ್ದೀನ್ ಸಖಾಫಿ, ಅಡ್ವ ಕೇಟ್ ಎಂ.ಸಿ. ಕರೀಂ, ಲತೀಫಿ ಉಸ್ತಾದ್, ಆರ್ .ಎಸ್.ಸಿ ಚೇರ್ ಮ್ಯಾನ್ ಅಬ್ದುರ್ರಹೀಮ್ ಸಖಾಫಿ , ಕೆ.ಸಿ.ಎಫ್ ಐ.ಎನ್.ಸಿ. ರಿಲೀಫ್ ವಿಂಗ್ ಚೇರ್ಮ್ಯಾನ್ ಜಮಾಲುದ್ದೀನ್ ವಿಟ್ಟಲ್, ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಕ್ ಎಸ್.ಎಂ, ದ.ಕ ಜಿಲ್ಲಾ ಅಲ್ಪ ಸಂಖ್ಯಾತ ಸಮಿತಿಯ ಅಧ್ಯಕ್ಷ ಎನ್.ಎಸ್ ಕರೀಂ, ಅಬ್ದುರ್ರಝಾಕ್ ಹಾಜಿ ಮೆಟೆಲ್ಕೋ, ಝಿಂಜ್ ಮಸ್ಜಿದ್ ಇಮಾಮ್ ಅಶೈಖ್ ಝೈನುಲ್ ಆಬಿದೀನ್, ಕೆ.ಸಿ.ಎಫ್ ಬಹರೈನ್ ಉರ್ದು ವಿಂಗ್ ಲೀಡರ್ ಗಯಾಝುದ್ದೀನ್ ಮೈಸೂರು,
ಅಲ್ ಮದೀನಾ ಸೌದಿ ಅರೇಬಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಳ್ಳೂರು,
ಅಲ್ ಮದೀನಾ ಬಹರೈನ್ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಂಜನಾಡಿ, ಕೋಶಾಧಿಕಾರಿ ಇಬ್ರಾಹಿಂ ಸಅದಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅಬ್ದುಲ್ ಮಜೀದ್ ಸಅದಿ ಪೆರ್ಲ ಉಸ್ತಾದರ ನೇತ್ರತ್ವದಲ್ಲಿ ಬದ್ರ್ ಮೌಲಿದ್ ಪಾರಾಯಣ ನಡೆಯಿತು. ಟಿ.ಎಂ ಅಬೂಬಕ್ಕರ್ ಮುಸ್ಲಿಯಾರ್ ಧನ್ಯವಾದಗೈದರು.

error: Content is protected !! Not allowed copy content from janadhvani.com