ಕೆಸಿಎಫ್ ಯುಎಇ ನ್ಯಾಷನಲ್ ಪ್ರತಿಭೋತ್ಸವ-2019- ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಸಾಲೆತ್ತೂರು ಆಯ್ಕೆ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಯುಎಇ ಸಮಿತಿ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವವು ಜನವರಿ 11 ರಂದು ಅಜ್ಮಾನ್ ಉಮ್ಮುಲ್ ಮುಹ್’ಮಿನೀನ್ ಆಡಿಟೋರಿಯಂ ನಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಅಬ್ದುಲ್ ಖಾದರ್ ಸಾಲೆತ್ತೂರು ಛೇರ್ಮನ್ ಆಗಿಯೂ, ಸಮಿತಿ ಸಂಚಾಲಕರಾಗಿ ರಿಫಾಯಿ ಮಂಗಳೂರು ಕಾರ್ಯಾಧ್ಯಕ್ಷರಾಗಿ ಆದಮ್ ಈಶ್ವರಮಂಗಿಲ, ನಿರ್ದೇಶಕರಾಗಿ ಸಯ್ಯಿದ್ ತ್ವಾಹಿರ್ ತಂಙಳ್, ಇಕ್ಬಾಲ್ ಸಿದ್ದಕಟ್ಟೆ, ನಜೀರ್ ಹಾಜಿ ಕೆಮ್ಮಾರ, ಮುಹಮ್ಮದ್ ಅಲಿ ಬ್ರೈಟ್, ಇಕ್ಬಾಲ್ ಕುಂದಾಪುರ, ಇಬ್ರಾಹಿಂ ಸಖಾಫಿ ಕೆದುಂಬಾಡಿ, ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ, ಜಲೀಲ್ ನಿಝಾಮಿ ಎಮ್ಮೆಮಾಡು, ಇಕ್ಬಾಲ್ ಕಾಜೂರು ಮತ್ತು ನ್ಯಾಷನಲ್ ಕ್ಯಾಬಿನೆಟ್ ಸಮಿತಿ ಸೇರಿದಂತೆ 101 ಸದಸ್ಯರ ಸಮಿತಿಯೊಂದನ್ನು ರಚಿಸಲಾಯಿತು.

ನವೆಂಬರ್ ತಿಂಗಳಲ್ಲಿ ಯುಎಇ ಯಾದ್ಯಂತ ಝೋನ್ ಮಟ್ಟದಲ್ಲಿ ನಡೆದ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಹ ಪ್ರತಿಭೆಗಳು ನ್ಯಾಷನಲ್ ಮಟ್ಟದ ಪ್ರತಿಭೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಕುಟುಂಬಗಳು ಮತ್ತು ಅನಿವಾಸಿ ಕನ್ನಡಿಗರು ಭಾಗವಹಿಸುವ ಈ ಕಾರ್ಯಕ್ರಮವು ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯಲಿದೆ.

ಕಿಡ್ಸ್, ಜೂನಿಯರ್, ಸಬ್ ಜೂನಿಯರ್, ಸೀನಿಯರ್, ಗರ್ಲ್ಸ್, ಲೇಡೀಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಕಿರಾ-ಅತ್, ಕನ್ನಡ, ಅರೇಬಿಕ್, ಮಲಯಾಳಂ ಹಾಡುಗಳು, ಕನ್ನಡ, ಅರೇಬಿಕ್, ಮಲಯಾಳಂ, ಇಂಗ್ಲಿಷ್, ಭಾಷಣ, ಪ್ರಬಂಧ, ಮೆಮೊರಿ ಟೆಸ್ಟ್, ರಸಪ್ರಶ್ನೆ, ಕೈಬರಹ,ದಫ್ಫ್ ಸ್ಪರ್ಧೆ, ಬುರ್ದಾ, ಚಿತ್ರಕಲೆ, ಔಟ್ ಒಫ್ ವೇಸ್ಟ್, ಅಡುಗೆ ಪಾಕ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಅತ್ಯಾಕರ್ಷಕ ಶೈಲಿಯಲ್ಲಿ ನಡೆಯಲಿದೆ. ಈಗಾಗಲೇ ವಿವಿಧ ಎಮಿರೇಟ್ಸ್ ಗಳಿಂದ ಹಲವಾರು ಕನ್ನಡಿಗ ಕುಟುಂಬಗಳು ನೋಂದಣಿ ಮಾಡಿಕೊಂಡಿದ್ದು ಕಾರ್ಯಕ್ರಮದ ಸಿದ್ದತೆಗಳು ಅಂತಿಮ ಹಂತದಲ್ಲಿದೆ. ಕನ್ನಡದ ಸಂಸ್ಕೃತಿ ಮತ್ತು ಸೌಂದರ್ಯವನ್ನು ಉಳಿಸಿ ಬೆಳಿಸಿ ನಡೆಸುವ ಈ ಕಾರ್ಯಕ್ರಮವು ಅನಿವಾಸಿ ಕನ್ನಡಿಗರಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲಿದೆ.

ಕಾರ್ಯಕ್ರಮದ ಯಶಸ್ವೀ ಕಾರ್ಯಾಚರಣೆಗಾಗಿ ಯುವ ಕಾರ್ಯಕರ್ತರನ್ನೊಳಗೊಂಡ ಉಪಸಮಿತಿಯನ್ನು ರಚಿಸಲಾಯಿತು.

ಉಪ ಸಂಚಾಲಕರುಗಳು : ಇಸ್ಮಾಯಿಲ್ ಮೂರ್ನಾಡು, ಅಶ್ರಫ್ ಮುಸ್ಲಿಯಾರ್ ಅಳಿಕೆ
ಕೋ ಆರ್ಡಿನೇಟರ್ಸ್ : ಮುಜೀಬ್ ಸಅದಿ ಅಜ್ಮಾನ್, ಕಲಂದರ್ ಕಬಕ, ರಫೀಕ್ ಜೆಪ್ಪು

ಪ್ರೋಗ್ರಾಮ್ ಕಂಟ್ರೋಲ್ : ಕೆ ಹೆಚ್ ಮುಹಮ್ಮದ್ ಸಖಾಫಿ, ರಹೀಮ್ ಕೊಡಿ, ಝೈನುದ್ದೀನ್ ಹಾಜಿ ಬೆಳ್ಳಾರೆ, ಉಸ್ಮಾನ್ ಹಾಜಿ, ಕರೀಂ ಮುಸ್ಲಿಯಾರ್ , ರಿಯಾಜ್ಹ್ ಕೊಂಡಂಗೇರಿ
ಫೈನಾನ್ಸ್ : ಅಬ್ದುಲ್ ಖಾದರ್ ಸಅದಿ ಅಜ್ಮಾನ್, ಕಮಾಲ್ ಅಂಬಲಮೊಗರು, ಜಮಾಲ್ ಬಾಯರ್ ಬರ್ದುಬೈ:
ಮೀಡಿಯಾ ಮತ್ತು ಪ್ರಚಾರ : ಇಲ್ಯಾಸ್ ಮದನಿ ಬರ್ಶಾ, ನಿಝಾಮ್ ಮದನಿ ಅಜ್ಮಾನ್, ಅಶ್ರಫ ಕುಕ್ಕಾಜೆ, ರಝಾಕ್ ಬುಸ್ತಾನಿ
ಪ್ರತಿಭೋತ್ಸವ ನಿರ್ವಹಣೆ : ಶಾಹುಲ್ ಹಮೀದ್ ಸಖಾಫಿ, ಕಬೀರ್ ಬಾಯಂಬಾಡಿ, ಮುಹಮ್ಮದ್ ಕುಞ ಸಖಾಫಿ, ರಹೀಮ್ ಕೊಡಿ, ಅಲಿ ಕನ್ಯಾನ ಮತ್ತು ಎಲ್ಲಾ ಝೋನಲ್ ಕಾರ್ಯದರ್ಶಿಗಳು
ಫುಡ್ : ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮೊಗರು, ಸಿದ್ದೀಕ್ ಪಾಣೆಮಂಗಳೂರು, ಖದರ್ ಕೊಡಿಪ್ಪಾಡಿ
ಪ್ರಶಸ್ತಿ ಮತ್ತು ಪತ್ರ: ಇಬ್ರಾಹಿಂ ಮದನಿ, ಸಮದ್ ಬೀರಾಳಿ, ಲತೀಫ್ ತಿಂಗಳಾಡಿ, ನವಾಜ್ಹ್ ಕೋಟೆಕಾರು, ಮಜೀದ್ ಮಂಜನಾಡಿ, ಇಸ್ಮಾಯಿಲ್ ಮದನಿ ನಗರ, ನಿಯಾಜ್ಹ್ ಬಸರ.

ಬ್ಯಾಡ್ಜ್, ಬ್ಯಾನರ್ : ಅಜೀಜ್ಹ್ ಸಖಾಫಿ ಕೊಂಡಂಗೇರಿ, ಫಾರೂಕ್ ನಾಳ, ಅರಾಫತ್ ನಾಪೋಕ್ಲು, ನವಾಜ್ಹ್ ತುರ್ಕಳಿಕೆ, ಮನ್ಸೂರ್, ಫಾರೂಕ್

ಫ್ಯಾಮಿಲಿ ಕೋ ಆರ್ಡಿನೇಷನ್ : ಅಶ್ರಫ್ ಲತೀಫಿ, ಇಕ್ಬಾಲ್ ಮಂಜನಾಡಿ, ಹೈದೆರ್ ಸ್ವಾಲಿಹ್ ಅಜ್ಮಾನ್, ಹುಸೈನ್ ಇನೋಳಿ, ಅಮೀರ್ ಸುಹೈಲ್ ಅಬುಧಾಬಿ, ಅಶ್ರಫ್ ಮುಸ್ಲಿಯಾರ್ ಅಬುಧಾಬಿ

ಐಟಿ ನಿರ್ವಹಣೆ: ಶೌಕತ್ ಅಲಿ ಶಾರ್ಜಾ, ಶಹೀರ್ ಕರಾಯ, ಅಶ್ರಫ್ ಸರಳೀಕಟ್ಟೆ, ಅಲಿ ಕನ್ಯಾನ

ಸಾರಿಗೆ ನಿರ್ವಹಣೆ :
ಅಜ್ಮಾನ್ : ತಾಜುದ್ದೀನ್ ಉಳ್ಳಾಲ, ಹಕೀಮ್ ಸವಣೂರು
ಶಾರ್ಜಾ : ಅಬ್ದುಲ್ ರಝಾಕ್ ಉಸ್ತಾದ್, ರಫೀಕ್ ತೆಕ್ಕಾರು
ದುಬೈ ನಾರ್ತ್ : ಇಸ್ಮಾಯಿಲ್ ಮದನಿ ನಗರ
ದುಬೈ ಸೌತ್ : ಷರೀಫ್ ಹೊಸ್ಮಾರು
ಅಬುಧಾಬಿ : ಉಮ್ಮರ್ ಈಶ್ವರಮಂಗಿಲ
ಅಲ್ ಐನ್ : ರಹೀಮ್ ಸಕಲೇಶಪುರ

ಕೆಸಿಎಫ್ ರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ನಿರ್ವಣೆಯಲ್ಲಿ ನಡೆಯುವ ಪ್ರತಿಭೋತ್ಸವದ ಯಶಸ್ವಿಗಾಗಿ ಕೈ ಜೋಡಿಸಲು ಶಿಕ್ಷಣ ವಿಭಾಗದ ಚೇರ್ಮಾನ್ ಕೆ ಹೆಚ್ ಮುಹಮ್ಮದ್ ಸಖಾಫಿ ಹಾಗೂ ಕನ್ವಿನರ್ ಅಬ್ದುಲ್ ರಹೀಮ್ ಕೋಡಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!