ಕಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ವತಿಯಿಂದ ರಾಷ್ಟ್ರೀಯ ಮಟ್ಟದ ಆರು ಝೋನ್ ಗಳನ್ನು ( ಮಸ್ಕತ್, ಸೊಹಾರ್, ಸೀಬ್, ನಿಝ್ವ, ಬುರೈಮಿ, ಸಲಾಲ)
ಒಳಗೊಂಡ ಪ್ರತಿಭೋತ್ಸವವು ಮತ್ತು ಕೆಸಿಎಫ್ ಅಂತರಾಷ್ಟ್ರೀಯ ಸಮ್ಮಿಟ್ ಜಾಬಿರ್ ಫಾರ್ಮ್ ಹೌಸ್ ಬರ್ಕದಲ್ಲಿ ಇನ್ ಶಾ ಅಲ್ಲಾ ಜನವರಿ 11 ರಂದು ನಡೆಯಲಿದೆ. ಕೆಸಿಎಫ್ ಒಮಾನ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ಇವರ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದ ಉದ್ಘಾಟನೆ ಯನ್ನು ದಕ್ಷಿಣ ಕನ್ನಡ ಉಡುಪಿ ಸಂಯುಕ್ತ ಖಾಝಿ ಶೈಖುನಾ ತಾಜುಲ್ ಫುಖಹಾ಼ಹ಼್
ಅಲ್ ಹಾಜ್ ಬೇಕಲ ಇಬ್ರಾಹಿಮ್ ಮುಸ್ಲಿಯಾರ್ ಇವರು ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತಾಜುಲ್ ಫುಖಹಾಹ್ ಬೇಕಲ ಉಸ್ತಾದ್ ಮತ್ತು ಡಾಕ್ಟರೇಟ್ ಪದವಿ ಪಡೆದ ಝೈನಿ ಉಸ್ತಾದ್ ರವರಿಗೆ ಸನ್ಮಾನ ಹಾಗೂ ಅಸ್ಸುಫ ತರಗತಿಯ ಎರಡನೇ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ವಿತರಣೆ ಕಾರ್ಯಕ್ರಮವು ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹುಮಾನ್ಯ ಹಂಝ ಸಖಾಫಿ ಉಸ್ತಾದ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಈಶ್ವರಮಂಗಿಲ, ಕೊಶಾಧಿಕಾರಿ ಹಾಜಿ ಶೈಖ್ ಬಾವ ಮಂಗಳೂರು, ಸಂಘಟನಾ ಅಧ್ಯಕ್ಷ ಡಾ. ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ ಉಸ್ತಾದ್, ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ,
ಎಜುಕೇಶನ್ ವಿಭಾಗದ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್, ಎಜುಕೇಶನ್ ವಿಭಾಗದ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ, ಇಹ್ಸಾನ್ ವಿಭಾಗದ ಕಾರ್ಯದರ್ಶಿ ರಹೀಮ್ ಸಅದಿ, ಪ್ರಕಾಶನ ವಿಭಾಗದ ಕಾರ್ಯದರ್ಶಿ ಪಿ.ಪಿ. ನಝೀರ್ ಹಾಜಿ ಕಾಶಿಪಟ್ನ, ಆಡಳಿತ ವಿಭಾಗದ ಅಧ್ಯಕ್ಷ ಉಮರ್ ಸಖಾಫಿ ಮಿತ್ತೂರು, ಆಡಳಿತ ವಿಭಾಗ ಕಾರ್ಯದರ್ಶಿ ಹುಸೈನ್ ಮುಸ್ಲಿಯಾರ್ ಎಮ್ಮೆಮ್ಮಾಡ್, ಸಾಂತ್ವನ ವಿಭಾಗದ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಸದಸ್ಯರಾದ ಅಝೀಝ್ ಮುಸ್ಲಿಯಾರ್ ಮಲೇಷ್ಯಾ, ಉಸ್ಮಾನ್ ಹಾಜಿ ದುಬೈ, ಅಲಿ ಮುಸ್ಲಿಯಾರ್ ಬಹರೈನ್ ಇವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಫ್ಯಾಮಿಲಿ ಮೀಟ್ ಮತ್ತು ಮಹಿಳೆಯರ ಮತ್ತು ಮಕ್ಕಳ ವಿಭಾಗದ ಸ್ಪರ್ಧಾತ್ಮಕ ಕಾರ್ಯಕ್ರಮ ನಡೆಯಲಿದೆ .















ಇನ್ನಷ್ಟು ಸುದ್ದಿಗಳು
‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು
ಅನಿವಾಸಿಗಳಿಗೆ ಭಾರಿ ಹೊಡೆತ; ಪಾಸ್ಪೋರ್ಟ್ ದರಗಳಲ್ಲಿ ಗಣನೀಯ ಹೆಚ್ಚಳ- ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿ
ಗಲ್ಫ್ ಸೇರಿದಂತೆ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ‘ಏರ್ ಸುವಿಧಾ’ ಡಿಕ್ಲರೇಷನ್ ಕಡ್ಡಾಯ
ಪಾಸ್ಪೋರ್ಟ್ ಮತ್ತು ಪೌರತ್ವದ ವಿರೋಧಾಭಾಸ – ಜಗತ್ತಿಗೆ ಭಾರತೀಯ, ಸ್ವದೇಶದಲ್ಲೇ ಪ್ರಶ್ನಾರ್ಹ?
ಆಧಾರ್ ಮತ್ತು ಪಾಸ್ಪೋರ್ಟ್ ಪೌರತ್ವ ದಾಖಲೆಯಲ್ಲ: ಹಾಗಾದ್ರೆ ನಿಜವಾದ ದಾಖಲೆ ಯಾವುದು?
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ