janadhvani

Kannada Online News Paper

ಕರ್ನಾಟಕ ಮುಸ್ಲಿಮ್ ಜಮಾಅತ್ ಘೋಷಣಾ ಸಮಾವೇಶ-ಸೌದಿ ಕೆಸಿಎಫ್ ನಿಂದ ಪ್ರಚಾರಕ್ಕೆ ಚಾಲನೆ

ರಿಯಾದ್: ಕನ್ನಡಿಗ ಮುಸಲ್ಮಾನರ ಬಹುಜನ ಸಂಘ “ಮುಸ್ಲಿಮ್ ಜಮಾಅತ್” ಇಂದಿನ  ಕರ್ನಾಟಕಕ್ಕೆ  ಬಹಳ ಅವಶ್ಯಕತೆಯಿದ್ದು, ಇದರ ಘೋಷಣಾ ಸಮಾವೇಶವು ಜನವರಿ 27 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದರ ಅಂತಾರಾಷ್ಟ್ರೀಯ ಮಟ್ಟದ ಪ್ರಚಾರ ಅಭಿಯಾನಕ್ಕೆ ಸೌದಿ ಅರೇಬಿಯಾದಲ್ಲಿ ಚಾಲನೆ ನೀಡಲಾಯ್ತು.

ಸಭೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಘೋಷಣಾ ಸಮಾವೇಶದ ಪ್ರಚಾರದ ರೂಪುರೇಶೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು. ಕೆ.ಸಿ.ಎಫ್ ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾಧ್ಯಂತ ಇದರ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಿದೆ ಎಂದು ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ರವರು ತಿಳಿಸಿದರು.

ಸಭೆಯಲ್ಲಿ ಉಮರ್ ಫಾರೂಖ್ ಕಾಟಿಪಳ್ಳ ಪ್ರ.ಕಾರ್ಯದರ್ಶಿ ಕೆ.ಸಿ.ಎಫ್ , ಹಾಗೂ ಮದೀನಾ, ಜೆದ್ದಾ , ರಿಯಾದ್ , ದಮ್ಮಾಮ್ ಮತ್ತು ಅಲ್- ಗಸೀಮ್ ಪ್ರಾಂತ್ಯದ ಕೆ.ಸಿ.ಎಫ್ ನಾಯಕರು ಭಾಗವಹಿಸಿದ್ದರು.

error: Content is protected !! Not allowed copy content from janadhvani.com