ಬೆಂಗಳೂರು ಡಿ.28 : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫಡರೇಶನ್ SSF ಮೆಜೆಸ್ಟಿಕ್ ಡಿವಿಶನ್ ಇದರ ವಾರ್ಷಿಕ ಮಹಾ ಸಭೆ ಮೆಜೆಸ್ಟಿಕ್ ಡಿವಿಶನ್ ಅಧ್ಯಕ್ಸರಾದ ಲತೀಫ್ ಆಡೋರ ರವರ ಅಧ್ಯಕ್ಷತೆ ಯಲ್ಲಿ ಹೋಟೆಲ್ ಚಿಕನ್ ಕೌಂಟಿಯಲ್ಲಿ ನಡೆಯಿತು.
ಕಾರ್ಯಕ್ರಮವು ಶಾಫಿ ಸಅದಿ ಉಸ್ತಾದರ ದುಆದೊಂದಿಗೆ ಆರಂಭಗೊಂಡು, ಮೆಜೆಸ್ಟಿಕ್ ಡಿವಿಶನ್ ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್ ಸುಳ್ಯ ಸ್ವಾಗತಿಸಿ .ಅಲ್ ಮದೀನಾ ಮಂಜನಾಡಿ ಇದರ ಬೆಂಗಳೂರು ಉಸ್ತುವಾರಿಯಾದ ಅಬ್ದುಲ್ ಗಫೂರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯದರ್ಶಿ ಜಮಾಲುದ್ದೀನ್ ವಾರ್ಷಿಕ ವರದಿಯನ್ನು ವಾಚಿಸಿ ,ಕೋಶಾಧಿಕಾರಿ ನೌಫಲ್ ಆಡೋರ ಲೆಕ್ಕ ಪತ್ರ ಮಂಡಿಸಿದರು . ಸಭೆಗೆ ನೀರೀಕ್ಷಕರಾಗಿ ಆಗಮಿಸಿದ ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ , ಕಾರ್ಯಕ್ರಮದ ನಿರ್ವಾಹಕರಾಗಿ ಆಗಮಿಸಿದ್ದ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ಲಾ ಹಾಗೂ ಜಿಲ್ಲಾ ಉಪಾಧ್ಯಕ್ಸರಾದ ಶಾಫಿ ಸಅದಿ ಉಸ್ತಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು .
ಡಿವಿಶನ್ ವ್ಯಾಪ್ತಿಗೊಳಪಟ್ಟ ಕೆ .ಆರ್ .ಮಾರ್ಕೆಟ್, ಗಾಂಧಿನಗರ ಮತ್ತು ಮಲ್ಲೇಶ್ವರಂ ಎಂಬ ಮೂರು ನೂತನ ಸೆಕ್ಟರ್ ಗಳನ್ನೂ ಘೋಷಿಸಿ, ಸೆಕ್ಟರ್ ನ ನೂತನ ಸಮಿತಿಯನ್ನು ರಚಿಸಲಾಯಿತು.
ಆ ಬಳಿಕ ಡಿವಿಶನ್ ಹಳೆಯ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಗೆ ಚಾಲನೆ ನೀಡಲಾಯಿತು. ಪ್ರಸಕ್ತ ಕಾರ್ಯಕ್ರಮದಲ್ಲಿ ಹಾರಿಸ್ ಮದನಿ ಗುಟ್ಟಹಳ್ಳಿ ಹನೀಫ್ ಮದನಿ ಕುಂಡಾಜೆ , ಝುಬೈರ್ ಫಾಲಿಲಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಂಸು ಗಾಂಜಾಲ್ ಧನ್ಯವಾದವಿತ್ತರು .
ವರದಿ : ಶಂಸು ಗಾಂಜಾಲ್
(ಜೊತೆ ಕಾರ್ಯದರ್ಶಿ SSF ಮೆಜೆಸ್ಟಿಕ್ ಡಿವಿಶನ್ )