janadhvani

Kannada Online News Paper

ಪ್ರವಾದಿ ನಿಂದನೆ : ವಿಟ್ಲ ಠಾಣೆಯಲ್ಲಿ ದೂರು ಸಲ್ಲಿಕೆ

ವಿಟ್ಲ : ಪೋಲಿಸ್ ಠಾಣೆಯಲ್ಲಿ ಅಲ್-ಆಮೀನ್ ಯೂತ್ ಫೆಡರೇಶನ್ (ರಿ) AYF ಕೊಡಂಗಾಯಿ ವತಿಯಿಂದ ದಿನಾಂಕ 29-12-2018 ರಂದು ಸುವರ್ಣ ನ್ಯೂಸ್ ಚಾನೆಲ್ ನ ನಿರೂಪಕ ಸಂಘಪರಿವಾರದ ಮನಸ್ಥಿತಿಯನ್ನು ಹೊಂದಿರುವ_ ಅಜಿತ್ ಹನುಮಕ್ಕನವರ್ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಠಾಣಾಧಿಕಾರಿ ಯಲ್ಲಪ ಎಸ್, ಇವರ ಮೂಲಕ ದೂರು ಸಲ್ಲಿಸಲಾಯಿತು.

ಈ ನಿಯೋಗದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಮ್.ಎಸ್ ಮಹಮ್ಮದ್, ಅಲ್-ಆಮೀನ್ ಯೂತ್ ಫೆಡರೇಶನ್ ಇದರ ಅಧ್ಯಕ್ಷರಾದ ಅಬ್ದುಲ್ ರಝಕ್ ಎಮ್.ಕೆ, ಸಮಿತಿ ಸಂಚಾಲಕರಾದ ಅಝರುದ್ದೀನ್ ಅರಫಾ, IMCC ಇದರ ಕಾರ್ಯಕಾರಿ ಸಮಿತಿ ಸದಸ್ಯರಾದ ಇಯಾಬ್ ಎಮ್.ಕೆ, ಅಲ್ಲದೇ ಕೂಲಿ ಕಾರ್ಮಿಕರ ಸಂಘ ವಿಟ್ಲ ಪಡ್ನೂರು ವಲಯದ ಅಧ್ಯಕ್ಷರಾದ ಅಬ್ದುಲ್ ಕುಂಞ ಕೆ.ಎಮ್, KCL ಇದರ ಸಕ್ರಿಯ ಸದಸ್ಯ ರಫೀಕ್ ಆರ್ ಎಮ್, ಹಾಗೂ ಇನ್ನಿತರ ನಾಡಿನ ಹಲವಾರು ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು

error: Content is protected !! Not allowed copy content from janadhvani.com