janadhvani

Kannada Online News Paper

ಮಂಗಳೂರಿನಲ್ಲಿ VFS ಕಚೇರಿ ತೆರೆಯಲು ಸಂಸದ ಬ್ರಿಜೇಶ್ ಚೌಟ ಅವರಿಗೆ ಮನವಿ

ಮಂಗಳೂರು: ಮಂಗಳೂರು, ಉಡುಪಿ ಮೂಲದವರು ಸೌದಿ ಅರೇಬಿಯಾಕ್ಕೆ ವಿಸಿಟಿಂಗ್, ರೆಸಿಡೆನ್ಸಿ ಹಾಗೂ ಫ್ಯಾಮಿಲಿ ವೀಸಾ ಮೂಲಕ ಪ್ರಯಾಣಿಸಬೇಕಾದವರು ಪಾಸ್‌ಪೋರ್ಟ್ ಸಬ್ಮಿಟ್ (ವೀಸಾ ಸ್ಟಾಂಪಿಂಗ್) ಮಾಡಲು ಕಡ್ಡಾಯವಾಗಿ VFS ಕಚೇರಿಗೆ ತೆರಳಬೇಕಾಗುತ್ತದೆ.

ಸದ್ಯ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಾತ್ರ ಮತ್ತು ಕೇರಳದಲ್ಲಿ ಮಾತ್ರ VFS ಕಚೇರಿ ಇರುವುದರಿಂದ ಕರಾವಳಿಯ ಜನರು 400 ಕಿ.ಮೀ ದೂರ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಇದೆ. ಅಲ್ಲಿ ಫಿಂಗರ್ ಪ್ರಿಂಟ್, ಫೋಟೋ ಮತ್ತು ಇನ್ನಿತರ ದಾಖಲೆಗಳನ್ನು ನೀಡಿ ಪಾಸ್‌ಪೋರ್ಟ್ ಸಬ್ಮಿಟ್ ಮಾಡಬೇಕಾಗುತ್ತದೆ. ಒಂದುವೇಳೆ ಡಾಕ್ಯುಮೆಂಟ್‌ನಲ್ಲಿ ಸಣ್ಣ ‘ಮಿಸ್ ಮ್ಯಾಚ್’ ಆದರೆ ಮತ್ತೊಮ್ಮೆ VFS ಗೆ ಹೋಗಬೇಕಾಗುತ್ತದೆ.

ಇದರಿಂದ ಪುಟ್ಟ ಮಕ್ಕಳು, ವೃದ್ಧರು ಮತ್ತು ಮಹಿಳೆಯರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.

ಈ ಸಮಸ್ಯೆಯನ್ನು ದ.ಕ. ಜಿಲ್ಲೆಯ ಸಂಸದ *ಬ್ರಿಜೇಶ್ ಚೌಟ* ಅವರ ಗಮನಕ್ಕೆ ತಂದಾಗ, ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಇಮೇಲ್ ಮೂಲಕ ಸಂದೇಶ ತಲುಪಿಸಿ, VFS ವಿಷಯದಲ್ಲಿ ಮಧ್ಯಪ್ರವೇಶಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.

ಗಲ್ಫ್ ಕನ್ನಡಿಗ ಇಸ್ಹಾಕ್ ಫಜೀರ್* ಅವರ ಮನವಿಯನ್ನು ಅಡ್ವಕೇಟ್ ಅಸ್ಗರ್ ಮುಡಿಪು ಅವರು ಸಂಸದ ಬ್ರಿಜೇಶ್ ಚೌಟ ಅವರಿಗೆ ಸಲ್ಲಿಸಿದರು.

ಇದನ್ನೂ ಓದಿರಿ...