ದಮ್ಮಾಂ: ಕರ್ನಾಟಕದ ಪ್ರತಿಷ್ಠಿತ ಧಾರ್ಮಿಕ ಶೈಕ್ಷಣಿಕ ಸಂಸ್ಥೆಯಾದ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಸೌದಿ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಇತ್ತೀಚೆಗೆ ಆನ್‌ಲೈನ್ ಮೂಲಕ ನಡೆಯಿತು.ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ಖಾದಿರ್ ಸಖಾಫಿ ಉಸ್ತಾದ್ ಅಧ್ಯಕ್ಷತೆ ವಹಿಸಿದರು.
ಸೌದಿ ಅರೇಬಿಯಾ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಪೊಯ್ಯತಬೈಲ್ ಅವರ ದುಆದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಸ್ವಾಗತ ಭಾಷಣದೊಂದಿಗೆ ವಾರ್ಷಿಕ ವರದಿಯನ್ನು ಮಂಡಿಸಿದರು.
ಅಲ್ ಮದೀನ ಅಕಾಡೆಮಿಕ್ ಡೈರೆಕ್ಟರ್ ಅಬೂ ಸ್ವಾಲಿಹ್ ಅಝ್ಹರಿ ಸಭೆಯನ್ನು ಉದ್ಘಾಟಿಸಿದರು. ಬಳಿಕ ಸಂಸ್ಥೆಯ ಡೈರೆಕ್ಟರ್ ಮುಹಮ್ಮದ್ ಕುಂಞಿ ಅಂಜದಿ ಸಂಸ್ಥೆಯ ವಿವಿಧ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.
ಲೆಕ್ಕಪತ್ರವನ್ನು ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಮುಸ್ತಫ ಲತೀಫಿ ಮಂಡಿಸಿದರು.
ನಂತರ ನೂತನ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಸಮಿತಿಯ ಪದಾಧಿಕಾರಿಗಳು:
*ಸಲಹಾ ಸಮಿತಿ: ಅಬ್ದುಲ್ ರಹ್ಮಾನ್ ಮದನಿ ಪೊಯ್ಯತಬೈಲ್ (ಅಧ್ಯಕ್ಷರು),
ಉಸ್ಮಾನ್ ಮಂಜನಾಡಿ( ಕನ್ವೀನರ್), ಸೌದಿ ರಾಷ್ಟ್ರೀಯ ಸಮಿತಿ
ಅಧ್ಯಕ್ಷರಾಗಿ ಮುಸ್ತಫ ಲತೀಫಿ,
ಉಪಾಧ್ಯಕ್ಷರಾಗಿ ಇಕ್ಬಾಲ್ ಮದನಿ ತಾಯೀಫ್, ಬಾವಾ ಹಾಜಿ ಹಫ್ರ್ ಅಲ್ ಬಾತಿನ್,
ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಪಡಿಕಲ್,
ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಬಸರ ರಿಯಾದ್, ಆಬಿದ್ ಕಂಡಕ್ಕರೆ ಕೊಡಗು, ಕೋಶಾಧಿಕಾರಿಯಾಗಿ ಅಬ್ದುಲ್ ಗಫೂರ್ ಸಜಿಪ,
ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ನಾಸಿರ್ ಮರ್ಝೂಖಿ ಬಲಮುರಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ; ಸತ್ತಾರ್ ಉಚ್ಚಿಲ
ಸುವೈಸ್ ದೀರಾ, ಬಷೀರ್ ಸಅದಿ ಕನ್ನoಗಾರ್, ಅಬ್ದುಲ್ ಖಾದರ್ ಹಾಜಿ ಕನ್ನಂಗಾರ್ ನೌಶಾದ್ ಹರಾರ್ , ಮೊಹಮ್ಮದ್ ಅಲಿ , ಹಸೈನಾರ್ ಮದನಿ, ಸಿದ್ದೀಕ್ ಕೋಡಿ, ತಾಜುದ್ದೀನ್ ಮದೀನಾ, ಅಝೀಝ್ ಸಹದಿ, ಅಬೂಬಕ್ಕರ್ ಮದನಿ
ಯಝೀದ್ ಮರಿಕ್ಕಳ , ಅಬ್ಬಾಸ್ ಬಂಡಸಾಲೆ, ನಾಸಿರ್ ಎಚ್ ಕಲ್, ಅಬ್ದುಲ್ಲ ಹಾಜಿ
ನವಾಫ್ ಕನ್ಯಾನ, ಇಕ್ಬಾಲ್ ಮಳ್ಳೂರ್ , ಬಷೀರ್ ತೋಟಾಲ್, ಎನ್. ಎಸ್.ಅಬ್ದುಲ್ಲ ಹಾಜಿ, ಇಸ್ಮಾಯಿಲ್ ಮೊರ್ಲ, ಅಝೀಝ್ ಉಸ್ತಾದ್ ಕುತ್ತಾರ್ , ರಶೀದ್ ವ ಳವೂರ್, ಹಾರಿಸ್ ಕಜೂರ್ ಇಸ್ಹಾಕ್ ಪಜೀರ್, ಸಿದ್ದೀಕ್ ಮೊರ್ಲ, ಉಮರುಲ್ ಫಾರೂಕ್ ಮುಸ್ಲಿಯಾರ್ ಎಮ್ಮೆಮಾಡು, ಅಬ್ದುಲ್ ರಝಾಕ್ ಕಮಿಸ್ ಮುಸೈತ್ ಮುಂತಾದವರನ್ನು ಆರಿಸಲಾಯಿತು. ಅಬ್ದುಲ್ ನಾಸಿರ್ ಮರ್ಝೂಖಿ ಧನ್ಯವಾದವಿತ್ತರು.
















ಇನ್ನಷ್ಟು ಸುದ್ದಿಗಳು
ಅಕ್ಟೋಬರ್ 6ರಂದು ಸಮಸ್ತ ಸೆಂಟಿನರಿ ಜಿಲ್ಲಾ ಅಸೆಂಬ್ಲಿ
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್‌ಲೈನ್ ಸಂವಾದ