janadhvani

Kannada Online News Paper

ಸುವರ್ಣನ್ಯೂಸ್ ನಲ್ಲಿ ಪ್ರವಾದಿ ನಿಂದನೆ :ಕುಂತೂರು ಜಮಾಅತ್ ನಿಂದ ಕೇಸು ದಾಖಲು

ಪೆರಾಬೆ: ಡಿಸೆಂಬರ್ 27 ,2018 ಗುರುವಾರದಂದು ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಸುವರ್ಣ ನ್ಯೂಸ್ ನ ಅಜಿತ್ ಹನುಮಕ್ಕನವರ್ ಎಂಬವರು ಪ್ರವಾದಿ ಮುಹಮ್ಮದ್ (ಸ)ಅವರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ಕುಂತೂರು ಜಮಾಅತ್ ವತಿಯಿಂದ ಕೇಸ್ ದಾಖಲಿಸಲಾಯಿತು.

ವಿನಾಕಾರಣ ಯಾವುದೇ ಪ್ರಚೋದನೆ ಇಲ್ಲದೆ ಚರ್ಚೆಯ ನಡುವೆ ಪ್ರವಾದಿ(ಸ)ರ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡಿದ್ದು ಮಾತ್ರವಲ್ಲ ಒಂದು ಇಡೀ ಸಮುದಾಯವನ್ನು ಬಾಂಬ್ ಹಾಕುವವರು ಎಂಬಂತೆ ಬಣ್ಣಿಸಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇಂತಹ ಕಾರ್ಯಕ್ರಮಗಳು ಹಾಗೂ ಹೇಳಿಕೆಗಳಿಂದ ಸಮಾಜದ ಶಾಂತಿ ಕೆಡುವ ಮತ್ತು ಕೋಮುಗಲಭೆಗಳು ನಡೆಯುವ ಅಪಾಯ ಹೆಚ್ಚಿದೆ.

ಈ ಮೂಲಕ ಅಜಿತ್ ಹನುಮಕ್ಕನವರ್ ಅವರು ಭಾರತೀಯ ದಂಡ ಸಂಹಿತೆಯ 153 A ಅನ್ವಯ ಅಪರಾಧ ಎಸಗಿದ್ದಾರೆ. ಆದುದರಿಂದ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಲಾಯಿತು.
ನಿಯೋಗದಲ್ಲಿ ಜಮಾಅತ್ ಅಧ್ಯಕ್ಷರಾದ ಅನೀಸ್ ನೂಜಿಲ, ಸಿರಾಜ್ ಎರ್ಮಾಳ,ಶಂಸುದ್ದೀನ್ ಕೋಚಕಟ್ಟೆ, ಯು.ಕೆ ಹಮೀದ್ ಕುಂತೂರು ,ನಝೀರ್ ಕೋಚಕಟ್ಟೆ,ಫಯಾಝ್ ಝೆಡ್.ಬಿ,ಸಮದ್ ಕುಂತೂರು,ರಿಝ್ವಾನ್, ಲತೀಫ್, ರಾಝಿಕ್, ಶರೀಫ್ ಪೂಂಜ,ಹಂಝ ಪಿ.ಎ.,ಮುಹಮ್ಮದಲಿ ಕೋಚಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com