ಮುಡಿಪು: ಎಸ್ಸೆಸ್ಸೆಫ್ ಮುದುಂಗಾರು ಕಟ್ಟೆ ಶಾಖೆ 22 ನೇ ವಾರ್ಷಿಕೋತ್ಸವದ ಅಂಗವಾಗಿ ಎರಡು ದಿವಸಗಳ ಧಾರ್ಮಿಕ ಪ್ರವಚನ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಮುದುಂಗಾರುಕಟ್ಟೆ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.
ಮುದುಂಗಾರುಕಟ್ಟೆ ಜಮಾಅತ್ ಅಧ್ಯಕ್ಷ ಯು.ಎಂ.ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಖತೀಬ್ ಹೈದರ್ ಅಲಿ ಹಿಮಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಡಿಪು ಗೌಸಿಯಾ ಮಸ್ಜಿದ್ ಮುದರಿಸ್ ಆಸಿಫ್ ಸಖಾಫಿ ಅಲ್ ಅಝ್ಹರಿ ಸಂದೇಶ ಭಾಷಣ ಮಾಡಿದರು.
ಹಾಫಿಳ್ ಅನ್ವರ್ ಅಲಿ ಸಖಾಫಿ ಶಿರಿಯ ಹಾಗೂ ಸಂಗಡಿಗರು ಬುರ್ದಾ ಆಲಾಪನೆ ಮಾಡಿದರು. ಮಾಸ್ಟರ್ ಶಮ್ಮಾಸ್ ಮಂಗಳೂರು ನಅತ್ ಆಲಾಪನೆ ಮಾಡಿದರು.ಮುಹಮ್ಮದ್ ಅಲಿ ಕಾಸರಗೋಡು ಹಾಗೂ ಸಿನಾನ್ ಕಾಸರಗೋಡು ಇಶಲ್ ವಿರುನ್ನ್ ಸುಮಧುರ ಮದ್’ಹ್ ಗೀತೆ ಆಲಾಪಿಸಿದರು.
ಸಯ್ಯಿದ್ ಸಿ.ಟಿ.ಯಂ ಕುಂಞಿಕೋಯ ತಂಙಳ್ ಬೋಳಿಯಾರ್ ದುಆ: ನೆರವೇರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಸಚಿವರಾದ ಯು ಟಿ ಖಾದರ್,ಯು ಕೆ ಅಬೂಬಕರ್ ಮದನಿ, ಪಿ ಕೆ ಮುಹಮ್ಮದ್ ಮದನಿ ಸಂಬಾರತೋಟ, ಎಂ ಎಸ್ ಉಮರ್ ಸಅದಿ ಮುದುಂಗಾರು ಕಟ್ಟೆ, ಸಿ.ಎಚ್ ಅಬೂಬಕರ್ ಮದನಿ,ಎಂ ಎಂ ಕೆ ಮುಹಮ್ಮದ್ ಮುಸ್ಲಿಯಾರ್ ಕಡ್ವಾಯಿ,ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ,ಶರೀಫ್ ಸಅದಿ ಸಂಬಾರತೋಟ, ಸಿಎಚ್ ಮುಹಮ್ಮದ್ ಹಾಜಿ ಬಾಳೆಪುಣಿ, ಅಬ್ದುಲ್ ಅಝೀಝ್ ಎಚ್ ಕಲ್, ಇಕ್ಬಾಲ್ ಮದ್ಯನಡ್ಕ,ಅಬೂಬಕರ್ ಸಖಾಫಿ ಬಾಳೆಪುಣಿ, ಅಬ್ದುಸ್ಸಮದ್ ಮದನಿ, ಹೈದರ್ ಕೈರಂಗಳ,ಉಮರ್ ಇರಾ, ಸಿ ಎಚ್ ಅಬ್ದುಲ್ ರಹ್ಮಾನ್, ಹಸನ್ ಕುಂಞಿ ಹಾಜಿ, ಯು ಯಂ ಅಬ್ದುಲ್ ರಹ್ಮಾನ್, ಸಿ ಯಂ ಉಸ್ಮಾನ್, ಯು ಯಂ ಬಶೀರ್ ಹಾಜಿ, ಅಬ್ಬಾಸ್ ಎನ್ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸದಸ್ಯರಾದ ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ ಸ್ವಾಗತಿಸಿ, ಎಸ್ಸೆಸ್ಸೆಫ್ ಮುದುಂಗಾರುಕಟ್ಟೆ ಶಾಖೆ ಕಾರ್ಯದರ್ಶಿ ಇಕ್ಬಾಲ್ ವಂದಿಸಿದರು.