janadhvani

Kannada Online News Paper

ಎಸ್ಸೆಸ್ಸೆಫ್ ಜಯನಗರ ಘಟಕದ ನೂತನ ಪದಾಧಿಕಾರಿಗಳು

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಜಯನಗರ ಘಟಕದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪವಿತ್ರ ರಬೀವುಲ್ ಅವ್ವಲ್ ಮಾಸದ ಮೌಲಿದ್ ಮಜ್ಲಿಸ್ ಕಾರ್ಯಕ್ರಮವು ದಿನಾಂಕ 06-12-2018 ರಂದು ಘಟಕದ ಪ್ರಧಾನ ಕಾರ್ಯದರ್ಶಿ ರವೂಫ್ ರವರ ನಿವಾಸದಲ್ಲಿ ನಡೆಯಿತು.

ಸಭೆಯ ಉದ್ಘಾಟನೆಯನ್ನು ಘಟಕದ ಕೋಶಾಧಿಕಾರಿ ನಝೀರ್ ಅಹ್ಮದ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮಸೀದಿಯ ಮುಅಲ್ಲಿಮರಾದ ಸಿದ್ದೀಖ್ ಸಖಾಫಿ ಯವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘಟನೆಯ ಮಹತ್ವ ಹಾಗೂ ಕಾರ್ಯಾಚರಣೆಯ ಬಗ್ಗೆ ಸವಿವರವಾದ ಉಪನ್ಯಾಸ ನೀಡಿದರು.

2017-18 ನೇ ಸಾಲಿನ ವರದಿ ಹಾಗು ಲೆಕ್ಕ ಪತ್ರವನ್ನು ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರವೂಫ್ ಪಿ.ಎಚ್. ಮಂಡಿಸಿದರು. ಸದ್ರಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚನೆಯ ನೇತೃತ್ವವನ್ನು ಸಿದ್ದೀಖ್ ಸಖಾಫಿ ವಹಿಸಿದ್ದರು. ಸ್ಥಳೀಯ ಉದ್ಯಮಿ ಅಬ್ದುಲ್ ಹಮೀದ್ ಆಳಕ್ಕೆ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮುಸ್ತಾಕ್ ಅಹ್’ಮದ್ ಬಜ್ಪೆ ಕಾರ್ಯಕ್ರಮವನ್ನು ನಿರೂಪಿಸಿದರು.

2018 -19 ನೇ ಸಾಲಿನ ನೂತನ ಸಮಿತಿ ವಿವರ :
ಪದಾಧಿಕಾರಿಗಳು:
ಅಧ್ಯಕ್ಷರು – ಮುಸ್ತಾಕ್ ಅಹ್’ಮದ್

ಉಪಾಧ್ಯಕ್ಷರು – ಸುಲ್ತಾನ್ ಹಾಗೂ ಸಾಜಿದ್

ಪ್ರ. ಕಾರ್ಯದರ್ಶಿ – ಅಬ್ದುಲ್ ರವೂಫ್ ಪಿ ಎಚ್

ಜೊತೆಕಾರ್ಯದರ್ಶಿ – ಫಾಯಿಝ್ ಹಾಗೂ ಮೊಹಮ್ಮದ್ ಅಶ್ರಫ್, ಕೋಶಾಧಿಕಾರಿ – ನಝೀರ್ ಅಹ್ಮದ್.

ಕಾರ್ಯಕಾರಿ ಸಮಿತಿ ಸದಸ್ಯರು:

ಅಝೀಂ ಭಟ್ಕಳ, ಅಝ್ಗರ್ ಅಲಿ .ಪಿ.ಎಸ್,ಅಬ್ದುಲ್ ರಹಿಮಾನ್, ಮೊಹಮ್ಮದ್ ಹನೀಫ, ಇಬ್ರಾಹಿಂ ಎ.ಪಿ, ಮುಹಮ್ಮದ್ ನಾಸಿರ್, ಅಬ್ದುಲ್ ರಹಿಮಾನ್, ಇಲ್ಯಾಸ್, ಹಿದಾಯತ್ತುಲ್ಲಾ .ಕೆ, ಅಬ್ದುಲ್ ರಹಿಮಾನ್, ಸಾದಿಕ್ .ಕೆ.ಎಸ್, ಜಲೀಲ್ .ಕೆ.ಹೆಚ್, ವಾಜಿದ್, ಜುನೈದ್, ಮುಹಮ್ಮದ್ ಸಮೀರ್ .ಬಿ., ಶಿಯಾಬ್, ಅಶ್ರಫ್ ಅಲಿ, ಎನ್.ಎಸ್. ಅಬ್ದುಲ್ಲಾ,ಸಿಬ್ಲಿನ್ ಮುಂತಾದವರನ್ನು ಆಯ್ಕೆ ಮಾಡಲಾಯ್ತು.

ಘಟಕದ ಕೋಶಾಧಿಕಾರಿ ನಝೀರ್ ಅಹ್ಮದ್ ಸ್ವಾಗತಿಸಿದರು .ಕೊನೆಯಲ್ಲಿ ಘಟಕದ ಜೊತೆ ಕಾರ್ಯದರ್ಶಿ ಫಾಯಿಝ್
ರವರು ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com