janadhvani

Kannada Online News Paper

ಕನಕ್ಟ್ 2018 ಸಾಮುದಾಯಿಕ ಸಮ್ಮಿಲನ:ವಿ ಟೀಂ (V TEAM) ಸದಸ್ಯರ ಸಿದ್ದತಾ ಸಭೆ

ಪುತ್ತೂರು: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್, ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಎಸ್ಸೆಸ್ಸೆಫ್, ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೇ ಬರುವ ಡಿಸೆಂಬರ್ ಮೂರನೇ ತಾರಿಕಿನಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುವ ಕನಕ್ಟ್ 2018ಸಾಮುದಾಯಿಕ ಸಮ್ಮಿಲನದ ಯಶಸ್ಸಿಗಾಗಿ
ವಿ ಟೀಂ ಸದಸ್ಯರ ಸಿದ್ದತಾ ಸಭೆಯನ್ನು ಮಾಣಿಯ ದಾರುಲ್ ಇರ್ಷಾದ್ ಸಂಸ್ಥೆಯಲ್ಲಿ ಕ್ಯಾಪ್ಟನ್ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ಅಧ್ಯಕ್ಷತೆಯಲ್ಲಿ ನಡೆಯಿತು.

ಕನಕ್ಟ್ ಇ ಟೀಂ ಸಂಚಾಲಕ ಹಾಫಿಳ್ ಯಾಕೂಬ್ ಸಅದಿ ನಾವೂರು ತರಬೇತಿ ನೀಡಿದರು. ಎಸ್ ವೈ ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಮಾತನಾಡಿದರು. ಸಭೆಯಲ್ಲಿ ಡಿಸೆಂಬರ್ ಮೂರನೇ ದಿನ ಬೆಳಿಗ್ಗೆಯಿಂದ ರಾತ್ರಿ ತನಕ ನಡೆಯುವ ಕಾರ್ಯಕ್ರಮದ ಬಗ್ಗೆ ಅವಲೋಕಿಸಿ ವಿ ಟೀಮಿನ ವಿವಿಧ ವಿಭಾಗಗಳಿಗೆ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.ಸಭೆಯಲ್ಲಿ ದ.ಕ ಜಿಲ್ಲಾ ಎಸ್ಸೆಸ್ಸೆಫ್ ಉಪಾಧ್ಯಕ್ಷ ಇಬ್ರಾಹಿಮ್ ಸಖಾಫಿ ಸೆರ್ಕಳ, ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ, ನಿಕಟ ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮೀರ್ ಸುಳ್ಯ, ಎಸ್ ವೈ ಎಸ್ ನ ಇಕ್ಬಾಲ್ ಬಪ್ಪಳಿಗೆ, ಕಾದರ್ ಕಾವೂರು, ಎಸ್ಸೆಸ್ಸೆಫ್ ಜಿಲ್ಲಾ ನಾಯಕರಾದ ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ,ಅಬ್ದುಲ್ ಜಬ್ಬಾರ್ ಕಣ್ಣೂರು,ಹಮೀದ್ ತಲಪಾಡಿ, ಹಮೀದ್ ಬೋಂದೆಲ್,ಬದ್ರುದ್ದೀನ್ ಅಡ್ಯಾರ್ ಮುಂತಾದವರು ಉಪಸ್ಥಿತರಿದ್ದರು. ಇಸ್ಮಾಯಿಲ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

error: Content is protected !! Not allowed copy content from janadhvani.com