ಖ್ಯಾತ ಉದ್ಯಮಿಯಾಗಿ ಕರಾವಳಿಯ ಹೆಮ್ಮೆಯ ಯುವ ಮುಂದಾಳುವಾಗಿರುವ ಸಮಾಜ ಸೇವಕ, ಕಾರುಣ್ಯ ಕರುಣಾಳು ಅಬ್ದುಲ್ಲತೀಫ್ ಗುರುಪುರ ಅವರಿಗೆ ‘ಕರುನಾಡ ಸೌಹಾರ್ದ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾನ್ಯ ಲತೀಫ್ ಗುರುಪುರ ಅವರು ಅನಿ ಟ್ರೇಡಿಂಗ್ ಕಂಪೆನಿ ಸ್ಥಾಪಿಸಿ ಅದರಲ್ಲಿ ಯಶಸ್ವಿಯಾಗಿ ಹಲವಾರು ಮಂದಿಗೆ ಉದ್ಯೋಗವಕಾಶ ಕಲ್ಪಿಸಿ ಕೊಟ್ಟುದಲ್ಲದೆ ಬಡ ಹೆಣ್ಮಕ್ಕಳ ಮದುವೆ, ಬಡವರಿಗೆ ದಿನಸಿ ಕಿಟ್, ರಮಝಾನ್ ಕಿಟ್ ಹಾಗೂ ಆರ್ಥಿಕ ಸಹಾಯವನ್ನು ನೀಡುತ್ತಾ ಬರುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಧರ್ಮಜಾತಿ ಬೇಧಮನ್ಯೆ ಅಪಾರ ಕುಟುಂಬಗಳಿಗೆ ಆಸರೆಯಾಗಿದ್ದರು.
ಬಹುಮುಖ ಸೇವೆಗಳಿಂದ ಜನಾನುರಾಗಿಯಾಗಿ ಸುಖ್ಯಾತರಾದ ಲತೀಫ್ ಗುರುಪುರ ಅವರ ಈ ಸೇವೆಗಳನ್ನು ಗುರುತಿಸಿ ಇದೇ ಡಿಸೆಂಬರ್ 26 ರಂದು ಪುತ್ತೂರಿನ ಸುದಾನ ಮೈದಾನದಲ್ಲಿ ನಡೆದ ನೂರೇ ಅಜ್ಮೀರ್ ಹಾಗೂ ‘ಮಾದಕತೆ ಮಾರಣಾಂತಿಕ’ ಎಂಬ ವಿಶೇಷ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಸೇರಿದ್ದ ದಶಸಹಸ್ರ ಸಂಖ್ಯೆಯ ಜನಸ್ತೋಮದಲ್ಲಿ ರಾಜ್ಯಮಟ್ಟದ ಗಣ್ಯರ ಉಪಸ್ಥಿಯೊಂದಿಗೆ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಹಿಂದೂಸ್ಥಾನ್ ಗೋಲ್ಡ್ ಕಂಪೆನಿ ಮಾಲಕರಾದ ಸಿ.ಕೆ. ಮೌಲಾ ಶರೀಫ್, ಖ್ಯಾತ ಉದ್ಯಮಿ ವೆಂಕಟೇಶ್ ಬೆಂಗಳೂರು ಮುಂತಾದ ಗಣ್ಯಾತಿ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.