janadhvani

Kannada Online News Paper

ಸೌದಿ: ಭಾರತೀಯ ಚಾಲಕನ ಹತ್ಯೆ- ಈಜಿಪ್ಟ್ ಪ್ರಜೆಯ ಮರಣದಂಡನೆ ಜಾರಿ

ಬಹಳ ಹೊತ್ತು ಕಳೆದರೂ, ಕೋಣೆಗೆ ಹಿಂತಿರುಗದ ಹಿನ್ನೆಲೆಯಲ್ಲಿ, ಸ್ನೇಹಿತರು ನಡೆಸಿದ ಹುಡುಕಾಟದಲ್ಲಿ ಅವರ ಟ್ರಕ್‌ನಲ್ಲಿ ಚಾಕುವಿನಿಂದ ಇರಿತಕ್ಕೊಳಗಾಗಿ ಕೊಲ್ಲಲ್ಪಟ್ಟಿದ್ದರು.

ರಿಯಾದ್: ಭಾರತೀಯ, ಮಲಯಾಳಿ ಚಾಲಕರೊಬ್ಬರನ್ನು ಕೊಂದ ಈಜಿಪ್ಟ್ ಪ್ರಜೆಗೆ ಸೌದಿ ಅರೇಬಿಯಾದಲ್ಲಿ ಮರಣದಂಡನೆಯನ್ನು ಜಾರಿಗೊಳಿಸಲಾಗಿದೆ. ಜಿದ್ದಾದ ಅಲ್ಝಾಮಿರ್ ಜಿಲ್ಲೆಯಲ್ಲಿ ಮಲಪ್ಪುರಂನ ಕೊಟ್ಟಕ್ಕಲ್, ಪರಪ್ಪೂರ್ ಸೂಪಿಬಜಾರ್ ಮೂಲದ ನಂಬಿಯಾಡತ್ ಕುಂಞಲವಿ (45) ಎಂಬವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಈಜಿಪ್ಟ್ ಪ್ರಜೆ ಅಹ್ಮದ್ ಫುವಾದ್ ಅಲ್ಸಯೀದ್ ಅಲ್ಲುವೈಸಿಗೆ ಇಂದು ಮಕ್ಕಾ ಪ್ರಾಂತ್ಯದಲ್ಲಿ ಮರಣದಂಡನೆಯನ್ನು ಜಾರಿಗೊಳಿಸಲಾಗಿದೆ.

ಈ ಘಟನೆಯು ಆಗಸ್ಟ್ 1, 2021 ರಂದು ನಡೆದಿದೆ. ಕುಂಞಲವಿ ಅವರು ಜಿದ್ದಾದ ಅಲ್ ಮಮ್ಲಕಾದಲ್ಲಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಬಹಳ ಹೊತ್ತು ಕಳೆದರೂ, ಕೋಣೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ನಡೆಸಿದ ಹುಡುಕಾಟದಲ್ಲಿ ರಸ್ತೆಬದಿಯಲ್ಲಿ ಅವರ ಟ್ರಕ್ ಪತ್ತೆಯಾಗಿದೆ. ಟ್ರಕ್‌ನಲ್ಲಿ ಚಾಕುವಿನಿಂದ ಇರಿತಕ್ಕೊಳಗಾಗಿ ಕೊಲ್ಲಲ್ಪಟ್ಟಿದ್ದರು. ಭದ್ರತಾ ಇಲಾಖೆ ನಡೆಸಿದ ತನಿಖೆಯ ವೇಳೆ ಈಜಿಪ್ಟ್ ಪ್ರಜೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಜಿದ್ದಾ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ.

ಆರೋಪಪಟ್ಟಿ ಪ್ರಕಾರ, ಈಜಿಪ್ಟ್ ಪ್ರಜೆಯು ಕುಂಞಲವಿಯೊಂದಿಗೆ ವಾಹನವನ್ನು ಹತ್ತಿ, ಅವರ ದೇಹದ ವಿವಿಧ ಭಾಗಗಳಿಗೆ ಹರಿತವಾದ ವಸ್ತುವಿನಿಂದ ಇರಿದು, ಅವರ ಮರಣಕ್ಕೆ ಕಾರಣವಾಯಿತು ಮತ್ತು ಹಣವನ್ನು ದೋಚಿ ಆರೋಪಿ ಪರಾರಿಯಾದನು. ಆರೋಪಿಯು ತಪ್ಪೊಪ್ಪಿಕೊಂಡಿದ್ದು, ಸುಪ್ರೀಂ ಕೋರ್ಟ್ ನೀಡಿದ ಮರಣದಂಡನೆಯನ್ನು ಜಾರಿಗೊಳಿಸಲು ರಾಜಮನೆತನ ಆದೇಶವನ್ನು ನೀಡಿದೆ. ಇದರಿಂದಾಗಿ ಮರಣದಂಡನೆ ವಿಧಿಸಲಾಯಿತು ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

error: Content is protected !! Not allowed copy content from janadhvani.com