ರಿಯಾದ್: ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ, ಉದ್ಯೋಗ ನೀಡುವ ವ್ಯಕ್ತಿಯನ್ನು ಪ್ರಾಯೋಜಕ Sponsor (ಕಫೀಲ್) ಎಂದು ಬಣ್ಣಿಸಲು ಅನುಮತಿಸಲಾಗುವುದಿಲ್ಲ, ಬದಲಿಗೆ ಉದ್ಯೋಗದಾತ Employer ಪದವನ್ನು ಬಳಸಲಾಗುವುದು. ಹೊಸ ಪ್ರಸ್ತಾವನೆಯು ವಾಣಿಜ್ಯ ಸಚಿವಾಲಯದಿಂದ ಬಂದಿದೆ.
ಸೌದಿ ಅರೇಬಿಯಾದಲ್ಲಿ, ಉದ್ಯೋಗದಾತರನ್ನು ಹಳೇ ಕಾಲದಿಂದಲೇ ಕಫೀಲ್ (ಪ್ರಾಯೋಜಕ) ಎಂದು ಕರೆಯಲಾಗುತ್ತಿತ್ತು. ಆದರೆ, ಇನ್ಮುಂದೆ ಪ್ರಾಯೋಜಕ ಪದವನ್ನು ಉದ್ಯೋಗದಾತ ಎಂದು ಬದಲಾಯಿಸಬೇಕು. ಈ ನಿಟ್ಟಿನಲ್ಲಿ ಸರಕಾರಿ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಕುರಿತು ಸಚಿವಾಲಯವು ಸೌದಿ ಚೇಂಬರ್ಸ್ ಫೆಡರೇಶನ್‌ಗೆ ಪತ್ರ ಕಳುಹಿಸಿದೆ.
ವೇತನವನ್ನು ನೀಡುವ ಪುರುಷ ಅಥವಾ ಮಹಿಳೆ ಉದ್ಯೋಗದಾತ, ವೇತನಕ್ಕಾಗಿ ದುಡಿಯುವವನು ಉದ್ಯೋಗಿ. ಸೌದಿ ಅರೇಬಿಯಾದಲ್ಲಿ ಸಾಮಾನ್ಯ ಭಾರತೀಯರು ಸಹಿತವಿರುವ ವಲಸಿಗರು ಯುಗಯುಗಗಳಿಂದ ಪಾಲಿಸಿಕೊಂಡು ಬಂದಿರುವ ಅಧೀನತೆ ಹೊಸ ನಿರ್ದೇಶನದಿಂದ ಬದಲಾಗಲಿದೆ.
ಕೆಲಸಗಾರ ಮತ್ತು ಮಾಲೀಕರ ನಡುವಿನ ಒಪ್ಪಂದದ ಸಂಬಂಧವನ್ನು ಸುಧಾರಿಸುವ ಯೋಜನೆಯನ್ನು ಈ ಹಿಂದೆ ಪ್ರಾರಂಭಿಸಲಾಯಿತು. ಯೋಜನೆಯ ಮುಖ್ಯ ಉದ್ದೇಶಗಳು ಉದ್ಯೋಗಗಳನ್ನು ಬದಲಾಯಿಸುವ ಸ್ವಾತಂತ್ರ್ಯ, ಮರು-ಪ್ರವೇಶ ಮತ್ತು ಅಂತಿಮ ನಿರ್ಗಮನದ ಸೌಲಭ್ಯ, ಈ ಯೋಜನೆಯು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಒಡೆತನದಲ್ಲಿದೆ. ಹತ್ತು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಈಗಾಗಲೇ ಯೋಜನೆಯ ಭಾಗವಾಗಿದ್ದಾರೆ.