ಬೆಳ್ತಂಗಡಿ : ಹಳೆಯ ಪ್ರಕರಣವೊಂದರ ಹೆಸರಿನಲ್ಲಿ, NIA ಅಧಿಕಾರಿಗಳು ಮತ್ತು ಬೆಳ್ತಂಗಡಿ ಪೊಲೀಸರು ಬೆಳ್ತಂಗಡಿಯ ಸೋಣಂದೂರಿನ ಸುಹೈಲ್ ಪಾಶ ಎಂಬ ಅಮಾಯಕ ಮುಸ್ಲಿಂ ಯುವಕನನ್ನು ಇತ್ತೀಚಿಗೆ ವಿಚಾರಣೆಯ ಹೆಸರಿನಲ್ಲಿ ಕರೆದೊಯ್ದು, ಬಂದೂಕಿನಿಂದ ಆತನ ಮರ್ಮಾಂಗಕ್ಕೆ ಹೊಡೆದು ಗಂಭೀರ ಹಲ್ಲೆ ನಡೆಸಿದ ನಂತರ ದಾರಿಯಲ್ಲಿ ಬಿಟ್ಟು ಹೋದ ಪ್ರಕರಣಕ್ಕೆ ಸಂಬಂಧಿಸಿ ಯುವಕ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಈ ಬಗ್ಗೆ ಪೊಲೀಸ್ ದೌರ್ಜನ್ಯದ ವಿರುದ್ಧ ಜಿಲ್ಲೆಯ ರಾಜಕೀಯ ಸಾಮಾಜಿಕ ಮುಖಂಡರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ ಬಳಿಕ ಪೊಲೀಸ್ ವರಿಷ್ಠಾಧಿಕಾರಿಗಳು ಇಲಾಖಾ ತನಿಖೆಗೆ ಆದೇಶಿಸಿದ್ದರು, ನಂತರ ಕಾಟಾಚಾರದ ತನಿಖೆ ನಡೆಸಿದ ಇಲಾಖೆ ಡಿಸೆಂಬರ್ 31 ರಂದು ಪೊಲೀಸ್ ಅಧಿಕಾರಿಗಳ ತಂಡ ಸುಹೈಲ್ ಬೆಳ್ತಂಗಡಿಯಲ್ಲಿ ನಡೆಸುತ್ತಿರುವ ಜ್ಯೂಸ್ ಅಂಗಡಿ ಗೆ ತೆರಳಿ ದಾಖಲಿಸಿರುವ ದೂರನ್ನು ಹಿಂಪಡೆಯಲು ಅವನ ಮೇಲೆ ಮಾನಸಿಕ ಒತ್ತಡ ಹೇರಿ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ ಎಂದು SDPI ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ತಿಳಿಸಿದ್ದಾರೆ.
ಇದನ್ನು ಪ್ರಶ್ನಿಸಲು ಬಂದ ಸ್ಥಳೀಯ ಪಂಚಾಯತ್ ಸದಸ್ಯ ರೊಬ್ಬರ ವಿರುದ್ಧವೂ ಪೊಲೀಸರು ಕೇಸು ದಾಖಲಿಸುವುದಾಗಿ ಬೆದರಿಸಿರುತ್ತಾರೆ ಇದು ಖಂಡನೀಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ, ಬರವಣಿಗೆಯ ಮೂಲಕ ಸಹಿ ಹಾಕಿ ಕೊಡಬೇಕೆಂದು ಒತ್ತಡ ಹಾಕಿ ಯುವಕನ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿರುವುದಾಗಿ ಆರೋಪ ಕೇಳಿ ಬರುತ್ತಿದೆ . ಅಮಾನುಷವಾಗಿ ವರ್ತಿಸಿದ ಬೆಳ್ತಂಗಡಿ ಪೊಲೀಸರ ಕೃತ್ಯ ಗೂಂಡಾಗಿರಿಗೆ ಸಮಾನವಾಗಿದೆ, . ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರಿಗೆ ಅಕ್ಬರ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.