ಮದ್ದಡ್ಕ:ಎಸ್ ವೈ ಎಸ್ ಯುನಿಟ್ ಮಟ್ಟದ ಪ್ರಥಮ ಸದಸ್ಯತ್ವವನ್ನು ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಟಿಂಬರ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಯುನಿಟ್ ಮಟ್ಟದ ಸದಸ್ಯತ್ವವನ್ನು ಸಾಮಾಜಿಕ ಮುಂದಾಳು ಅಬ್ಬೋನು ಪಡೆಯುವ ಮೂಲಕ ಮದ್ದಡ್ಕ ಮಸೀದಿಯಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಸೀದಿ ಖತೀಬ್ ಹಾಫಿಳ್ ಮುಹಿನುದ್ದೀನ್ ಅಮ್ಜದಿ ಪ್ರಾರ್ಥನೆ ನಡೆಸಿದರು.ಕರ್ನಾಟಕ ಮುಸ್ಲಿಂ ಜಮಾಅತ್ ಗುರುವಾಯನಕೆರೆ ಸರ್ಕಲ್ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್, ಎಸ್ ವೈ ಎಸ್ ಬೆಳ್ತಂಗಡಿ ಝೋನ್ ನಾಯಕರಾದ ಜಮಾಲುದ್ದೀನ್ ಲತೀಫಿ, ಎಸ್ ಎಂ ಎ ರಾಜ್ಯ ಕಾರ್ಯದರ್ಶಿ NS ಉಮ್ಮರ್ ಮಾಸ್ಟರ್ , SYS ಮದ್ದಡ್ಕ ಮಾಜಿ ಅಧ್ಯಕ್ಷರಾದ ಎಂ ಎಚ್ ಅಬೂಬಕ್ಕರ್, HM ಹಸನಬ್ಬ,ಅಚ್ಚಬಾಕ,ಶರೀಫ್ ಲತೀಫಿ, ಇಬ್ರಾಹಿಂ ಮುಸ್ಲಿಯಾರ್, ಎಸ್ಸೆಸ್ಸೆಫ್ ಕಾರ್ಯಕರ್ತರಾದ ಇರ್ಷಾದ್, ರವೂಫ್ ಆಲಂದಿಲ ಮೊದಲಾದವರು ಉಪಸ್ಥಿತರಿದ್ದರು.