janadhvani

Kannada Online News Paper

ಅಲ್ ಮದೀನಾ ಮಂಜನಾಡಿ, ಸೌದಿ ರಾಷ್ಟ್ರೀಯ ಸಮಿತಿ ಅಸ್ಥಿತ್ವಕ್ಕೆ

ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಲ್ ಮಂಜನಾಡಿ ಇದರ ಸೌದಿ ರಾಷ್ಟ್ರೀಯ ಸಮಿತಿಯನ್ನು ಅಲ್ ಮದೀನಾ ರೂವಾರಿ ಶರಫುಲ್ ಉಲಮಾ ಶ್ಯೆಖುನಾ ಅಬ್ಬಾಸ್ ಉಸ್ತಾದ್  ರವರ ನೇತೃತ್ವದಲ್ಲಿ ಜಿದ್ದಾ ಶರಫಿಯ್ಯಾದ ಕೆಸಿಎಫ್ ಭವನದಲ್ಲಿ ರಚಿಸಲಾಯಿತು. ಆರಂಭದಲ್ಲಿ ಅಲ್ ಮದೀನ ಜಿದ್ದಾ ಘಟಕದ ವತಿಯಿಂದ ಸಂಸ್ಥೆಯ ಬೆಳ್ಳಿಹಬ್ಬದ ಪ್ರಚಾರ ಸಭೆಯೂ ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ  ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿದ್ದಾ ಘಟಕ ಪ್ರಧಾನ ಕಾರ್ಯದರ್ಶಿ  ಅಬ್ದುಲ್ ಸಲಾಂ ಎಣ್ಮೂರು ಸ್ವಾಗತ ಭಾಷಣ ಮಾಡಿದರು. ಸಭೆಯ ಉದ್ಘಾಟನೆಯನ್ನು ಅಲ್ ಮದೀನಾ ದಮ್ಮಾಮ್ ವಲಯ ಅಧ್ಯಕ್ಷ N S ಅಬ್ದುಲ್ಲಾ ಮಂಜನಾಡಿ ನಿರ್ವಹಿಸಿ ಸಂಧರ್ಭೋಚಿತವಾಗಿ ಮಾತನಾಡಿದರು.

ಅಲ್-ಮದೀನಾ ದಮ್ಮಾಮ್ ವಲಯ ಪ್ರ ಕಾರ್ಯದರ್ಶಿ M G ಇಖ್ಬಾಲ್ ಮಲ್ಲೂರು  ಇವರು ಸ್ಥಾಪನೆ ಪರಿಚಯವನ್ನು ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ -ಮದೀನಾ ಸಂಸ್ಥೆಯ ಸಾರಥಿ, ಸಮಸ್ತ ಕೇಂದ್ರ ಮುಶಾವರ ಅಂಗ, ಸುನ್ನೀ ಕೋರ್ಡಿನೇಶನ್ ಸಮಿತಿ ಅಧ್ಯಕ್ಷರು, ಕರ್ನಾಟಕ ಜಂಈಯತುಲ್ ಉಲಮಾ ಉಪಾಧ್ಯಕ್ಷರು, ಕೊಡಗು ಜಿಲ್ಲಾ ಜಂಈಯತುಲ್ ಉಲಮಾ ಅಧ್ಯಕ್ಷರೂ ಆದ ಶರಫುಲ್ ಉಲಮಾ ಶ್ಯೆಖುನಾ ಅಬ್ಬಾಸ್ ಉಸ್ತಾದ್ ಸಿಲ್ವರ್ ಜುಬಿಲೀಗಳಂತಹಾ ಸಮ್ಮೆಳನಗಳಿಂದ ಅದೆಷ್ಟೋ ಸಮಾಜ ಸೇವೆಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಇದರಿಂದ ಬಡವರಿಗೆ ಹಾಗೂ ಸ್ಥಾಪನೆಗೆ ಹಲವಾರು ಉಪಕಾರವಾಗುತ್ತದೆ. ಇಂತಹ ಸಮ್ಮೇಳನ ಹಾಗೂ ಸ್ಥಾಪನೆಗಳಿಗೆ ಸಹಾಯ ಮಾಡುವವರಿಗೆ ಅಲ್ಲಾಹನು ಖಂಡಿತವಾಗಿಯೂ ಅವರ ಜೀವನದಲ್ಲಿ ಬರ್ಕತ್ ನೀಡುವನು ಎಂದು ಹೇಳುತ್ತಾ ಬಹಳ ನಿಷ್ಕಳಂಕವಾಗಿ ಪ್ರಾರ್ಥಿಸಿದರು.

  ಅಧ್ಯಕ್ಷ   N S ಅಬ್ದುಲ್ಲಾ

ಪ್ರಧಾನ ಕಾರ್ಯದರ್ಶಿ MG ಇಕ್ಬಾಲ್ ಮಲ್ಲೂರು 

ಅಬ್ದುರ್ರಹ್ಮಾನ್ ಮದನಿ ಮಂಜನಾಡಿ ರಿಯಾದ್

ಡಿ ಕೆ ಎಸ್ ಸಿ ಜಿದ್ದಾ ಘಟಕ ಅಧ್ಯಕ್ಷರಾದ  ಸಯ್ಯಿದ್ ಝಕರಿಯಾ ಸಖಾಫಿ ತಂಙಳ್, ನಾವುಂದ, ಅಬ್ದುರ್ರಹ್ಮಾನ್ ಅಲ್-ಬುಖಾರಿ ತಂಙಳ್ ಉಚ್ಚಿಲ ಅಲ್-ಮದೀನಾ ದಮ್ಮಾಮ್ ಸಿಲ್ವರ್ ಜೂಬಿಲೀ ಚೇರ್ಮಾನ್  ಬಶೀರ್ ತೋಟಲ್
ಅಲ್-ಮದೀನಾ ದಮ್ಮಾಮ್ ಯುನಿಟ್ ಪ್ರಕಾರ್ಯದರ್ಶಿ  ಉಸ್ಮಾನ್ ಮಂಜನಾಡಿ ಹಾಗೂ ಅಲ್ ಮದೀನಾ ಮಂಜನಾಡಿಯ ಅಬ್ದುಲ್ ರವೂಫ್ ಮುಸ್ಲಿಯಾರ್ ಜಾರಿಗೆಬೈಲು  ಕೆಸಿಎಫ್ ಜಿದ್ದಾ ಝೋನ್ ಅಧ್ಯಕ್ಷರು  ಹನೀಫ್ ಸಖಾಫಿ ಸಾಲೆತ್ತೂರು
ಅಲ್-ಮದೀನಾ ಜಿದ್ದಾ ಸಮಿತಿ ಅಧ್ಯಕ್ಷರು ಹೈದರ್ ಹಾಜಿ
ಅಲ್-ಮದೀನಾ ಜಿದ್ದಾ ಸಮಿತಿ ಕೋಶಾಧಿಕಾರಿ ಮೊಇದೀನ್ ಹಾಜಿ  ವೇದಿಕೆಯಲ್ಲಿದ್ದರು.

ಸಭೆಯಲ್ಲಿ ಶೈಖುನಾ ಉಸ್ತಾದರನ್ನು ಅಲ್ ಮದೀನಾದ ಹಿರಿಯ ನಾಯಕರು ಶಾಲು ಹೊದಿಸಿ ಗೌರವಿಸಿದರರು. ನಂತರ ಶೈಖುನಾ ರವರು ಅಧಿಕ್ರತವಾಗಿ ಅಲ್ ಮದೀನಾ ರಾಷ್ಟ್ರೀಯ ಅಧ್ಯಕ್ಷರಾಗಿ N S ಅಬ್ದುಲ್ಲಾ ಮಂಜನಾಡಿ, ಪ್ರಧಾನ ಕಾರ್ಯದರ್ಶಿಯಾಗಿ MG ಇಕ್ಬಾಲ್ ಮಲ್ಲೂರು ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ ಮದನಿ ಮಂಜನಾಡಿ ರಿಯಾದ್ ಇವರನ್ನು ಆಯ್ಕೆ ಮಾಡಿದರು.

ಕೊನೆಯಲ್ಲಿ  ಮುಹಮ್ಮದ್ ಕಲ್ಲರ್ಬೆ ಯವರು ಧನ್ಯವಾದ. ಸಮರ್ಪಿಸಿದರು

error: Content is protected !! Not allowed copy content from janadhvani.com