janadhvani

Kannada Online News Paper

ಎಸ್ಸೆಸ್ಸೆಫ್ ಪಾಳ್ಯತಡ್ಕ ಯುನಿಟ್ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ.

ಈಶ್ವರಮಂಗಳ (ಜನಧ್ವನಿ ವಾರ್ತೆ):ಎಸ್ ಎಸ್ ಎಫ್ ಪಾಳ್ಯತಡ್ಕ ಶಾಖೆ ಇದರ ವಾರ್ಷಿಕ ಮಹಾಸಭೆಯು 2018 ನವೆಂಬರ್ 22 ರಂದು ಸಂಜೆ 7.00 ಗಂಟೆಗೆ ಸರಿಯಾಗಿ ಹುಸೈನ್ ಜೌಹರಿ ಇವರ ಅಧ್ಯಕ್ಷತೆಯಲ್ಲಿ ಈಶ್ವರಮಂಗಳ ತೈಬಾ ಸೆಂಟರಿನಲ್ಲಿ ನಡೆಯಿತು.

ಅಧ್ಯಕ್ಷರಾದ ಹುಸೈನ್ ಜೌಹರಿಯವರ ದುಆದೊಂದಿಗೆ ಸಭೆಯು ಪ್ರಾರಂಭವಾಯಿತು. ಕಾರ್ಯದರ್ಶಿ ರವೂಫ್ ಚೋಯ್ಸ್ ಸ್ವಾಗತ ಕೋರಿದರು. ಉಮರ್ ಸಅದಿ ಸಭೆಯನ್ನು ಉದ್ಘಾಟಿಸಿ. ಸೆಕ್ಟರ್ ಪ್ರತಿನಿಧಿ ಶಫೀಕ್ ಬಿ.ಸಿ ಇವರ ಸಾನಿಧ್ಯದಲ್ಲಿ ಕಾರ್ಯದರ್ಶಿ ರವೂಫ್ ಚೋಯ್ಸ್ ಕಳದ ವರ್ಷದ ವರದಿ ವಾಚಿಸಿದರು ಹಾಗೂ ಸಲ್ಮಾನ್ ಬಿ.ಸಿ ಲೆಕ್ಕ ಪತ್ರ ಮಂಡಿಸಿದರು ನಂತರ ಎಲ್ಲರ ಒಪ್ಪಿಗೆಯೊಂದಿಗೆ ಅನುಮೋದಿಸಲಾಯಿತು. ನಂತರ SSF ಪಾಳ್ಯತಡ್ಕ ಇದರ 2018-19 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಯನ್ನು ರಚಿಸಲಾಯಿತು. 15 ಸದಸ್ಯರನ್ನೊಳಗೊಂಡ ಸಮೀತಿಗೆ ಶಿಹಾಬುದ್ದೀನ್ ಸಖಾಫಿ ಅಧ್ಯಕ್ಷರಾಗಿ, ಸಲ್ಮಾನ್ ಅಹ್ಮದ್ ಬಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ರವೂಫ್ ಚೋಯ್ಸ್ ಕೋಶಾಧಿಕಾರಿ ಯನ್ನಾಗಿ ಆಯ್ಕೆ ಮಾಡಲಾಯಿತು. ತೈಬಾ ಸೆಂಟರ್ ಮುದರ್ರಿಸ್ ದಾವೂದುಲ್ ಹಕೀಂ ಸಖಾಫಿ ನೂತನ ಕಾರ್ಯಕಾರಿ ಸಮೀತಿಯನ್ನು ಅಭಿನಂದಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಂತರ ಪಾಳ್ಯತಡ್ಕ ಯುನಿಟ್ ಇದರ ಕಡತಗಳನ್ನು ಹೊಸ ಸಮೀತಿಗೆ ಹಸ್ತಾಂತರಿಸಲಾಯಿತು.
ನೂತನ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಕೆಲವು ಉಪದೇಶಗಳನ್ನು ನೀಡಿದರು. ಕೊನೆಯಲ್ಲಿ ಕಾರ್ಯದರ್ಶಿ ಸಲ್ಮಾನ್ ಅಹ್ಮದ್ ಬಿ.ಸಿ ಇವರ ಧನ್ಯವಾದಗಳೊಂದಿಗೆ ಸಭೆಯನ್ನು ಕೊನೆಗೊಳಿಸಲಾಯಿತು.

2018-19 ನೇ ಸಾಲಿನ ನೂತನ ಪದಾಧಿಕಾರಿಗಳು

ಅಧ್ಯಕ್ಷರು: ಶಿಹಾಬುದ್ದೀನ್ ಸಖಾಫಿ
ಪ್ರಧಾನ ಕಾರ್ಯದರ್ಶಿ: ಸಲ್ಮಾನ್ ಅಹ್ಮದ್ ಬಿ.ಸಿ
ಕೋಶಾಧಿಕಾರಿಗಳು: ರವೂಫ್ ಚೋಯ್ಸ್

ಉಪಾಧ್ಯಕ್ಷರು: ಹುಸೈನ್ ಜೌಹರಿ &
ಹಾಫಿಲ್ ಸಿನಾನ್ ಬಿ.ಸಿ

ಜೊತೆಕಾರ್ಯದರ್ಶಿಗಳು: ಸಾದಾತ್ & ಅಬ್ದುಲ್ ಜಲೀಲ್.

ಕ್ಯಾಂಪಸ್ ಕಾರ್ಯದರ್ಶಿಗಳು: ಜುಝೈರ್ ಡಿ.ಸಿ

ಕಾರ್ಯಕಾರಿ ಸಮಿತಿ ಸದಸ್ಯರು:
ಉಮರ್ ಸಅದಿ
ಸಲೀಂ ಝುಹ್ರಿ
ಸ್ವಾಲಿಹ್ ಸಖಾಫಿ
ಸಿನಾನ್ ಕತ್ರಿಬೈಲು
ಶಫೀಕ್ ಮುಂಡ್ಯ
ಸಿದ್ದೀಕ್ ಕತ್ರಿಬೈಲು
ಝುಹೈರ್

error: Content is protected !! Not allowed copy content from janadhvani.com