ಅಜ್ಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಜ್ಮಾನ್ ಝೋನ್ ಯು.ಎ.ಇ ಇದರ ವತಿಯಿಂದಿ ಬ್ರಹತ್ ಮೀಲಾದ್ ಸಮಾವೇಶ ಅಜ್ಮಾನ್ ಸುನ್ನಿ ಸೆಂಟರ್ ನಲ್ಲಿ ವಿಜೃಂಭಣೆಯಿಂದ ನಡೆಯಿತು.“ಇಲೈಕಾ ಯಾ ರಸೂಲಲ್ಲಾಹ್” ಘೋಷಣೆಯಡಿ ಕೆ.ಸಿ.ಎಫ್ ನ್ಯಾಷನಲ್ ಯು.ಎ.ಇ ಹಮ್ಮಿಕೊಂಡ ಈದ್ ಮಿಲಾದ್ ಕ್ಯಾಂಪೈನ್ ಭಾಗವಾಗಿ ನಡೆದ ಈ ಸಮಾರಂಭದಲ್ಲಿ ಸ್ವಾಗತ ಸಮೀತಿ ಚೈಯರ್ಮಾನ್ ಮುಜೀಬ್ ಸಅದಿ ಅಧ್ಯಕ್ಷತೆ ವಹಿಸಿದ್ದರು. ಐ.ಸಿ.ಎಫ್ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಬಷೀರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ರಬೀವುಲ್ ಅವ್ವಲ್ ತಿಂಗಳ ಮಹತ್ವದ ಬಗ್ಗೆ ವಿವರಿಸಿದರು. ಸ್ವಾಗತ ಸಮೀತಿ ಕನ್ವೀನರ್ ಲತೀಫ್ ತಿಂಗಳಾಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಸಂದೇಶ ಜಾಥಾ ಹೆಸರಿನಲ್ಲಿ ನಡೆಯುವ ಅನಿಸ್ಲಾಮಿಕ ಮ್ಯೂಸಿಕ್ ಹಾಡುಗಳು, ಅನ್ಯ ಧರ್ಮದವರನ್ನು ಕೆರಳಿಸುವ ರೀತಿಯಲ್ಲಿ ನಡೆಯುವ ಅತಿರೇಕದ ವರ್ತನೆಗಳು ಇದು ಪ್ರವಾದಿಯವರ ಸುಂದರ ಸಂದೇಶಗಳಿಗೆ ನಾವು ನೀಡುತ್ತಿರುವ ಕಪ್ಪು ಚುಕ್ಕೆಯಾಗಿದೆ ಎಂದು ತನ್ನ ಮಾತಿನ ಮಧ್ಯೆ ಗಂಭೀರವಾಗಿಯೇ ಹೇಳಿದರು.
ಈದ್ ಮಿಲಾದ್ ಪ್ರತಿಭೋತ್ಸವದಲ್ಲಿ ವಿಜೇತರಾದ ಪ್ರತಿಭೆಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕೊನೆಗೆ ಶಿಕ್ಷಣ ವಿಭಾಗದ ಚೈರ್ಮಾನ್ ಅಬೂಬಕ್ಕರ್ ಸಿದ್ದೀಕ್ ಅಮಾನಿ ಧನ್ಯವಾದ ಹೇಳಿದರು. ಅಜ್ಮಾನ್ ಝೋನ್ ರೈಟ್ ಟೀಮ್ ಕಾರ್ಯಕರ್ತರು ಸಭೆಯನ್ನು ನಿಯಂತ್ರಿಸಿದರು.