ಬಹರೈನ್, ನ. 1: ಕಳೆದ 34 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಮಾನವೀಯ ಸೇವಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ದಕ್ಷಿಣ ಕನ್ನಡ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಬಹರೈನ್ ಇದರ ವಾರ್ಷಿಕ ಮಹಾಸಭೆಯು ಅಕ್ಟೋಬರ್ 30ರಂದು ಶುಕ್ರವಾರ ಜುಮಾ ನಮಾಝ್ನ ಬಳಿಕ ಮನಾಮದ ಗೋಲ್ಡ್ ಸಿಟಿ ಕಟ್ಟಡದಲ್ಲಿರುವ ಕೆ-ಸಿಟಿ ಹಾಲ್ನಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಂಸ್ಥೆಯ ಅಧ್ಯಕ್ಷ ರಝಾಕ್ ಹಾಜಿ ಮೆಟೆಲ್ಕೋ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯು ಅಬೂಬಕ್ಕರ್ ಮದನಿ ಉಸ್ತಾದ್ ಮಂಚಿ ಅವರ ದುಆದೊಂದಿಗೆ ಆರಂಭಗೊಂಡಿತು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತಂಝೀಲ್ ಉಳ್ಳಾಲ ಸ್ವಾಗತಿಸಿದರು. ಬಳಿಕ ಸಂಘಟನೆಯ ಕಳೆದ ಸಾಲಿನ ಚಟುವಟಿಕೆಗಳು, ಸಾಧನೆಗಳು ಹಾಗೂ ವಿವಿಧ ಸೇವಾ ಕಾರ್ಯಗಳ ವಿವರಗಳನ್ನು ಪ್ರೊಜೆಕ್ಟರ್ ಮೂಲಕ ಸಭೆಯ ಮುಂದಿಡಲಾಯಿತು.
ಸಂಸ್ಥೆಯ ಆರ್ಥಿಕ ವ್ಯವಹಾರಗಳ ವರದಿಯನ್ನು ಜಾವೇದ್ ಅಕ್ತರ್ ಮಂಡಿಸಿದ್ದು, ಸಭೆಯು ವರದಿಗೆ ಅನುಮೋದನೆ ನೀಡಿತು. ಖಜಾಂಜಿ ಸಿನಾನ್ ಸಯೀದ್ ಕೋಟೆ ಅವರು 2027ನೇ ಸಾಲಿನ ಬಜೆಟ್ ವಿವರಗಳನ್ನು ಮಂಡಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ರಝಾಕ್ ಹಾಜಿ ಮೆಟೆಲ್ಕೋ ಅವರು, 1992ರಲ್ಲಿ ದಕ್ಷಿಣ ಕನ್ನಡ ಮೂಲದ ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಪ್ರಗತಿ ಹಾಗೂ ಸರ್ವತೋಮುಖ ಅಭಿವೃದ್ಧಿಯ ಉದ್ದೇಶದೊಂದಿಗೆ ಸ್ಥಾಪನೆಯಾದ ಸಂಸ್ಥೆಯ 34 ವರ್ಷಗಳ ಸೇವಾ ಪಯಣವನ್ನು ಸ್ಮರಿಸಿದರು. ಸಂಸ್ಥೆಯ ಸ್ಥಾಪನೆ ಮತ್ತು ಬೆಳವಣಿಗೆಗೆ ಶ್ರಮಿಸಿ ಅಗಲಿದ ಹಿರಿಯರು ಹಾಗೂ ನಾಯಕರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿ, ಅವರ ಪರಲೋಕದ ಒಳಿತಿಗಾಗಿ ವಿಶೇಷ ದುಆ ನೆರವೇರಿಸಲಾಯಿತು.
ಸಮುದಾಯ ಸೇವೆಯಲ್ಲಿ 34 ವರ್ಷಗಳ ಸಾಧನೆ
1992ರಿಂದ ರಝಾಕ್ ಹಾಜಿ ಮೆಟೆಲ್ಕೋ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯು ಬಡ ಹೆಣ್ಣುಮಕ್ಕಳ ವಿವಾಹಕ್ಕೆ ಆರ್ಥಿಕ ನೆರವು, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ವೈದ್ಯಕೀಯ ಸಹಾಯ ಹಾಗೂ ಸಂಕಷ್ಟದಲ್ಲಿರುವ ಅನಿವಾಸಿ ಸದಸ್ಯರಿಗೆ ಆರ್ಥಿಕ ಬೆಂಬಲ ನೀಡುವ ಮೂಲಕ ಗಮನಾರ್ಹ ಸೇವೆ ಸಲ್ಲಿಸುತ್ತಿದೆ.
ವಿಶೇಷವಾಗಿ ಸದಸ್ಯರ ತುರ್ತು ಆರ್ಥಿಕ ಅಗತ್ಯಗಳಿಗೆ 300 ಬಹರೈನ್ ದಿನಾರ್ಗಳವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸುತ್ತಿರುವುದು ಸಂಸ್ಥೆಯ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಸಂಘಟನೆಯ ಸೇವಾ ಚಟುವಟಿಕೆಗಳಿಗೆ ಅಧ್ಯಕ್ಷ ರಝಾಕ್ ಹಾಜಿ ಮೆಟೆಲ್ಕೋ ಅವರು ವೈಯಕ್ತಿಕವಾಗಿಯೂ ಆರ್ಥಿಕ ನೆರವು ನೀಡುತ್ತಿರುವುದನ್ನು ಸಭೆಯಲ್ಲಿ ಸ್ಮರಿಸಲಾಯಿತು.
ನೂತನ ಕಾರ್ಯಕಾರಿ ಸಮಿತಿ ಆಯ್ಕೆ
ಮಹಾಸಭೆಯ ಅಂತಿಮ ಹಂತದಲ್ಲಿ ಹಿಂದಿನ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ, 2026–27ನೇ ಸಾಲಿಗೆ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರಝಾಕ್ ಹಾಜಿ ಕೋಟೆ ಮೆಟೆಲ್ಕೋ, ಉಪಾಧ್ಯಕ್ಷರಾಗಿ ಬಿ.ಕೆ. ರಿಯಾಝ್ ಮತ್ತು ತಸ್ಲೀಮ್, ಪ್ರಧಾನ ಕಾರ್ಯದರ್ಶಿಯಾಗಿ ತಂಝೀಲ್ ಉಳ್ಳಾಲ, ಕಾರ್ಯದರ್ಶಿಯಾಗಿ ಕೈಸರ್ ಉಡುಪಿ, ಖಜಾಂಜಿಯಾಗಿ ಸಿನಾನ್ ಕೋಟೆ, ಮೀಡಿಯಾ ಕಾರ್ಯದರ್ಶಿಯಾಗಿ ಹನೀಫ್ ಕಿನ್ಯ ಹಾಗೂ ಆಡಿಟರ್ ಆಗಿ ಅಬ್ದುಲ್ ನಾಸಿರ್ ಆಯ್ಕೆಯಾದರು.
ಸಾಲ ವಿಭಾಗದ ಉಸ್ತುವಾರಿಗಳಾಗಿ ಜಾವೇದ್ ಅಕ್ತರ್ ಮತ್ತು ಸೈಫ್, ಮುಖ್ಯ ಸಲಹೆಗಾರರಾಗಿ ಕಮಾಲ್ ಹಾಗೂ ಸಲಹೆಗಾರರಾಗಿ ಶಾಫಿ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಯ್ಯದ್ ಹಾಜಿ ಕೋಟೆ, ಸಲೀಮ್ ಪುತ್ತೂರು, ಹಂಝ ಮೊಗ್ರಾಲ್, ಮುಸ್ತಫ ಮೈನ, ಸುಲೈಮಾನ್, ರಶೀದ್ ಇದ್ರೀಸ್, ಕರೀಮ್ ಉಚ್ಚಿಲ, ಅಶ್ರಫ್ ಕಿನ್ಯ, ಹನೀಫ್ ಜಿ.ಕೆ. ಹಾಗೂ ಬದ್ರು ಮಂಚಿ ಆಯ್ಕೆಯಾದರು.
ಮಹಾಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಲೀಮ್ ಪುತ್ತೂರು ವಹಿಸಿಕೊಂಡಿದ್ದು, ಚಹಾ ಮತ್ತು ಉಪಾಹಾರದ ವ್ಯವಸ್ಥೆಯನ್ನು ಕರೀಮ್ ಉಚ್ಚಿಲ ಹಾಗೂ ಅಶ್ರಫ್ ಕಿನ್ಯ ನಿರ್ವಹಿಸಿದರು.
ಸಂಘಟನೆಯ ಮೂಲ ಧ್ಯೇಯವಾದ ಒಗ್ಗಟ್ಟು, ಸಹಕಾರ ಮತ್ತು ಸೇವಾ ಮನೋಭಾವವನ್ನು ಮುಂದುವರಿಸಿಕೊಂಡು, ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಶ್ರಮಿಸುವ ಆಶಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
ಸದಸ್ಯರ ಪರಸ್ಪರ ಸಹಕಾರ ಮತ್ತು ಸಂಘಟಿತ ಪ್ರಯತ್ನಗಳ ಮೂಲಕ ದಕ್ಷಿಣ ಕನ್ನಡ ಮುಸ್ಲಿಮ್ ಸಮುದಾಯದ ಏಳಿಗೆಗಾಗಿ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವ ಸಂಕಲ್ಪದೊಂದಿಗೆ ಮಹಾಸಭೆ ಸಮಾಪ್ತಿಗೊಂಡಿತು.

ಇನ್ನಷ್ಟು ಸುದ್ದಿಗಳು
ಇಕ್ಬಾಲ್ ಬಾಳಿಲರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಹಾಲು–ಮೊಸರಿನ ದರ ಏರಿಕೆ: ಪರ್ಯಾಯದ ಹೆಸರಿನಲ್ಲಿ ಕಲಬೆರಕೆಯ ಅಪಾಯ
ಅಲ್ ಮದೀನದಲ್ಲಿ ವಿಜೃಂಭಿಸಿದ ವಿದ್ಯಾರ್ಥಿಗಳ ಸಾಹಿತ್ಯ–ಸಾಂಸ್ಕೃತಿಕ ಸಂಗಮ ‘ಗುಲ್ಶನ್’
ಮೀರಾಸ್ ಎಜು ಗೋಲ್ – ನೂತನ ಕಾರ್ಯನಿರ್ವಾಹಕ ಸಮಿತಿ ಅಸ್ತಿತ್ವಕ್ಕೆ
ಜೈಲು ಕಂಬಿಗಳ ಹಿಂದೆ ನರಳುವ ಜೀವಗಳು: ಕರಾಳ ಮಾದಕವಸ್ತು ಜಾಲದ ಕ್ರೂರ ಮುಖ
ಯೆನೆಪೋಯ ವಿಶ್ವವಿದ್ಯಾಲಯದಿಂದ ಕಾಂತಪುರಂ ಉಸ್ತಾದರಿಗೆ ಗೌರವ ಡಾಕ್ಟರೇಟ್
ಇಂದು ಕಾಪುವಿನಲ್ಲಿ ಐತಿಹಾಸಿಕ ಸಮಸ್ತ ತಾತ್ವಿಕ ಸಮಾವೇಶ- ಎಸ್ಸೆಸ್ಸೆಫ್ ಕಾಪು ಡಿವಿಷನ್ ಯಶಸ್ವಿಗೆ ಕರೆ
ರಾಷ್ಟ್ರಮಟ್ಟದ ಹ್ಯಾಕಥಾನ್ನಲ್ಲಿ ಅಫ್ನಾಜ್ಗೆ ದ್ವಿತೀಯ ಸ್ಥಾನ
ಬಿಳಿ ಬಣ್ಣದ ಮದುವೆ ಉಡುಗೆಯನ್ನು ಹೊದಿಸಿ ಅಸ್ಸಾ ರಮ್ಸಿಗೆ ಕಣ್ಣೀರಿನ ವಿದಾಯ
‘ಪೈಲಟ್ ಸ್ಮಿತ್ ಮಚ್ಚಾರ್ ಯುಎಇಯ ಹೆಮ್ಮೆ’ ; ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ ಶೈಖ್ ಹಮ್ದಾನ್