janadhvani

Kannada Online News Paper

ಅಲ್ ಖಾದಿಸ ದುಬೈ ಇಶ್ಕೇ ಮುಸ್ತಫಾ ಕಾನ್ಫರೆನ್ಸ್

ದುಬೈ: ಅಲ್ ಖಾದಿಸ ಕಾವಳಕಟ್ಟೆಯ ದುಬೈ ಸಮಿತಿ ವತಿಯಿಂದ ನಡೆದ ಇಶ್ಕೇ ಮುಸ್ತಫಾ ಕಾನ್ಫರೆನ್ಸ್ ಬನಿಯಾಸ್ ಮೆಟ್ರೋ ಸ್ಟೇಷನ್ ಸಮೀಪದ ಪರ್ಲ್ ಕ್ರೀಕ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು.
ಸಂಸ್ಥೆಯ ಶಿಲ್ಪಿ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಸಚಿವ ಸನ್ಮಾನ್ಯ UT ಖಾದರ್ ಅಲ್ ಖಾದಿಸ ಫೇಸ್ಬುಕ್ ಪೇಜನ್ನು ಅಧಿಕೃತವಾಗಿ ಲಾಂಚ್ ಮಾಡಿದರು. ಹಾಫಿಝ್ ಸುಫ್ಯಾನ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು ಖ್ಯಾತ ಭಾಷಣಗಾರ ಪೇರೋಡ್ ಅಬ್ದುರ್ರಹ್ಮಾನ್ ಅಝ್ಹರಿ ಮಖ್ಯ ಭಾಷಣ ಮಾಡಿದರು.


ಇಬ್ರಾಹಿಮ್ ಫೈಝಿ ಕುಪ್ಪೆಟ್ಟಿ,
ಶರೀಫ್ ಮೂಡಬಿದ್ರೆ, ರಝಾಖ್ ಹಾಜಿ ದೇವ, bcc ಅಧ್ಯಕ್ಷ ಬಶೀರ್ ms, ಅಶ್ರಫ್ ಬಾಳೆಹೊನ್ನೂರು, ಸ್ವಾಗತ ಸಮಿತಿ ಚೇರ್ಮಾನ್ ಉಬೈದುಲ್ಲಾಹ್ ಬಖ್ಶ್, ಅಬ್ದುರ್ರಹೀಂ ಅಡ್ಡೂರು, ನಝೀರ್ ಹಾಜಿ ಕೆಮ್ಮಾರ, ಬಶೀರ್ ಹಾಜಿ ಅಸ್ಟರ್, ರಾಶ್ ಬ್ಯಾರಿ, ಅಬ್ದುಲ್ ರಹ್ಮಾನ್ ಕೋಟೆಕಾರ್, ಫರಾಝ್ ಕೋಟೆಕಾರ್, ಅಲ್ತಾಫ್ ಫರಂಗಿಪೇಟೆ, ಅಶ್ರಫ್ ಹಾಜಿ ಅಡ್ಯಾರ್, ಇಕ್ಬಾಲ್ ಕಾಜೂರು, ಅಲೀ ಕೂಳೂರು ಮುಂತಾದ ಉಲಮಾ ಉಮರಾ ಪ್ರಮುಖರು ಭಾಗವಹಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಹಾರಿಸ್ ಮುಕ್ವೆ ನೇತೃತ್ವದಲ್ಲಿ ಬುರ್ದಾ ಆಲಾಪನೆ ಮಾಡಲಾಯಿತು, ನಿಝಾಮುದ್ದೀನ್ ಸಖಾಫಿ ಖಿರಾಅತ್ ಪಠಿಸಿದರು.
ಅಲ್ ಖಾದಿಸ ದುಬೈ ಸಮಿತಿ ಅಧ್ಯಕ್ಷ ಬಶೀರ್ ಹಾಜಿ ಬೊಳುವಾರ್ ಸ್ವಾಗತಿಸಿ ಅಲ್ ಖಾದಿಸ ದುಬೈ ಆರ್ಗನೈಸರ್ ಕಲಂದರ್ ರಝ್ವಿ ವಂದಿಸಿದರು.

error: Content is protected !! Not allowed copy content from janadhvani.com