janadhvani

Kannada Online News Paper

ಮೀರಾಸ್ ಎಜು ಗೋಲ್ – ನೂತನ ಕಾರ್ಯನಿರ್ವಾಹಕ ಸಮಿತಿ ಅಸ್ತಿತ್ವಕ್ಕೆ

ದಾವಣಗೆರೆ: ಮಧ್ಯ ಮತ್ತು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಚಳುವಳಿಯನ್ನು ನಡೆಸುತ್ತಿರುವ ಮೀರಾಸ್ ಎಜು ಗೋಲ್ ಸಂಸ್ಥೆಗೆ ಮುಂದಿನ ಮೂರು ವರ್ಷಕ್ಕಿರುವ ಕಾರ್ಯನಿರ್ವಾಹಕ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಸಂಸ್ಥೆಯ ಮುಖ್ಯ ಪೋಷಕರಾಗಿ ಖುದುವತುಸ್ಸಾದಾತ್ ಸಯ್ಯದ್ ಕುಂಬೋಲ್ ಆಟಕ್ಕೋಯ ತಙಳ್, ಅಧ್ಯಕ್ಷರಾಗಿ ಸಯ್ಯದ್ ಅಲವಿ ಅಲ್ ಬುಖಾರಿ ಕರ್ಕಿ, ಪ್ರಧಾನ ಕಾರ್ಯದರ್ಶಿಗಳಾಗಿ ಕೆಕೆ ಅಶ್ರಫ್ ಸಖಾಫಿ, ಕೋಶಾಧಿಕಾರಿಯಾಗಿ ಜನಾಬ್ ಅಬ್ಬಾಸ್ ಹಿರಿಯೂರು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳನ್ನು ಕಾರ್ಯದರ್ಶಿಗಳನ್ನು ಹಾಗು ಎಕ್ಸಿಕ್ಯೂಟಿವ್ ಸದಸ್ಯರುಗಳನ್ನು ಸಭೆಯಲ್ಲಿ ನೇಮಕ ಮಾಡಲಾಯಿತು.

ದಿನಾಂಕ ಅ. 29 ಗುರುವಾರ ದಾವಣಗೆರೆ ಮೀರಾಸ್ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಸಯ್ಯದ್ ಅಲವಿ ಅಲ್ ಬುಖಾರಿ ಕರ್ಕಿ ಅಧ್ಯಕ್ಷತೆ ವಹಿಸಿದರು, ಸಂಸ್ಥೆಯ ಡೈರೆಕ್ಟರ್ ಜನರಲ್ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ ಸ್ವಾಗತಿಸಿದರು ಮತ್ತು ಕಾರ್ಯಾಧ್ಯಕ್ಷರಾದ ಯಾಸೀನ್ ಸಖಾಫಿ ಸಭೆಯ ಕೊನೆಯಲ್ಲಿ ವಂದಿಸಿದರು.

ಇದನ್ನೂ ಓದಿರಿ...