ಮುಡಿಪು:ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯಾದ್ಯಂತ ಇರುವ ಪ್ರತೀ ಶಾಖೆಗಳಲ್ಲಿ “ಯೌವ್ವನ ಮರೆಯಾಗುವ ಮುನ್ನ” ಎಂಬ ಉದಾತ್ತವಾದ ಪ್ರಮೇಯದಲ್ಲಿ ಯೂನಿಟ್ ಕಾನ್ಫರೆನ್ಸ್ ನಡೆಸಲು ನಿರ್ದೇಶಿಸಿದ್ದು,ಅದರ ಭಾಗವಾಗಿ ಮುದುಂಗಾರುಕಟ್ಟೆ ಶಾಖೆಯ ವತಿಯಿಂದ ಯೂನಿಟ್ ಕಾನ್ಫರೆನ್ಸ್ ಮುದುಂಗಾರುಕಟ್ಟೆ ಜುಮ್ಮಾ ಮಸ್ಜಿದ್ ಅಧ್ಯಕ್ಷ ಯಂ.ಯಂ.ಅಬೂಬಕ್ಕರ್ ರವರ ಅಧ್ಯಕ್ಷತೆಯಲ್ಲಿ ಮುದುಂಗಾರುಕಟ್ಟೆ ಮಸ್ಜಿದ್ ವಠಾರದಲ್ಲಿ ನಡೆಯಿತು.
ಮುದುಂಗಾರುಕಟ್ಟೆ ಜುಮ್ಮಾ ಮಸ್ಜಿದ್ ಖತೀಬ್ ಹೈದರಲಿ ಹಿಮಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಚುನಾವಣಾ ಮಂಡಳಿ ಕನ್ವೀನರ್ ಯಾಕೂಬ್ ಸಅದಿ ನಾವೂರು ಮುಖ್ಯ ಪ್ರಭಾಷಣ ನಡೆಸಿದರು.
ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಸಂದೇಶ ಭಾಷಣ ನಡೆಸಿದರು.
ಕಾರ್ಯಕ್ರಮದಲ್ಲಿ ಮುದುಂಗಾರುಕಟ್ಟೆ ಮದರಸ ಮುಅಲ್ಲಿಂಗಳಾದ ಅಬೂಬಕರ್ ಸಖಾಫಿ, ಅಬ್ದುಸ್ಸಮದ್ ಮದನಿ,ಎಸ್.ವೈ.ಎಸ್ ಮುದುಂಗಾರುಕಟ್ಟೆ ಬ್ರಾಂಚ್ ಅಧ್ಯಕ್ಷ ಬಡುವಕುಂಞಿ,ಎಸ್ಸೆಸ್ಸೆಫ್ ಮುದುಂಗಾರುಕಟ್ಟೆ ಶಾಖಾಧ್ಯಕ್ಷ ಅಶ್ರಫ್ ಜಿ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಮುದುಂಗಾರುಕಟ್ಟೆ ಶಾಖೆಯಿಂದ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ ನಡೆಯಿತು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸದಸ್ಯ ಜಮಾಲುದ್ದೀನ್ ಸಖಾಫಿ ಸ್ವಾಗತಿಸಿದರು.ಎಸ್ಸೆಸ್ಸೆಫ್ ಮುದುಂಗಾರುಕಟ್ಟೆ ಶಾಖೆ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ವಂದಿಸಿದರು.