janadhvani

Kannada Online News Paper

ಎಸ್ಸೆಸ್ಸೆಫ್ ಕೊಡಂಗಾಯಿ ಯೂನಿಟ್ ಕಾನ್ಫರೆನ್ಸ್

ಯೌವನದ ಆನಂದದಲ್ಲಿ ಒಳಿತಿನ ಆಂದೋಲನ ಮಾಡಲು ಮೂಳೂರು ಸಖಾಫಿ ಕರೆ

ವಿಟ್ಲ : ಮನುಷ್ಯ ಜೀವನವು ಶಿಶುತನದಿಂದ ಆರಂಭಿಸಿ ವೃದ್ಧಾಪ್ಯ ತನಕದ ಹಲವು ಘಟ್ಟಗಳಲ್ಲಾಗಿ ವಿವಿಧ ರೂಪಗಳಿಂದ ಕೂಡಿರುತ್ತದೆ. ಯೌವನವು ಅವುಗಳಲ್ಲಿ ಅತ್ಯಂತ ಪ್ರಮುಖವಾದುದು. ಆದುದರಿಂದ ಯವ್ವನವನ್ನು ಸಮಾಜದ ಒಳಿತಿನ ಆಂದೋಲನದಲ್ಲಿ ವಿನಿಯೋಗಿಸಿ ಕೆಡುಕು ಮುಕ್ತ ಸಮಾಜ ಸೃಷ್ಟಿಸಲು ವಿದ್ಯಾರ್ಥಿ ಪಡೆಯು ಸನ್ನದ್ಧರಾಗಬೇಕೆಂದು ಸುನ್ನೀ ಯುವಜನ ಸಂಘ ರಾಜ್ಯ ಸಮಿತಿ ಕಾರ್ಯದರ್ಶಿಯಾದ ಎಂ.ಎ.ಸಿದ್ದೀಕ್ ಸಖಾಫಿ ಮೂಳೂರು ಕರೆ ನೀಡಿದರು.ಅವರು ಎಸ್ಎಸ್ಎಫ್ ಕೊಡಂಗಾಯಿ ಶಾಖೆ ಹಮ್ಮಿಕೊಂಡ ಯೂನಿಟ್ ಕಾನ್ಫರೆನ್ಸ್ ನಲ್ಲಿ ಮುಖ್ಯ ಭಾಷಣ ಮಾಡುತ್ತಿದ್ದರು.
ಜ್ಞಾನ ಕಡಿಮೆಯಾಗಿರುವ ಕಾರಣ ಮನುಷ್ಯರಿಂದ ಪಾಪಗಳು ನಿರಂತರವಾಗಿ ಸಂಭವಿಸುತ್ತಿದೆ. ಆರಾಧನೆಗಳ ಸ್ವೀಕೃತಿಗೆ ಅರಿವು ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಊರಿನ ಎಲ್ಲರೂ ಕಲಿಕೆಯತ್ತ ಗಮನ ಹರಿಸುತ್ತಾ ಮುನ್ನಡೆಯಬೇಕೆಂದು ಅವರು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಯೂನಿಟ್ ಸಮಿತಿ ಉಪಾಧ್ಯಕ್ಷರಾದ ಎಂ ಕೆ ಅಬ್ದುಲ್ ರಝಾಕ್ ವಹಿಸಿದ್ದರು. ಸುನ್ನೀ ಯುವಜನ ಸಂಘ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಕೆ ಎಂ ಅಬ್ದುಲ್ ಹಮೀದ್ ಸಖಾಫಿ ಉದ್ಘಾಟಿಸಿದರು. ಸುನ್ನೀ ಜಂಇಯ್ಯತುಲ್ ಉಲಮಾ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಜಿ.ಎಂ. ಅಬೂಬಕರ್ ಸುನ್ನೀ ಫೈಝಿ, ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಸಲೀಮ್ ಹಾಜಿ, ವಿಟ್ಲ ಡಿವಿಷನ್ ಎಲೆಕ್ಷನ್ ಆಫೀಸರ್ ಅಬ್ದುರ್ರಹ್ಮಾನ್ ಶರಫಿ, ಸ್ಥಳೀಯ ಮದ್ರಸ ಮುಖ್ಯೋಪಾಧ್ಯಾಯರಾದ ಅಬ್ಬಾಸ್ ಮದನಿ ಮೊದಲಾದವರು ಭಾಷಣ ಮಾಡಿದರು.
ಸ್ಥಳೀಯ ಬ್ರಾಂಚ್ ಸಮಿತಿ ಸುನ್ನೀ ಯುವಜನ ಸಂಘ ಪ್ರಧಾನ ಕಾರ್ಯದರ್ಶಿ ಎಂಕೆಎಂ ಕಾಮಿಲ್ ಸಖಾಫಿಯವರು ಮಹ್’ಳರತುಲ್ ಬದ್ರಿಯ್ಯಕ್ಕೆ ನಾಯಕತ್ವ ನೀಡಿದರು. ಎಸ್ ವೈ ಎಸ್ ಅಧ್ಯಕ್ಷರಾದ ಹುಸೈನ್ ಪಳ್ಳಿಗದ್ದೆ,ಎಸ್ಎಸ್ಎಫ್ ವಿಟ್ಲ ದಿವಿಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಪೆಲ್ತಡ್ಕ, ವಿಟ್ಲ ಸೌತ್ ಸೆಕ್ಟರ್ ಅಧ್ಯಕ್ಷರಾದ ಸಿಎಚ್ ಅಬ್ದುಲ್ ಖಾದರ್, ಎಸ್ ವೈ ಎಸ್ ನಾಯಕರಾದ ಮುಹಮ್ಮದ್ ಅಶ್ರಫ್ ಸಅದಿ, ಬಿ.ಎ.ಖಾದರ್, ಸಿಎಚ್ ಉಮರ್ ಮುಸ್ಲಿಯಾರ್, ಸಿಎಚ್ ಮುಹಮ್ಮದ್ ಮುಸ್ಲಿಯಾರ್, ಸುಲೈಮಾನ್ ಹಾಜಿ ಜಾರ, ಅಬೂಬಕರ್ ಸಖಾಫಿ,ಕೆಸಿಎಫ್ ಕಾರ್ಯಕರ್ತ ಸಲೀಂ ಜಾರ ಮುಂತಾದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಯೂನಿಟ್ ಪ್ರಧಾನ ಕಾರ್ಯದರ್ಶಿ ಎಂಕೆ ಮುಹಮ್ಮದ್ ತಮೀಂ ಸ್ವಾಗತಿಸಿದರು. ಯೂನಿಟ್ ಕೋಶಾಧಿಕಾರಿ ಮುಹಮ್ಮದ್ ಹಾರಿಸ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮುಹಮ್ಮದ್ ಶಮೀರ್ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com