ಬನ್ನೂರು :-ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ SSF ಕರ್ನಾಟಕ ರಾಜ್ಯ ಸಮಿತಿ ನಿರ್ದೇಶನದಂತೆ ಯೌವ್ವನ ಮರೆಯಾಗುವ ಮುನ್ನ ಎಂಬ ದ್ಯೇಯ ವಾಕ್ಯದೊಂದಿಗೆ ಯೂನಿಟ್ ಕಾನ್ಫರೆನ್ಸ್ ,ಬುರ್ದಾ ಮಜ್ಲೀಸ್, ಮಹ್ಳರತುಲ್ ಬದ್ರಿಯಾ, ಹಾಗೂ ನಿಭ್ರಾಸುಲ್ ಉಲಮಾ ಎ ಕೆ ಉಸ್ತಾದ್, ಕಂಝುಲ್ ಉಲಮಾ ಚಿತ್ತಾರಿ ಉಸ್ತಾದ್ ಗಳವರ ಅನುಸ್ಮರಣೆ ಕಾರ್ಯಕ್ರಮಗಳು ಅಕ್ಟೋಬರ್ 28 ರಂದು ಸಂಜೆ 4:30 ರಿಂದ ತಾಜುಲ್ ಉಲಮಾ ವೇದಿಕೆ ಬನ್ನೂರಿನಲ್ಲಿ ನಡೆಯುವಾಗ ಪುತ್ತೂರು ತಾಲೂಕಿನ ಎಲ್ಲಾ SSF ಯುನಿಟ್ ಗಳ ಕಾರ್ಯಕರ್ತರು ಬಂದು ವಿಜಯಗೊಳಿಸಬೇಕಾಗಿ ವಿನಂತಿ.
ಬಹು ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಅಲ್-ಬುಖಾರಿ ತಂಙಳ್ ಕೂರತ್, ಬಹು ಸಯ್ಯಿದ್ ಅಹ್ಮದ್ ಶಿಹಾಬುದ್ದೀನ್ ಅಲ್-ಮಶ್ಹೂರ್ ತಂಙಳ್ ಸಾರಥಿ ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೇಕ್ಸ್ ತಲಕ್ಕಿ, ಬಹು ಸಯ್ಯಿದ್ ಅಬ್ದುಲ್ ಖಾದರ್ ಆಟಕೋಯ ತಂಙಳ್ ಅಲೂರು ಕೇರಳ, ಬಹು ಹಸನ್ ಮುಹೀನಿ ಅಹ್ಸನಿ ಮಾರ್ನಾಡ್ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ.
ಮುಖ್ಯ ಪ್ರಭಾಷಣ: ಬಹು ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರ್.
ಕಾರ್ಯಕ್ರಮ ವಿಜಯಗೊಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.