janadhvani

Kannada Online News Paper

ಕೆಸಿಎಫ್, ದುಬೈ ಸೌತ್ ಝೋನ್ ಬೃಹತ್ ಮೀಲಾದ್ ಸಮಾವೇಶ ಸ್ವಾಗತ ಸಮಿತಿ ರಚನೆ

ಕೆಸಿಎಫ್, ದುಬೈ ಸೌತ್ ಝೋನ್ ಬೃಹತ್ ಮೀಲಾದ್ ಸಮಾವೇಶ ನವಂಬರ್ 30 ಕ್ಕೆ, 101 ಸದಸ್ಯರ ಸ್ವಾಗತ ಸಮಿತಿ ರಚನೆ

ದುಬೈ : ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) 1493 ನೇ ಜನ್ಮ ದಿನಾಚರಣೆಯ ಅಂಗವಾಗಿ, ಆನಿವಾಸಿ ಕನ್ನಡಿಗರ ಧಾರ್ಮಿಕ, ಸಾಂಸ್ಕ್ರತಿಕ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ದುಬೈ ಸೌತ್ ಝೋನ್ ವತಿಯಿಂದ ಬೃಹತ್ ಮೀಲಾದ್ ಸಮಾವೇಶವು ನವೆಂಬರ್ 30 ರಂದು ಸಂಜೆ 5:00 ಗಂಟೆಗೆ ಬುರ್ ದುಬೈ “ಹಾಲಿಡೇ ಇನ್” ಹೋಟೆಲಿನಲ್ಲಿ ನಡೆಯಲಿದೆ. ಇಲೈಕ ಯಾ ರಸೂಲಲ್ಲಾಹ್ (ಸಂದೇಶ ವಾಹಕರೇ ತಮ್ಮೆಡೆಗೆ) ಎಂಬ ಶೀರ್ಷಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ನೇತಾರ, ಆಶಿಕುರ್ರಸೂಲ್ ಸಯ್ಯದ್ ಬಾಯಾರ್ ತಂಗಳ್ ರವರು ದುಆ ಆಶೀರ್ವಚನ ಹಾಗೂ ಮುಖ್ಯಪ್ರಭಾಷಣ ಮಾಡಲಿದ್ದಾರೆ. ವಿವಿಧ ಪ್ರತಿಭೆಗಳಿಂದ ನಹತೇ ಷರೀಫ್ ಹಾಗು ಬುರ್ಧಾ ಮಜಲಿಸ್ ನಡೆಯಲಿದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಲಿರುವರು. ಕಾರ್ಯಕ್ರಮದಲ್ಲಿ ಅನಿವಾಸಿ ಕನ್ನಡಿಗ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಗುವುದು.

ಗ್ರಾಂಡ್ ಮೀಲಾದ್ ಪ್ರಯುಕ್ತ ಅನಿವಾಸಿ ಕನ್ನಡಿಗ ವಿದ್ಯಾರ್ಥಿಗಳ ಪ್ರತಿಭೋತ್ಸವ ಕಾರ್ಯಕ್ರಮವು ದಿನಾಂಕ 02 .11 . 2018 ಶುಕ್ರವಾರ ಜರುಗಲಿದ್ದು ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಡೆಸಲಾಗುವುದು. ಧಾರ್ಮಿಕ, ಸಾಮಾಜಿಕ, ಸಾಮೂಹಿಕ ರಂಗದ ವಿವಿಧ ನಾಯಕರುಗಳು,ಖ್ಯಾತ ಉದ್ಯಮಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಸಮಾವೇಶದ ಯಶಸ್ವಿಗಾಗಿ 101 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

u

ಸಲಹಾ ಮಂಡಳಿ

ಅಬ್ದುಲ್ ಹಮೀದ್ ಸ-ಅದಿ, ಈಶ್ವರಮಂಗಳ
ಇಬ್ರಾಹಿಂ ಮುಸ್ಲಿಯಾರ್ ಕಾಯಕೋಡಿ
ಮುಸ್ತಾಫಾ ದಾರಿಮಿ ICF
ಖಾದರ್ ಸಾಲೆತ್ತೂರ್

ಕಾರ್ಯನಿರ್ವಹಣಾ ಸಮಿತಿ

ಛೇರ್ಮನ್ : ಇಕ್ಬಾಲ್ ಸಿದ್ದಕಟ್ಟೆ
ಜನರಲ್ ಕನ್ವಿನರ್ : ಅಬ್ದುಲ್ ಅಝೀಜ್ ಕೆದಿಲ, ಕೋಶಾಧಿಕಾರಿ : ಜಮಾಲ್ PRO Bayar
ವೈಸ್ ಛೇರ್ಮನ್ : ಇಕ್ಬಾಲ್ ಕಾಜೂರ್, ಇಲ್ಯಾಸ್ ಮದನಿ ಅಲ್ ಬರ್ಷಾ
ಮೊಹಮ್ಮದ್ ಅಲಿ ಫೈಝಿ, ಸಲಾಂ ತ್ರಿಶೂರ್, ಅಶ್ರಫ್ ಉಳ್ಳಾಲ್
ವೈಸ್ ಕನ್ವಿನರ್ : ಶರೀಫ್ ದೇರಳಕಟ್ಟೆ, ಇಬ್ರಾಹಿಂ ಖಲೀಲ್, ಮನ್ಸೂರ್ ಪಾವೂರ್, ಲತೀಫ್ ಪಲ್ಲಮಜಲ್
ಕಾರ್ಯನಿರ್ವಾಹಕರುಗಳು : ರಫೀಕ್ ಕಲ್ಲಡ್ಕ, ರಫೀಕ್ ಜೆಪ್ಪು.

ಉಪ ಸಮಿತಿಗಳು

ಪ್ರತಿಭೋತ್ಸವ:
ಛೇರ್ಮನ್ : ಸಾಹುಲ್ ಹಮೀದ್ ಸಖಾಫಿ
ಕನ್ವಿನರ್ : ಮೊಹಮ್ಮದ್ ಅಲಿ ಕನ್ಯಾನ, ಕಬೀರ್ ಜಟ್ಟಿಪಳ್ಳ, ಮೊಹಮ್ಮದ್ ಅಲಿ ವಳವೂರ್

ಹಣಕಾಸು:
ಛೇರ್ಮನ್ : ನಝೀರ್ ಹಾಜಿ ಕೆಮ್ಮಾರ
ಕನ್ವಿನರ್ : ಹಸನ್ ಜನಸಾಲೆ, ಇಬ್ರಾಹಿಂ ಕಳತ್ತೂರ್

.ಸಮಾವೇಶ ಸಿದ್ಧತಾ ಸಮಿತಿ
ಛೇರ್ಮನ್ : ಅಬ್ದುಲ್ ಅಝೀಜ್ ಅಹ್ಸನಿ
ಕನ್ವಿನರ್ : ಮುಸ್ತಾಫಾ ಗಡಿಯಾರ್

.ಮಾಧ್ಯಮ ಮತ್ತು ಪ್ರಚಾರ
ಛೇರ್ಮನ್ : ರಿಯಾಜ್ ಕೊಂಡಂಗೇರಿ
ಕನ್ವಿನರ್ : ಶರೀಫ್ ಪಡೀಲ್

ಸಾರಿಗೆ ಮತ್ತು ಭೋಜನ ಸಮಿತಿ
ಛೇರ್ಮನ್ : ಶರೀಫ್ ಬೈರಿಕಟ್ಟೆ
ಕನ್ವಿನರ್ : ರಫೀಕ್ ಮೊ0ತಿಮಾರ್, ರಹೀಮ್ ಮಂಡಿಯೂರ್

ಅತಿಥಿ ಉಸ್ತುವಾರಿ ಮತ್ತು ಸ್ವಯಂ ಸೇವಕ ಸಮಿತಿ:
ಛೇರ್ಮನ್ : ಶರೀಫ್ ಹೊಸ್ಮಾರ್
ಕನ್ವಿನರ್ : ಅಬ್ದುಲ್ ರಹ್ಮಾನ್ ಉಳ್ಳಾಲ
ರಿಯಾಜ್ ವೇಣೂರ್
ಆಸಿಫ್ ಇಂದ್ರಾಜೆ

error: Content is protected !! Not allowed copy content from janadhvani.com