janadhvani

Kannada Online News Paper

ಬೆಳ್ತಂಗಡಿ ಡಿವಿಷನ್ ಎಸ್ಸೆಸ್ಸೆಫ್ ಟೀಂ ಹಸನೈನ್ ಕಾರ್ಯಕರ್ತರ ಕ್ಯಾಂಪ್ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಬೆಳ್ತಂಗಡಿ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಭವಿಷ್ಯದ ನಾಯಕರನ್ನು ಸೃಷ್ಟಿಸಲು ಸಕ್ರೀಯ ಕಾರ್ಯಕರ್ತರ ಟೀಂ ಹಸನೈನ್ ಎರಡನೇ ಕ್ಯಾಂಪ್ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ MAM ಖಾಸಿಂ ಮುಸ್ಲಿಯಾರ್ ಮಾಚಾರು ಅವರ ಅಧ್ಯಕ್ಷತೆಯಲ್ಲಿ ಬದ್ರುಲ್ ಹುದಾ ಮದರಸ ಗೋಳಿಯಂಗಡಿಯಲ್ಲಿ ನಡೆಯಿತು.


ಬದ್ರುಲ್ ಹುದಾ ಮದರಸ ಗೋಳಿಯಂಗಡಿ ಇದರ ಮುಅಲ್ಲಿಮರಾದ ಉಮರುಲ್ ಫಾರೂಕ್ ಝುಹ್ರಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸರಕಾರಿ ಪ್ರೌಢ ಶಾಲೆ ನಡ ಇಲ್ಲಿಯ ಗಣಿತ ಶಿಕ್ಷಕರಾಗಿ ಶಾಲೆಯಲ್ಲಿ ಗಣಿತದ ಅತ್ಯುತ್ತಮ ಮಾದರಿ ಪ್ರಯೋಗಾಲ ಮಾಡಿ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿ 2018ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ “ಜನಾಬ್ ಯಾಕೂಬ್ ಎಸ್,ಕೊಯ್ಯುರು” ಇವರಿಗೆ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ಸನ್ಮಾನಿಸಲಾಯಿತು.


ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ನಾಯಕರುಗಳಾದ ಖಾಸಿಂ ಮುಸ್ಲಿಯಾರ್, ತೌಫೀಕ್ ವೇಣೂರು, ರಶೀದ್ ಮಡಂತ್ಯಾರು ತರಗತಿಯನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ನ ಉಪಾಧ್ಯಕ್ಷರಾದ ಅಯ್ಯೂಬ್ ಮಳ್ಹರಿ,ಕೋಶಾಧಿಕಾರಿಯಾದ ರಶೀದ್ S.A ಸದಸ್ಯರಾದ ಇಕ್ಬಾಲ್ ಮಾಚಾರು ಮೊದಲಾದವರು ಉಪಸ್ಥಿತರಿದ್ದರು.
ತೌಫೀಕ್ ವೇಣೂರು ಸ್ವಾಗತಿಸಿದರು ಕೊನೆಯಲ್ಲಿ ಶರೀಫ್ ಶಾಝ್,ನಾವೂರು ವಂದಿಸಿದರು.

ವರದಿ:ಎಂ.ಎಂ.ಉಜಿರೆ.

error: Content is protected !! Not allowed copy content from janadhvani.com