ಬುರೈದ: KCF ಅಲ್ ಕಸೀಮ್ ಝೋನ್ ವತಿಯಿಂದ ಈ ವರ್ಷ ಹಜ್ಜಾಜಿಗಳಿಗೆ ಸೇವನೆಗೈಯಲು ಪವಿತ್ರ ಮಕ್ಕಾ ಮಣ್ಣಿಗೆ ತೆರಳಿದ್ದ HVC ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವು ಬುರೈದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು KCF ಅಲ್ ಕಸೀಮ್ ಝೋನ್ ಅಧ್ಯಕ್ಷರಾದ ಯಾಕೂಬ್ ಸಖಾಫಿ ವಹಿಸಿದ್ದರು. ICF ಅಲ್ ಕಸೀಮ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮುಸ್ಲಿಯಾರ್ ರವರ ದುಆ ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ಅತಿಥಿಗಳನ್ನು KCF ಅಲ್ ಕಸೀಮ್ ಝೋನ್ ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಸ್ವಾಗತಿಸಿದರು.
ಕಾರ್ಯಕ್ರಮವನ್ನು ICF ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಟೆಕಲ್ ಉದ್ಘಾಟಿಸಿದರು.KCF ಸೌದಿ ರಾಷ್ಟ್ರೀಯ ಸಮಿತಿಯ ಸಂಘಟನಾ ವಿಭಾಗದ ಚೆಯರ್ಮಾನ್ ಸಿದ್ದೀಖ್ ಸಖಾಫಿ ಪೆರುವಾಯಿ ಮುಖ್ಯ ಪ್ರಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಬುರೈದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಶೇರಿ ಹಾಗೂ ಸೌದಿ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಚೆಯರ್ಮಾನ್ ಸಲೀಂ ಕನ್ಯಾಡಿ ಅವರು ಆಗಮಿಸಿ ಪ್ರಶಂಸೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ
KCF ಅಲ್ ಕಸೀಮ್ ಝೋನ್ ಇದರ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ನೇತೃತ್ವವನ್ನು ನೀಡುತ್ತಿರುವ ಝೋನ್ ಅಧ್ಯಕ್ಷರಾದ ಯಾಕೂಬ್ ಸಖಾಫಿ ಹಾಗೂ HVC-2018 ರ ಕಾರ್ಯಚಟುವಟಿಕೆಯನ್ನು ಬಹಳ ಯಶಸ್ವಿಯಾಗಿ ನಿಭಾಯಿಸಿದ HVC ರಾಷ್ಟ್ರೀಯ ಕನ್ವಿನರ್ ಸಲೀಮ್ ಕನ್ಯಾಡಿ ಅವರನ್ನು ಸನ್ಮಾನಿಸಲಾಯಿತು.
ಈ ವರ್ಷ ಅಲ್ ಕಸೀಮ್ ಝೋನ್ ವತಿಯಿಂದ HVC ಗೆ ತೆರಳಿದ್ದ ಕಾರ್ಯಕರ್ತರಿಗೆ KCF ರಾಷ್ಟ್ರಿಯ ಸಮಿತಿಯು ನೀಡಿದ ಪ್ರಮಾಣ ಪತ್ರ ಮತ್ತು ಫಲಕವನ್ನು ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ KCF ನಡೆಸುತ್ತಿರುವ ವಿವಿಧ ಪದ್ಧತಿಗಳಾದ HVC, ಇಹ್ಸಾನ್ , ಇಶಾರ , ಅಸ್ಸುಫ್ಫಾ , ರಿಲೀಫ್ , MRF ಕುರಿತಾದ ಮಾಹಿತಿ ಮತ್ತು ಚಿತ್ರಗಳ ಪ್ರದರ್ಶನ ನಡೆಯಿತು. KCF ಅಲ್ ಕಸೀಮ್ ಝೋನ್ ಇದರ 6 ಸೆಕ್ಟರ್ ಗಳ ನೂರಾರು ಕಾರ್ಯಕರ್ತರು ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .ಝೋನ್ ನಾಯಕರಾದ ಹಿದಾಯತುಲ್ಲಾ ತೀರ್ಥಹಳ್ಳಿ ಧನ್ಯವಾದ ಹೇಳಿದರು.