janadhvani

Kannada Online News Paper

ಕೆ ಸಿ ಎಪ್ – ಹೆಚ್ ವಿ ಸಿ 2018, ಕಾರ್ಯಕರ್ತರ ಮನದಾಳದ ಮಾತು

 

ಜೀವನದಲ್ಲಿ ಮರೆಯಲಾಗದ ಅನುಭವ ಕೆ ಸಿ ಎಫ್  ಹೆಚ್ ವಿ ಸಿ .

ಹೌದು ಕರ್ನಾಟಕ ಕಲ್ಚರಲ್ ಫೌಂಡೇಶನ್ ನಡೆಸುತ್ತಿರುವ ಸಾಂತ್ವನದಲ್ಲಿ ಅತೀ ಮಹತ್ತರವಾದ ಕಾರ್ಯವಾಗಿದೆ ಹೆಚ್ ವಿ ಸಿ (ಹಜ್ಜ್ ವಲೆಂಟೇರ್ ಕೋರ್) ಅಂದರೆ ಅಲ್ಲಾಹನ ಅತಿಥಿಗಳಾಗಿ ಪವಿತ್ರ ಹಜ್ಜ್ ನಿರ್ವಹಿಸಲು ಮಕ್ಕತುಲ್ ಮುಕರ್ರಮ / ಮದೀನತುಲ್ ಮುನವ್ವರ ಮಣ್ಣಿಗೆ ಬರುವ ಹಜ್ಜಾಜ್ ಗಳ ಸೇವೆಗಾಗಿ ಹಗಲಿರುಲು ದುಡಿಯುವ ಸ್ವಯಂಸೇವಕರ ತಂಡ.

ಈ ತಂಡದಲ್ಲಿ ಒಬ್ಬ ಸೇವಕನಾಗಿ ದುಡಿಯಲು ಅವಕಾಶ ಮಾಡಿಕೊಟ್ಟ ಅಲ್ಲಾಹನಿಗೆ ಅದೆಷ್ಟು ಶುಕ್’ರ್ ಹೇಳಿದರೂ ಸಾಕಾಗಲ್ಲ. ಕಾರಣವೇನೆಂದರೆ ಒಬ್ಬ ಸ್ವಯಂಸೇವಕನಾಗಿ ಅಲ್ಲಾಹನ ತೃಪ್ತಿಯನ್ನು ಮಾತ್ರ ಮನಸ್ಸಿನಲ್ಲಿಟ್ಟು ಸುಡುಬಿಸಿಲಲ್ಲಿ ಕಾರ್ಯಾಚರಿಸುವಾಗ ಯಾರದರೂ ಒಬ್ಬ ಹಜ್ಜಾಜ್ ಅವರ ವಾಸಸ್ಥಳ ಅಥವ ಅವರಿಗೆ ಹೋಗಬೇಕಾದ ಸ್ಥಳ ತಿಳಿಯದೇ ಅದರಲ್ಲೂ ಇನ್ನು ಕೆಲವರಿಗೆ ಸ್ವಂತ ಭಾಷೆಯಲ್ಲದ್ದೇ ಬೇರೆ ಭಾಷೆಯೂ ತಿಳಿಯಲ್ಲ, ಹೀಗಿರುವಾಗ ಏನು ಮಾಡಬೇಕೆಂದು ತೋಚದೇ ಅಲ್ಲಿಂದಿಲ್ಲಿ ಅಲೆದಾಡುವಾಗ ನಾವು ಅವರಿಗೆ ಆಸರೆಯಾಗಿ ಅವರ ಗುರಿಮುಟ್ಟಿದಾಗ ಅವರ ಮನಸ್ಸಿನಲ್ಲಾಗುವ ಸಂತೋಷವನ್ನು ಅವರ ಕಣ್ಣಿಂದಲೇ ತಿಳಿಯಬಹುದಾಗಿದೆ. ಅಲ್ಲಾಹನ ಅತಿಥಿಗಳ ಆ ಸಂತೋಷವನ್ನು ಕಂಡು ಸ್ವಯಂಸೇವಕರಾದ ನಮ್ಮ‌ ಮನಸ್ಸು ಏನೋ ಸಾಧಿಸಿದಂತೆ ಸಂತೋಷದಿಂದ ಕುಣಿದಾಡುವ ಅನುಭವ. ಇಷ್ಟಕ್ಕೇ ಮುಗಿಯಲಿಲ್ಲ, ತನ್ನ ಗುರಿಮುಟ್ಟಿಸಲು ಸಹಕಾರಿಯಾದ ಈ ಸ್ವಯಂಸೇವಕನಿಗೆ, ಅವನ ಕುಟುಂಬದ ಸದಸ್ಯರಿಗೆ, ಇಂತಹ ತಂಡವನ್ನು ತಯಾರಿಸಿ ಕಾರ್ಯಾಚರಿಸುತ್ತಿರುವ ಕೆಸಿಎಫ್ ನಂತಹ ಸಂಘಟನೆಗಳಿಗೆ, ಅದರ ನೇತಾರರಿಗೆ ಹೀಗೆ ನಮಗೆ ಸಂಭಂದಪಟ್ಟ ಎಲ್ಲರಿಗೂ ಪವಿತ್ರ ಮಣ್ಣಿನಲ್ಲಿ ಹಾಜಿಗಳು ಮಾಡುವ ದುಆ. ಈ ದುಆ ಒಮ್ಮೆಯೂ ಸ್ವೀಕರಿತವಲ್ಲದೆ ಇರಲು ಸಾಧ್ಯವೇ ಇಲ್ಲ.‌ ಕೇವಲ ಅಲ್ಲಾಹನ ತೃಪ್ತಿಯನ್ನು ಬಯಸಿ ಈ ಕಾರ್ಯಾಚರಣೆಗೆ ಹೊರಟ ಸ್ವಯಂ ಸೇವಕನಿಗೆ ಇದಕ್ಕಿಂತ ದೊಡ್ಡ ಪ್ರತಿ ಫಲ ಇನ್ನೇನು ಬೇಕು…?

ಇನ್ನು ಒಬ್ಬ ಸ್ವಯಂಸೇವಕನು ಕಾರ್ಯಾಚರಿಸುವ ಸಮಯದಲ್ಲಿ ಅನುಭವಿಸುವ ಕಷ್ಟಗಳನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ. ಮರಣದ ನೋವು ಹೊರತುಪಡಿಸಿ ಅತಿದೊಡ್ಡ ನೋವು ಎಂದರೆ ಅದು ಹೆರಿಗೆ ಸಮಯದಲ್ಲಿ ತಾಯಿ ಅನುಭವಿಸುವ ನೋವಾಗಿರುತ್ತದೆ ಎಂದು ಹೇಳುತ್ತಾರೆ. ಆ ತಾಯಿ ಅದೆಷ್ಟೇ ನೋವು ಅನುಭವಿಸಿದರೂ ಅವಳು ಜನ್ಮ ನೀಡಿದ ಆ ಹಸುಗೂಸಿನ ಮುಖವನ್ನು ಕಂಡಾಗ ಅವಳ ನೋವು ಮಾಯವಾಗುತ್ತದೆಯಂತೆ, ಅದೇ ರೀತಿ ಇಲ್ಲಿ ಒಬ್ಬ ಸ್ವಯಂ ಸೇವಕ ಅದೆಷ್ಟೇ ಕಷ್ಟ ಅನುಭವಿಸಿದರೂ ಹಜ್ಜಾಜ್ ಗಳ ಮುಖದಲ್ಲಿ ಕಾಣುವ ಆ ಮಂದಹಾಸವನ್ನು ಕಂಡಾಗ ಅವರ ಕಷ್ಟವೂ ಲೆಕ್ಕವೇ ಅಲ್ಲ ಎಂದು ತೋಚುತ್ತದೆ. ಹೆರಿಗೆ ನೋವು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿ ಇದುವರೆಗೆ ಯಾವುದೇ ಹೆಣ್ಣು ನಾನು ತಾಯಿಯಾಗುವುದಿಲ್ಲ ಎಂದು ಹೇಳಿದ ಚರಿತ್ರೆ ಇರಲ್ಲ, ಅದೇ ತರ ಒಮ್ಮೆ ಹೆಚ್ ವಿ ಸಿ ಯಲ್ಲಿ ಕಾರ್ಯಾಚರಿಸಿದರೆ ಅದೆಷ್ಟೇ ಕಷ್ಟವಾದರೂ ಮತ್ತೆ ಅವನಿಂದ ಹೆಚ್ ವಿ ಸಿ ಗೆ ಬರದಿರಲು ಸಾಧ್ಯವಿಲ್ಲ.

ಹಜ್ಜ್ ಸಮಯದಲ್ಲಿ ಮಕ್ಕತುಲ್ ಮುಕರ್ರಮದಲ್ಲಿರುವ ಬಿಸಿಲಿನ ತಾಪಮಾನ ಎಷ್ಟೆಂದು ಈಗ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಅದರಲ್ಲೂ ಕೆಲವರು ಹಜ್ಜಾಜ್ ಗಳನ್ನು ಗಾಲಿಕುರ್ಚಿಯಲ್ಲಿ ಕೂರಿಸಿ ಕಿಲೂಮೀಟರ್ ದೂರದವರೆಗೆ ಅವರನ್ನು ದೂಡಿಕೊಂಡು ಹೋಗುತ್ತಿರುತ್ತಾರೆ, ಇನ್ನು ಕೆಲವರು ಹಜ್ಜಜ್ ಗಳನ್ನು ಸ್ವಂತ ಹೆಗಲ ಮೇಲೆ ಹೊತ್ತುಕೊಂಡು ಅವರ ಸ್ಥಳಕ್ಕೆ ತಲುಪಿಸುತ್ತಾರೆ. ಇಷ್ಟೆಲ್ಲಾ ಕಷ್ಟ ಅನುಭವಿಸಿದರೂ ಅದು ಕೇವಲ ಅವರ ಶರೀರಕ್ಕೆ ಆಗುವ ಕಷ್ಟಗಳಾಗಿರುತ್ತದೆ ಹೊರತು ಅವರ ಮನಸ್ಸಿಗಲ್ಲ. ಇದಕ್ಕೆಲ್ಲಾ ಕಾರಣ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಎನ್ನುವ ಕನ್ನಡಿಗರ ಆಶಾಕಿರಣ ಸುಲ್ತಾನುಲ್ ಉಲಮಾರಂತಹ ಮಹಾನ್ ಪಂಡಿತರು ನೇತ್ರತ್ವ ನೀಡುತ್ತಿರುವ ಸಂಘಟನೆ ನೀಡುವ ತರಬೇತಿಯಾಗಿದೆ. ಕೆಸಿಎಫ್ ಸಂಘಟನೆಯೂ ಇದು ನಾಲ್ಕನೇ ವರ್ಷವಾಗಿದೆ ಹೆಚ್ ವಿ ಸಿ ನಡೆಸುತ್ತಿರುವುದು. ಪ್ರತೀ ವರ್ಷವೂ ಕೇವಲ 300 ರಿಂದ 400 ಸ್ವಯಂಸೇವಕರನ್ನು ಒಳಗೊಂಡ ಸಣ್ಣ ತಂಡ ಕಾರ್ಯಾಚರಣೆ ನಡೆಸುವುದಾದರೂ ಜಮ್ರಾತ್, ಮಿನಾ, ಮುಝ್ದಲಿಫಾ, ಅಝೀಝಿಯಾ ಹೀಗೇ ಎಲ್ಲಾ ಕಡೆಗಳಲ್ಲೂ ಕೆಸಿಎಫ್ ಸಮವಸ್ತ್ರದ ಸ್ವಯಂಸೇವಕರನ್ನು ಕಾಣಲು ಸಾಧ್ಯವಾಗುತ್ತದೆ. ಇದೆಲ್ಲಾವೂ ಅಲ್ಲಾಹನ ಅನುಗ್ರಹ ಹಾಗೂ ಮಹನ್ ಪಂಡಿತರ ನೇತ್ರತ್ವ.

ಹೆಚ್ ವಿ ಸಿ ಯಲ್ಲಿ ಕಾರ್ಯಾಚರಿಸಿದ ಪ್ರತೀಯೊಬ್ಬ ಸದಸ್ಯನ ಸೇವೆಯ ಫಲವಾಗಿ ಸತತವಾಗಿ ನಾಲ್ಕನೇ ಸಲ ಸೌದಿ ಅರೇಬಿಯಾ ಆರೋಗ್ಯ ಇಲಾಖೆಯಿಂದ ಪ್ರಶಂಸನೀಯ ಪತ್ರ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಲು ಸಾಧ್ಯವಾಯಿತು.

ಕೆಸಿಎಫ್ ಎನ್ನುವ ಸಂಘಟನೆಯೂ ನಡೆಸುವ ಈ ಮಹತ್ತರವಾದ ಕಾರ್ಯಾಚರಣೆಯನ್ನು ಅಂತ್ಯ ದಿನದ ವರೆಗೆ ಮುಂದುವರಿಸಲು ಅಲ್ಲಾಹನು ತಫೀಕ್ ನೀಡಿ ಅನುಗ್ರಹಿಸಲಿ…ಆಮೀನ್ ಯಾ ರಬ್ಬಲ್ ಆಲಮೀನ್…

ಸಲಾಂ ಪಡ್ಪು (ಎಣ್ಮೂರು)



ಹಜ್ಜಾಜಿಗಳ ಸೇವೆ ಯುದ್ದ ಗೆದ್ದು ಬಂದ ಅನುಭವ..!

ಬೆಂಕಿ ಉಗುಳುವ ಉರಿ ಬಿಸಿಲನ್ನು ನಾಚಿಸುಂವತೆ ಮಾಡಿ
ಮೂರು ದಿನಗಳ ಕಾಲ ದಿನದ ಇಪ್ಪತ್ತನಾಲ್ಕು ಘಂಟೆ ಮಿನ,ಮುಝ್ದಲಿಫಾದ ಚೈತ್ರ ಭೂಮಿಯಲ್ಲಿ ಅಲ್ಲಾಹನಿಗಾಗಿ ವಿನಿಯೋಗಿಸಿ ಸರ್ವಸ್ವವನ್ನೂ ಮರೆತು
ಹಜ್ಜಾಜಿಗಳ ಮನ ಸಂತೈಸಿದ ಅನುಭವವನ್ನು ಬಸ್ಸಿನಲ್ಲಿ ಹಿಂತಿರುಗುವಾಗ ಕೆದಕಿ ಹೊರ ಹಾಕಿದಾಗ ಕೆಸಿಎಫ್-ಎಚ್‌ವಿ‌ಸಿ ಕಾರ್ಯಕರ್ತರ ಮೊಗದಲ್ಲಿ ಯುದ್ಧ ಗೆದ್ದು ಬಂದ ಸಂತಸದ ಕಳೆ ಎದ್ದು ಕಾಣುತ್ತಿತ್ತು.ಅದು ಅವಿಸ್ಮರಣೀಯ ಮತ್ತು ವರ್ಣಾತೀತ.
ಜನ ದಟ್ಟನೆಯಿಂದ ನಿಬಿಡಗೊಂಡ ಐತಿಹಾಸಿಕ ಮಿನ,ಮುಝ್ದಲಿಫಾದ ಎಲ್ಲಾ ಕಡೆಯೂ ಎಚ್‌ವಿಸಿ ಕಾರ್ಯಕರ್ತರು ಸ್ವಯಂ ಸೇವೆಯಲ್ಲಿ ನಿರತಗಿದ್ದರು.
ಈದ್ ಹಬ್ಬಕ್ಕಾಗಿ ವರ್ಷಕ್ಕೊಮ್ಮೆ ಸಿಗುವ ಮೂರ್ನಾಲ್ಕು ದಿನದ ರಜಾವನ್ನು ಉಂಡು ಮಲಗಲು,ಬೀಚ್ ಪಾರ್ಕ್ ಸುತ್ತಾಡಿ ಎಂಜಾಯ್‌ಮೆಂಟ್ ಮಾಡುವ ಅನಿವಾಸಿಗಾರರಿಗೆ ಮಾದರಿಯಾಗಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ ಕೆಸಿಎಫ್-ಎಚ್‌ವಿಸಿ ಕಾರ್ಯಕರ್ತರು ನಿಜಕ್ಕೂ ಶ್ಲಾಘನೀಯರು.

ಎರಡನೇ ಬಾರಿ ಹಜ್ಜಾಜಿಗಳ ಸೇವೆ ಮಾಡಲು ಅವಕಾಶ ಮಾಡಿ ಕೆಸಿಎಫ್ ಸಂಘಟನೆಗೆ ಋಣಿಯಾಗಿದ್ದೇನೆ.
ಈ ಮಹತ್ತರವಾದ ಕಾರ್ಯವನ್ನು ನಮ್ಮಿಂದ ಅಲ್ಲಾಹನು‌ ಸ್ವೀಕರಿಸಿ ಇದಕ್ಕೆ ಪ್ರತಿಯಾಗಿ ಸ್ವರ್ಗೀಯ ಉದ್ಯಾನದಲ್ಲಿ ಹಾರಾಡುವ ಹೂದುಂಬಿಯಾಗಿಸಲಿ.ಅಮೀನ್.

-ಸಿ.ಐ.ಇಸ್ಹಾಕ್ ಫಜಿರ್.

error: Content is protected !! Not allowed copy content from janadhvani.com