ಪುತ್ತೂರು- ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಪ್ರವಾಸಿ ಸಂಗಮವು ಯಶಸ್ವಿಯಾಗಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಗಮವನ್ನು ಮರ್ಕಝುಲ್ ಹುದಾ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಗೌರವ ಅಧ್ಯಕ್ಷರಾದ ಹಾಜಿ ಅನ್ವರ್ ಹಸೈನ್ ಗೂಡಿನಬಳಿ ಉದ್ಘಾಟಿಸಿದರು.
ಸೌದಿ ಅರೇಬಿಯಾ, ಯು.ಎ.ಇ., ಒಮಾನ್ ಮುಂತಾದ ರಾಷ್ಟ್ರಗಳಿಂದ ಸುಮಾರು ಐವತ್ತು ಮಂದಿ ಪ್ರತಿನಿಧಿಗಳು ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಅನ್ವರ್ ಹುಸೈನ್ ಗೂಡಿನಬಳಿ, ಯು.ಎ.ಇ.ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮುಹಮ್ಮದ್ ಶುಕೂರ್ ಮನಿಲ, ಉಪಾಧ್ಯಕ್ಷ ಅಬ್ದುಲ್ಲ ಮುಸ್ಲಿಯಾರ್ ಕುಡ್ತಮೊಗರು, ಒಮಾನ್ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷರಾದ ಉಮರ್ ಸಖಾಫಿ ಮಿತ್ತೂರು,
ದಮ್ಮಾಂ ಸಮಿತಿಯ ನೌಶಾದ್ ಪೋಳ್ಯ ,ಹಾಗೂ ಇತ್ತೀಚೆಗೆ ಸುನ್ನಿ ಮೆನೇಜ್ಮೆಮೆಂಟ್ ಸಮಿತಿಯ ವಿಟ್ಲ ಝೋನ್ ಅಧ್ಯಕ್ಷರಾಗಿ ಆಯ್ಕೆಯಾದ ಹಾಜಿ ಅಬ್ದುಲ್ ರಹ್ಮಾನ್ ಅರಿಯಡ್ಕ ಅವರನ್ನು ಸಂಸ್ಥೆಯ ಹೆಸರಿನಲ್ಲಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ಸಮಾವೇಶದಲ್ಲಿ ಅಬ್ದುಲ್ಲ ಮುಸ್ಲಿಯಾರ್ ಕುಡ್ತಮೊಗರ್, ಅಬ್ದುಲ್ ಹಮೀದ್ ಅರಮೆಕ್ಸ್, ಮುಹಮ್ಮದ್ ಅಲಿ ನೆಕ್ಕಿಲಾಡಿ, ನೌಶಾದ್ ಪೋಲ್ಯ, ಶಕೂರ್ ಮನಿಲ, ಉಮರ್ ಸಖಾಫಿ ಮಿತ್ತೂರು,ಸೌದಿ ಅರೇಬಿಯಾ ಸಂಚಾಲಕರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಶರೀಫ್ ಅಮಾನಿ ಇರ್ದೆ, ಒಮಾನ್ ಸಂಚಾಲಕ ಉಬೈದ್ ಸಖಾಫಿ ಮಿತ್ತೂರು ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನಿ ಕಾಮಿಲ್ ಚರ್ಚೆ ಮಂಡಿಸಿದರು, ಕಾರ್ಯಾಧ್ಯಕ್ಷ ಅರಿಯಡ್ಕ ಅಬ್ದುಲ್ ರಹ್ಮಾನ್ ಹಾಜಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾಲೇಜು ಸಂಚಾಲಕ ಶಾಕಿರ್ ಹಾಜಿ ಸ್ವಾಗತಿಸಿ ಮೆನೇಜರ್ ಅಲೀ ಸ ಅದಿ ಬಲ್ಕಾಡ್ ಧನ್ಯವಾದ ಸಲ್ಲಿಸಿದರು.ಗಲ್ಫ್ ಡೆಸ್ಕ್ ಕನ್ವೀನರ್ ಹನೀಫ್ ಸ -ಅದಿ ಸವಣೂರು ಕಾರ್ಯಕ್ರಮ ನಿರ್ವಹಿಸಿದರು.