ಸೌದಿ ಅರೇಬಿಯಾದಲ್ಲಿ ನಡೆಯುವ ಪವಿತ್ರ ಹಜ್ ಮಹಾ ಸಂಗಮಕ್ಕೆ ದೇಶ ವಿದೇಶಗಳಿಂದ ಪ್ರತಿ ವರ್ಷವೂ ಲಕ್ಷಾಂತರ ಯಾತ್ರಾರ್ಥಿಗಳು ಆಗಮಿಸುತ್ತಾರೆ.
ಯಾತ್ರಾರ್ಥಿಗಳ(ಹಾಜಿಗಳ) ಸೇವೆಗಾಗಿ ಕಳೆದ ನಾಲ್ಕು ವರ್ಷಗಳಿಂದ ಸೌದಿ ಅರೇಬಿಯಾದ್ಯಾಂತ ನೆಲೆಸಿರುವ ಅನಿವಾಸಿ ಕನ್ನಡಿಗರ ಅದ್ವಿತೀಯ ಸಂಘಟನೆ ಕೆಸಿಎಫ್‌ನ ದುಡಿಮೆ ನಿರತ ಕಾರ್ಯಕರ್ತರು ಹಾಜಿಗಳ ಸೇವೆಗಾಗಿ “ಎಚ್.ವಿ.ಸಿ” ಎಂಬ ತಂಡವನ್ನು ರಚಿಸಿ ಮಕ್ಕಾದ ಮಿನಾ,ಮುಝ್ದಲಿಫ ತಲುಪಿದ ಯಾತ್ರಾರ್ಥಿಗಳ ಸೇವೆಗಾಗಿ ಮೂರು ದಿನಗಳ ಕಾಲ ದಿನದ ಇಪ್ಪತ್ತನಾಲ್ಕು ಘಂಟೆಯೂ ಸ್ವಯಂ ಸೇವೆಯಲ್ಲಿ ನಿರತರಾಗುತ್ತಾರೆ.
ಮಕ್ಕಾ,ಮದೀನಾದಲ್ಲಿ ನೆಲೆಸಿರುವ ಕೆಸಿಎಫ್ ಕಾರ್ಯಕರ್ತರು ಕಳೆದ ಒಂದು ತಿಂಗಳಿನಿಂದ ಸ್ವಯಂ ಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ.
ಕೆಸಿಎಫ್ ಕಾರ್ಯಕರ್ತರ ದಣಿವರಿಯದ ಪ್ರಮಾಣಿಕ ಸೇವೆಯನ್ನು ಮನಗಂಡ ಸೌದಿ ಆರೋಗ್ಯ ಇಲಾಖೆಯ ಅಧೀನದಲ್ಲಿರುವ “ನ್ಯು ಮಿನಾ ಆಸ್ಪತ್ರೆ” ಕಳೆದ ನಾಲ್ಕು ವರ್ಷಗಳಿಂದ ಪ್ರಶಂಸನೀಯ ಪತ್ರ ನೀಡಿ ಗೌರವಿಸುತ್ತಿದೆ ಅದರಂತೆ ಇಂದು ಕೂಡ (23/8/018) ರಂದು ಮಿನಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗ ಕೆಸಿಎಫ್ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿ ಪ್ರಶಂಸ ಪತ್ರ ನೀಡಿ ಉರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಕೆಸಿಎಫ್
ಎಚ್‌ವಿಸಿ ರಾಷ್ಟ್ರೀಯ ಸಮಿತಿ ಚೇರ್ಮನ್ ಸಲೀಂ ಕನ್ಯಾಡಿ,ರಾಷ್ಟ್ರೀಯ ಸಮಿತಿ ಪ್ರ.ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ ಮತ್ತು ಕೆಸಿಎಫ್-ಎಚ್‌ವಿಸಿ ಕಾರ್ಯಕರ್ತರು ಉಪಸ್ಥಿತಿಯಿದ್ದರು.
Masha allah Barakallah