ಸುಳ್ಯ ತಾಲೂಕಿನ ಎಲಿಮಲೆಯಲ್ಲಿ ಸಂಭ್ರಮದ ಈದ್ ಹಬ್ಬ ಆಚರಿಸಲಾಯಿತು. ಎಲಿಮಲೆ ಜುಮಾ ಮಸೀದಿಯಲ್ಲಿ ಪೆರ್ನಾಳ್ ವಿಶೇಷ ಪ್ರಾರ್ಥನೆ ನಡೆಯಿತು. ಈ ಸಂಧರ್ಭದಲ್ಲಿ ಎಲಿಮಲೆ ಮುದರ್ರಿಸ್ ಅಬ್ದುಲ್ ರಝಾಕ್ ಸಖಾಫಿ ಕಳಂಜಿಬೈಲು ರವರು ಪೆರ್ನಾಳ್ ಸಂದೇಶದಲ್ಲಿ ಬಡವರನ್ನು ಮತ್ತು ಅಸಹಾಯಕರನ್ನು ನಿರ್ಲಕ್ಷಿಸಿ ದುಂದು ವೆಚ್ಚಗಳಿಂದ ಮೈಮರೆತು ಜೀವನ ನಡೆಸಿದಾಗ ಅಲ್ಲಾಹನ ಕೋಪಕ್ಕೆ ಕಾರಣವಾಗಿ ಪ್ರಕ್ರತಿ ವಿಕೋಪಗಳು ಸಂಭವಿಸುತ್ತಿದೆ. ಆದ್ದರಿಂದ ಮಾನವ ಪಾಠವನ್ನು ಕಲಿತು ಮುಂದಿನ ಜೀವನದಲ್ಲಿ ಯಶಸ್ಸು ಗಳಿಸಲು ಪ್ರಯತ್ನಿಸಬೇಕು. ಅತಿವ್ರಷ್ಟಿಯಿಂದ ಸಂಕಷ್ಟಕ್ಕೊಳಗಾದ ನಿರಾಶ್ರಿತರಿಗೆ ಮತ್ತು ನಿರ್ಗತಿಕರಾದವರಿಗೆ ಹಬ್ಬದ ಸಂಭ್ರಮಾಚರಣೆಯ ಖರ್ಚಿನ ಬಹುಪಾಲು ಮೀಸಲಿಟ್ಟು ಸಹಾಯ ಮಾಡಬೇಕು ಎಂದು ಕರೆನೀಡಿದರು. ಇದೇ ಸಂಧರ್ಭದಲ್ಲಿ ನಿರ್ಗತಿಕ ಕುಟುಂಬಕ್ಕೆ ಮನೆ ನಿರ್ಮಾಣದ ಸಹಾಯಾರ್ಥ ಧನ ಸಂಗ್ರಹಿಸಲಾಯಿತು. ಬೆಳಿಗ್ಗೆ 8 ಗಂಟೆಯಿಂದಲೇ ಮಸೀದಿಗೆ ಆಗಮಿಸಿದ ಮುಸ್ಲಿಮರು ತಕ್ಬೀರ್ ಮೊಳಗಿಸಿ ಅಲ್ಲಾಹನಿಗೆ ಸ್ತುತಿ ಅರ್ಪಿಸಿದರು.

ನಮಾಜಿನ ಬಳಿಕ ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯ ಮಾಡಿ ಸಂಭ್ರಮ ಹಂಚಿಕೊಂಡರು. ಜಮಾ ಅತ್ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಆಡಳಿತ ಕಾರ್ಯದರ್ಶಿ ಟಿ.ವೈ.ಇಬ್ರಾಹಿಂ,
ಮಾಜಿ ಅಧ್ಯಕ್ಷರಾದ ಮೂಸ ಹಾಜಿ, ಕಾರ್ಯದರ್ಶಿ ಹನೀಫ್ ಮೆತ್ತಡ್ಕ, ಸದರ್ ಉಸ್ತಾದ್ ಮಹಮೂದ್ ಸಖಾಫಿ, ಜೀರ್ಮುಖಿ ಇಮಾಂ ಸೂಫಿ ಮುಸ್ಲಿಯಾರ್, ಜಿ ಹೆಚ್ ಇಬ್ರಾಹಿಂ, ಮುಹಮ್ಮದ್ ಕುಂಞ ಮೇಲೆ ಬೈಲು ಮೊದಲಾದವರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ