janadhvani

Kannada Online News Paper

ಮಿನಾದಲ್ಲಿ ಕೆ.ಸಿ.ಎಫ್ ಹಜ್ಜ್ ಸ್ವಯಂ ಸೇವೆಗೆ ಚಾಲನೆ

ಮಕ್ಕಾ: ಮಿನಾದಲ್ಲಿ ಹಜ್ಜಾಜಿಗಳ ಸೇವೆಗಾಗಿ ಹಲವಾರು ವರ್ಷಗಳಿಂದ ನಿರಂತರ ಕಾರ್ಯಾಚರಿಸುತ್ತಿರುವ ಕೆ.ಸಿ.ಎಫ್ ಸೌದಿ ಅರೇಬಿಯಾ ಕಾರ್ಯಕರ್ತರ HVC ಹಜ್ಜ್ ಸ್ವಯಂಸೇವಕರ ಕಾರ್ಯಕ್ರಮದ ಉದ್ಘಾಟನೆಯನ್ನು ತಾ: 21-8-2018 ರಂದು ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ನೆರವೇರಿಸಿದರು.

ಸತತ 3 ದಿನಗಳ ಕಾಲನಡೆಯುವ HVC ಯ ರೂಪುರೇಖೆಯ ಬಗ್ಗೆ ವಿವರಿಸುತ್ತಾ, ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಾಹನ ಅತಿಧಿಗಳಾದ ಹಾಜಿಗಳನ್ನು ಸೇವೆಗೈಯ್ಯುವ ಹಾಗೂ ಅತ್ಯವಶ್ಯಕ ವಿಷಯಗಳ ಬಗ್ಗೆ ಕೆ.ಸಿ.ಎಫ್ ಸೌದಿ ಅರೇಬಿಯಾ HVC ಕನ್ವೀನರ್ ಸಲೀಂ ಕನ್ಯಾಡಿ ಮಾರ್ಗದರ್ಶನ ನೀಡಿದರು.

ಕೆ.ಸಿ.ಎಫ್ ಜಿದ್ದಾ ಝೋನಲ್ ಅಧ್ಯಕ್ಷ ಹನೀಫ್ ಸಖಾಫಿ ಸಾಲೆತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸದ್ದರು. ಸೈಯ್ಯದ್ ಝಕರಿಯ್ಯಾ ತಂಙಳ್ ದುಆಗೈದರು. ಸೈಯ್ಯದ್ ಜಾಫರ್ ಸಾದಿಕ್ ತಂಙಳ್ ರಿಯಾದ್, HVC ಮಕ್ಕಾ ಕೋರ್ಡಿನೇಟರ್ ಮೂಸಾ ಹಾಜಿ ಕಿನ್ಯಾ, ಫಾರೂಕ್ ನಈಮಿ ಮದೀನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ಸಿ.ಎಫ್ ಮಕ್ಕಾ ಸೆಕ್ಟರ್ ಅಧ್ಯಕ್ಷ ಹನೀಫ್ ಸಖಾಫಿ ಬೊಲ್ಮಾರು ಸ್ವಾಗತ ಮಾಡಿದರೆ, GM ಸುಲೈಮಾನ್ ಹನೀಫಿ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !! Not allowed copy content from janadhvani.com