janadhvani

Kannada Online News Paper

SSF ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ನಗರವೊಂದರಲ್ಲೇ ಸಂಗ್ರಹಿಸಲಾದ 100000 (ಒಂದು ಲಕ್ಷ) ರೂಪಾಯಿಗಳನ್ನೂ ಹಾಗೂ ಬಾಳೆಹೊನ್ನೂರು ಡಿವಿಶನ್ ಸಂಗ್ರಹ ಮಾಡಿದ 21200 ರೂ ಮತ್ತು ಸುಮಾರು 20000 ಮೊತ್ತ ದ ನೋಟ್ ಬುಕ್ ಗಳನ್ನೂ ಜಿಲ್ಲಾ SSF, SYS ಮತ್ತು ಮೊಹಲ್ಲಾ ಜಮಾಅತ್ ನಾಯಕರ ಸಮ್ಮುಖದಲ್ಲಿ ರಾಜ್ಯ SSF ನಾಯಕರಿಗೆ ಹಸ್ತಾಂತರಿಸಲಾಯಿತು. ಇದೇ ವೇಳೆ ಜಮಾಅತ್ ಗಳಲ್ಲಿ ಸಂಗ್ರಹಿಸಲಾದ 16160 ರೂಪಾಯಿಯನ್ನು ಸಹ ರಾಜ್ಯ ಸುನ್ನೀ ಕೋ-ಓರ್ಡಿನೇಟ್ ಸಮಿತಿಯ ನಾಯಕರಿಗೆ ಹಸ್ತಾಂತರಿಸಲಾಯಿತು.
ಚಿಕ್ಕಮಗಳೂರು ಬದ್ರಿಯ್ ಮಸೀದಿಯಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ರಾಜ್ಯ SYS ಉಪಾಧ್ಯಕ್ಷ ಉಪ್ಪಳ್ಳಿ ತಂಙಳ್, ಕೋಶಾಧಿಕಾರಿ ಯೂಸುಫ್ ಹಾಜಿ ಉಪ್ಪಳ್ಳಿ, SSF ಜಿಲ್ಲಾಧ್ಯಕ್ಷ ಹಾಮೀಂ ತಂಙಳ್, ರಾಜ್ಯ ನಾಯಕರಾದ ಹುಸೈನ್ ಸ ಅದಿ ಹೊಸ್ಮಾರು, ಉಸ್ಮಾನ್ ಹಂಡುಗುಳಿ, ಜಿಲ್ಲಾ ನಾಯಕರಾದ ಮುನೀರ್, ಮುಸ್ತಫಾ ಝುಹ್ರಿ, ಸಫ್ವಾನ್ ಸಖಾಫಿ, ಇಬ್ರಾಹೀಂ ಸ ಅದಿ, ಇಸ್ಮಾಈಲ್ ಲತೀಫಿ, ಇಬ್ರಾಯಾಕ ಮುಂತಾದವರು ಉಪಸ್ಥಿತರಿದ್ದರು.
ಡಿವಿಶನ್ ಅಧ್ಯಕ್ಷ ರಫೀಖ್ ಸಖಾಫಿ, ಸದಸ್ಯರಾದ ಖಲಂದರ್ ಸಖಾಫಿ, ತಸ್ಲೀಂ, ಮೀರಾನ್, ಖಾದರ್ ಮುಸ್ಲಿಯಾರ್, ಜ.ಕಾರ್ಯದರ್ಶಿ ಇರ್ಫಾನ್, ಸಯ್ಯಿದ್ ಅಲಿ, ಫಾರೂಖ್ ಮುಸ್ಲಿಯಾರ್, ನಝೀರ್ ಉಪ್ಪಳ್ಳಿ, ಶಾಹುಲ್ ಹಮೀದ್ ಸಖಾಫಿ, ಸಫ್ವಾನ್-ಶಾಹೀನ್ ಬದ್ರಿಯ್ಯ , ಫೈಝಲ್ ಶಕ್ತಿ ನಗರ ಮುಂತಾದವರ ಶಕ್ತಿ ಮೀರಿದ ಪ್ರಯತ್ನವನ್ನು ಸ್ಮರಿಸಲಾಯ್ತು ಹಾಗೂ ದಾನಿಗಳಿಗೂ ಎಲ್ಲಾ ನಾಯಕ -ಕಾರ್ಯಕರ್ತರಿಗೂ ಅಲ್ಲಾಹು ಅರ್ಹ ಫಲವನ್ನೂ ಪ್ರತಿಫಲವನ್ನೂ ನೀಡಲಿ ಎಂಬ ಪ್ರಾರ್ಥನೆ ಯೊಂದಿಗೆ ಅಭಿನಂದಿಸಲಾಯ್ತು.

error: Content is protected !! Not allowed copy content from janadhvani.com