janadhvani

Kannada Online News Paper

ಹಜ್ಜಾಜಿಗಳ ಸೇವೆಗಾಗಿ ಸಜ್ಜಾಗಿ ನಿಂತ ಕೆಸಿಎಫ್‌ನ ಯುವ ಸನ್ನದ್ಧ ಪಡೆಗಳು.KCF-HVC 2018.

ಜಗತ್ತಿನ ವಿವಿಧ ದಿಕ್ಕಿನಿಂದ ಅಲ್ಲಾಹನ ಅತಿಥಿಯಾಗಿ ಆಗಮಿಸುವ ಲಕ್ಷಾಂತರ ಹಜ್ಜಾಜಿಗಳ ಸೇವೆಗಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF-HVC Hajj volunteer core.2018)ಕಾರ್ಯಕರ್ತರು ಸೇನಾನಿ ಪಡೆಗಳಂತೆ ಮೈ ಕೊಡವಿ ಸನ್ನದ್ಧರಾಗಿ ಅಣಿಯಾಗಿರುವರು.
ಸತತ ನಾಲ್ಕು ವರ್ಷದಿಂದ ಹಜ್ಜಾಜಿಗಳ ಸೇವೆಯಲ್ಲಿ ತೊಡಗಿರುವ ಕೆಸಿಎಫ್ ಕಾರ್ಯಕರ್ತರು ಈ ಬಾರಿಯೂ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಅತ್ಯುತ್ಸಾಹದಿಂದ ಮಿನಾ,ಮುಝ್ಧಲಿಫಾ ತಲುಪಿ ದನಿವರಿಯದ ಸೇವೆಯ ಮೂಲಕ
ಉರಿಯುವ ಬಿಸಿಲಿಗೆ,ಬೀಸುವ ಬಿಸಿಗಾಳಿಗೆ ಮೈಯೊಡ್ಡಿ ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ಬಯಸಿ ಅವನ ಆತ್ಮೀಯ ಕರೆಗೆ ಓಗೊಟ್ಟು ಆಗಮಿಸಿದ ಹಾಜಿಗಳ ಸೇವೆಗಾಗಿ ತನ್ನನ್ನೇ ಮರೆತು
ಚೈತ್ರ ನಾಡಿಗೆ ತೆರಳುವರು.

ಮಿನಾ,ಮುಝ್ಧಲಿಫಾ ಪ್ರದೇಶ ಶ್ವೇತ ವಸ್ತ್ರ ದಿರಿಸುದಾರಿಗಳಾದ ಹಜ್ಜಾಜಿಗಳ ನಡುವೆ ಹಳದಿ ಟೋಪಿ, ಜಾಕೆಟ್ (ಡ್ರೆಸ್ ಕೋಡ್) ಧರಿಸಿದ ಕರುನಾಡಿನ ಕೆಸಿಎಫ್ ವೀರರು ಬೆಳದಿಂಗಳಲ್ಲಿ ಬೆಳಗುವ ಮಿಂಚು ಹುಳಗಳಂತೆ ಕಾಣಲಿದ್ದಾರೆ.
ಹಾಜಿಗಳಿಗೆ ಬೇಕಾದ ಎಲ್ಲಾ ರೀತಿಯ ಸಹಾಯ,ಸಹಕಾರವನ್ನು ಒದಗಿಸಿಕೊಟ್ಟು ದಿನದ ಇಪ್ಪತ್ತನಾಲ್ಕು ಘಂಟೆಯೂ ಕೆಸಿಎಫ್ ಕಾರ್ಯಕರ್ತರು ಹಜ್ಜಾಜಿಗಳ ಬೇಕು ಬೇಡಗಳಿಗೆ ಸ್ಪಂದಿಸಲಿದ್ದಾರೆ.
ಮಕ್ಕಾ,ಮದೀನಾ ಪ್ರದೇಶದಲ್ಲಿ ಉದ್ಯೋಗದಲ್ಲಿರುವ ಕೆಸಿಎಫ್ ಕಾರ್ಯಕರ್ತರು ಕಳೆದ ಒಂದು ತಿಂಗಳಿನಿಂದ ಹಾಜಿಗಳ ಸೇವೆಯಲ್ಲಿಅ ತೊಡಗಿಕೊಂಡಿದ್ದಾರೆ.
ಮಕ್ಕಾ,ಹೊರತು ಪಡಿಸಿ ಸೌದಿ ಅರೇಬಿಯಾದ
ಗಸೀಂ,ದಮ್ಮಾಂ,ರಿಯಾದ್,ಜಿದ್ದಾ ಮತ್ತು ಮದೀನಾ ಭಾಗದಲ್ಲಿ ನೆಲೆಸಿರುವ ನೂರಾರು ಕೆಸಿಎಫ್ HVC ಕಾರ್ಯಕರ್ತರು (ಮಕ್ಕಾ)ಕ್ಕೆ ನಾಳೆ ದಿನಾಂಕ 20/8/018 ರಂದು ಏಕಕಾಲಕ್ಕೆ ತಲುಪಲಿರುವರು.

ಜಾಗತಿಕ ಮುಸಲ್ಮಾನರು ಬಕ್ರೀದ್ ಹಬ್ಬ ಸಡಗರ,ಸಂಭ್ರಮದಿಂದ
ಆಚರಿಸುವಾಗ ಕೆಸಿಎಫ್‌ನ ಕಾರ್ಯಕರ್ತರು ಹಾಜಿಗಳ ಸೇವೆಯಲ್ಲಿ ತೊಡಗಿಕೊಂಡಿರುವುದು ಪ್ರಶಂಸನೀಯ ಹಾಗೂ ಅಲ್ಲಾಹನ ಬಳಿ ದೊಡ್ಡ ಪ್ರತಿಫಲವುಳ್ಳ ಕಾರ್ಯವಾಗಿದೆ.
ಆಫಿಯತ್ ತುಂಬಿದ ಆರೋಗ್ಯದಿಂದ ಹಾಜಿಗಳ ಸೇವೆಗೈದು ಮರಳಿ ಉದ್ಯೋಗದಲ್ಲಿ ಸೇರಿಕೊಳ್ಳಲು ಕೆಸಿಎಫ್ ಕಾರ್ಯಕರ್ತರಿಗೆ ಅಲ್ಲಾಹನು ತೌಫೀಕ್ ನೀಡಲಿ ಎಂದು ದುಃಅ ಮೂಲಕ KCF-HVC ಕಾರ್ಯಕರ್ತರಿಗೆ
ಶುಭ ಹಾರೈಸುವೆನು..

 

 ಸಿ.ಐ.ಇಸ್ಹಾಕ್ ಫಜಿರ್
ಕೆಸಿಎಫ್ ಅಲ್ ಹಸ್ಸ ದಮ್ಮಾಂ.

error: Content is protected !! Not allowed copy content from janadhvani.com