ಎಸ್ಸಸ್ಸಫ್ ತುಂಬೆ ಶಾಖೆ ವತಿಯಿಂದ ಕಳೆದ ಭಾರಿಯೂ ನೀಡಿರುವಂತೆ ಈ ಭಾರಿಯೂ ಬಕ್ರೀದ್ ಹಬ್ಬದ ಪ್ರಯುಕ್ತ ತುಂಬೆ ನಾಡಿನ 13 ಬಡ ಕುಟುಂಬದ 32 ಸದಸ್ಯರಿಗೆ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ ಇಂದು ಬೆಳಿಗ್ಗೆ ಎಸ್ಸಸ್ಸಫ್ ತುಂಬೆ ಶಾಖೆ ಅಧ್ಯಕ್ಷರಾದ ಬಹು!ಮುಸ್ತಾಕ್ ಮದನಿ ಉಸ್ತಾದರ ನೇತೃತ್ವದಲ್ಲಿ ಪೆರ್ನಾಲ್ ಡ್ರೆಸ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ತುಂಬೆ ಮುಹಿಯ್ಯದ್ದಿನ್ ಜುಮಾ ಮಸ್ಜಿದ್ ಇದರ ಅಧ್ಯಕ್ಷರಾದ ಹಾಜಿ!ಅಬ್ದುರಹ್ಮಾನ್ ಅದ್ದಾದಿ,ಉಪಾಧ್ಯಕ್ಷರಾದ ಹಾಜಿ!ಅಬೂಬಕ್ಕರ್.ಟಿ,ಎಸ್ಸಸ್ಸಫ್ ತುಂಬೆ ಶಾಖೆ ಉಪಾಧ್ಯಕ್ಷರಾದ ಹಾಜಿ!ಅಬ್ದುಲ್ ಲತೀಫ್ ಹಿಮಮಿ,ಜನಾಬ್!ಹನೀಫ್ ಎಂ.ಎ,ಸಂಘಟನಾ ಕಾರ್ಯದರ್ಶಿ ಜನಾಬ್ ಅದಂ ಟಿ.ಎ ಮುಂತಾದವರು ಉಪಸ್ಥರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಖಾ ಕಾರ್ಯದರ್ಶಿ ನೌಷಾದ್ ತುಂಬೆ ಧನ್ಯವಾದಗೈದರು.
ವರದಿ:-
ಇರ್ಫಾಝ್ ತುಂಬೆ