janadhvani

Kannada Online News Paper

KCF ಅಜ್ಮಾನ್ ಝೋನ್ ವತಿಯಿಂದ ಅದ್ದೂರಿ ಸ್ವಾತಂತ್ರ್ಯ ಸಂಭ್ರಮ

ಅಜ್ಮಾನ್:ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಜ್ಮಾನ್ ಝೋನ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭವ್ಯಭಾರತದ 72 ನೇ ವರ್ಷದ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯ್ತು.

ಕರೀಂ ಹಾಜಿ (ನ್ಯಾಷನಲ್ ಕಮೀಟಿ ಸದಸ್ಯರು)ಯವರ ನಿವಾಸದಲ್ಲಿ “ಭಾರತ ಎಂದಿಗೂ ಭಾರತೀಯರದ್ದೆ”ಎಂಬ ಘೋಷ ವಾಕ್ಯದೋಂದಿಗೆ ನಡೆದ ಕಾರ್ಯಕ್ರಮವನ್ನು ರಾಷ್ಟಗಿತೆಯೋಂದಿಗೆ ಆರಂಭಿಸಲಾಯ್ತು.

ಶಾಫಿ ಸಖಾಫಿ ಕೋಂಡಂಗೇರಿ ಉಸ್ತಾದರ ಅಧ್ಯಕ್ಷತೆಯಲ್ಲಿ ,ಅಬ್ದುಲ್ ಖಾದರ್ ಸಅದಿ ಉಸ್ತಾದರು (ಇಹ್ಸಾನ್ ನ್ಯಾಷನಲ್ ಕಮಿಟಿ ಕನ್ವೀನರ್)ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅಕ್ರಂ ಬಿ.ಸಿ.ರೋಡ್(ಕಾರ್ಯದರ್ಶಿ)ಸ್ವಾಗತ ಭಾಷಣ ಮಾಡಿದರು.ಅಸ್ಸುಪ್ಪ ಶಿಕ್ಷಣ ವಿಭಾಗದ ಚಯರ್ಮ್ಯಾನ್ ಸಿದ್ದೀಕ್ ಅಮಾನಿ ಉಸ್ತಾದರು “ದುಲ್ ಹಜ್ಜ್” ತಿಂಗಳ ಮಹತ್ವದ ಬಗ್ಗೆ ವಿವರಣೆ ನೀಡಿದರು.

ಸಂಘಟನಾ ವಿಭಾಗದ ಚಯರ್ಮ್ಯಾನ್ ಅಬೂಬಕ್ಕರ್ ಮದನಿ ಉಸ್ತಾದ್ ಹಾಗೂ ಸನಯ್ಯಾ ಸೆಕ್ಟರ್ ಅದ್ಯಕ್ಷರಾದ ಅಸಿಪ್ ಮದನಿ ತುರ್ಕಳಿಕೆ ಉಸ್ತಾದರು ಸ್ವಾತಂತ್ರ್ಯ ಬಗ್ಗೆ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಅಜ್ಮಾನ್ ಝೋನ್ ಕೋಶಾದಿಕಾರಿ ಆದಂ ಈಶ್ವರ ಮಂಗಳ ಸಹಿತ  ಹಲವು ಕಾರ್ಯಕರ್ತರು ಭಾಗವಹಿಸಿದರು.

ಕೆರಳ ಹಾಗೂ ಕರ್ನಾಟಕದ ಕೊಡಗು ಪ್ರದೇಶಗಳಲ್ಲಿನ ಜಲಪ್ರಲಯದ ಬಗ್ಗೆ ಮನವರಿಕೆ ಮಾಡಿ ಯಾವ ರೀತಿಯಲ್ಲಿ ಸಹಾಯ ಮಾಡಬಹುದೆಂದು ಚರ್ಚಿಸಲಾಯಿತು.

ವರದಿ;- ಮನ್ಸೂರ್ ಬೆಳ್ಳಾರೆ(ಸಂಘಟನಾ ಕಾರ್ಯದರ್ಶಿ ಕೆಸಿಎಫ್  ಸನಯ್ಯಾ ಸೆಕ್ಟರ್)

error: Content is protected !! Not allowed copy content from janadhvani.com