janadhvani

Kannada Online News Paper

ಸ್ವಾತಂತ್ರ್ಯದ ಅಂಗವಾಗಿ ದ.ಕ.ಜಿಲ್ಲಾ SჄS ರೋಗಿಗಳಿಗೆ ಹಣ್ಣು ಹಂಪಲು ಮತ್ತು ವಸ್ತ್ರ ವಿತರಣೆ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SჄS)

ಕರ್ನಾಟಕ ರಾಜ್ಯಾದ್ಯಂತ ಎಲ್ಲಾ  ಸೆಂಟರ್  ಗಳಲ್ಲಿ  ಭಾರತ ಬಾರತೀಯರದ್ದಾಗಲಿ ಎಂಬ ಘೋಷ ವಾಕ್ಯ ದೊಂದಿಗೆ 72 ನೇ ಸ್ವಾತಂತ್ರ್ಯ ದ ಅಂಗವಾಗಿ  ಆಗಸ್ಟ್ 1 ರಿಂದ ಆಗಸ್ಟ್   15 ತನಕ ಪ್ರಜಾ ಸಂಗಮ ಕಾರ್ಯಕ್ರಮ ನಡೆಸುತ್ತಾ. ಈ ಕಾರ್ಯಕ್ರಮದ ಅಂಗವಾಗಿ ನಗರದ ವೆನ್ಲಾಕ್ ಆಸ್ಪತ್ರೆ ಯ ಸುಮಾರು 700 ರಷ್ಟು ರೋಗಿಗಳಿಗೆ ಹಣ್ಣುಹಂಪಲು ಮತ್ತು ವಸ್ತ್ರ ವಿತರಣಾ ಕಾರ್ಯಕ್ರಮ ಆಗಸ್ಟ್ 16 ಬೆಳಗ್ಗೆ 10.00 ಘಂಟೆ ಗೆ ಸರಿಯಾಗಿ ನಡೆಯಲಿದೆ.

ಈ ಕಾರ್ಯಕ್ರಮ ದಲ್ಲಿ ರಾಜ್ಯ SჄS ಪ್ರಧಾನ ಕಾರ್ಯದರ್ಶಿ MSM ಝೈನಿ ಕಾಮಿಲ್ .ದ.ಕ ಜಿಲ್ಲೆಯ ಉಸ್ತುವಾರಿ ಸಚಿವರಾದ ಯು ಟಿ ಖಾದರ್, MLC ಬಿ ಎಂ ಪಾರೂಕ್, MLA ವೇದವ್ಯಾಸ ಕಾಮತ್ ,MLC ಐವನ್ ಡಿ ಸೋಜ, ಮಂಗಳೂರು ಪೋಲೀಸ್ ಕಮಿಷನರ್ ಟಿ ಆರ್ ಸುರೇಶ್ ಸಮೇತ ಹಲವು ಸಾಮಾಜಿಕ ಧಾರ್ಮಿಕ ಸಂಘಟನಾ ನಾಯಕರು ಭಾಗವಹಿಸುವರು.
ಎಂದು ಜಿಲ್ಲಾ SჄS ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ತಿಳಿಸಿ ದ್ದಾರೆ.

error: Content is protected !! Not allowed copy content from janadhvani.com