ಉಳ್ಳಾಲ : ಎಸ್ಸೆಸ್ಸೆಫ್ ಕೊಮರಂಗಳ ಶಾಖಾ ವತಿಯಿಂದ ಯೆನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ. ಇದರ ಸಹಭಾಗಿತ್ವ ದಲ್ಲಿ ತಾಜುಲ್ ಉಲಮಾ (ಖ ಸಿ ) ಅನುಸ್ಮರಣೆ ಪ್ರಯುಕ್ತ ಉಚಿತ ಅರೋಗ್ಯ ತಪಾಸಣಾ ಶಿಬಿರವು ಆಗಸ್ಟ್ 12 ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಕಂಝುಲ್ ಉಲೂಂ ಮದ್ರಸ ಹಾಲ್ ಕೊಮರಂಗಳದಲ್ಲಿ ನಡೆಯಲಿರುವುದು.ಬೆಳಿಗ್ಗೆ 9 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಎಸ್ಸೆಸ್ಸೆಫ್ ಕೊಮರಂಗಳ ಶಾಖೆಯ ಅಧ್ಯಕ್ಷರಾದ ಸಿದ್ದೀಕ್ ಕೊಮರಂಗಳ ರವರು ಅಧ್ಯಕ್ಷತೆಯನ್ನು ವಹಿಸಲಿರುವರು. ಎಸ್.ಜೆ.ಎಂ ತಲಪಾಡಿ ರೇಂಜ್ ಅಧ್ಯಕ್ಷರಾದ ಅಬ್ದುಲ್ಲಾ ಮದನಿ ಕೊಮರಂಗಳ ಅವರ ದುವಾ ನೆರವೇರಿಸುವರು. ಎಸ್ಸೆಸ್ಸೆಫ್ ರಾಜ್ಯ ಸದಸ್ಯರಾದ ಇಸ್ಮಾಯಿಲ್ ಮಾಸ್ಟರ್ ಮೋಂಟೆಪದವು ಅವರು ಉದ್ಘಾಟಿಸಲಿರುವರು.ಕೊಟೆಕಾರ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಬಾರಿ ಸ-ಅದಿ ಮುನ್ನುಡಿ ಭಾಷಣ ಮಾಡಲಿರುವರು. ವೇದಿಕೆಯಲ್ಲಿ ಉಳ್ಳಾಲ ಡಿವಿಶನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ,ತಲಪಾಡಿ ಸೆಕ್ಟರ್ ಅಧ್ಯಕ್ಷ ಇಸ್ಮಾಯಿಲ್,ಎಸ್ ಎಂ.ಎ ಜಿಲ್ಲಾ ಕಾರ್ಯದರ್ಶಿ ಬಿ.ಎಚ್ ಇಸ್ಮಾಯಿಲ್ ಕೊಮರಂಗಳ,ಎಸ್.ವೈಎಸ್ ಕೆ ಸಿ ರೋಡ್ ಸೆಂಟರ್ ಅಧ್ಯಕ್ಷ ಉಮರ್ ಮಾಸ್ಟರ್,ಎಸ್.ವಯ.ಎಸ್ ಸೆಂಟರ್ ಕಾರ್ಯದರ್ಶಿ ಫರೂಕ್ ಬಟ್ಟಪ್ಪಾಡಿ, ,ಎಸ್ ವೈ.ಎಸ್ ಕೊಮರಂಗಳ ಬ್ರಾಂಚ್ ಅಧ್ಯಕ್ಷ ಹಾಗೂ ತಖ್ವ ಮಸೀದಿ ಕೊಮರಂಗಳ ಅಧ್ಯಕ್ಷ ರಾದ ಹಸೈನಾರ್,ಎಸ್.ಎಂ.ಎ ತಲಪಾಡಿ ಝೋನ್ ಅಧ್ಯಕ್ಷ ಎ.ಎಂ ಅಬ್ಬಾಸ್ ಹಾಜಿ,ಕೊಟೆಕಾರ್ ಪಂಚಾಯತ್ ಸದಸ್ಯರಾದ ಮೊಯಿದಿನ್ ಬಾವ,ಎಸ್ ವೈ.ಎಸ್ ಕೊಮರಂಗಳ ಬ್ರಾಂಚ್ ಕಾರ್ಯದರ್ಶಿ ಇಬ್ರಾಹಿಂ ಕೊಮರಂಗಳ,ತಖ್ವ ಮಸೀದಿ ಇಮಾಮ್ ಜಬ್ಬಾರ್ ಸಖಾಫಿ ಇನ್ನಿತರ ನಾಯಕರು ಭಾಗವಹಿಸಲಿರವರು ಎಂದು ಸಿದ್ದೀಕ್ ಕೊಮರಂಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.