ಪಣಜಿ: ಸಂಸತ್ ನಲ್ಲಿ ಕಣ್ಣು ಹೊಡೆದಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೊಳಗಾಗುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗೋವಾ ಬಿಜೆಪಿ ವಕ್ತಾರ “ಲೋಫರ್” ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಗೋವಾ ಕಾಂಗ್ರೆಸ್ ಮುಖ್ಯಸ್ಥ ಗೋವಾ ಮುಖ್ಯಮಂತ್ರಿಯನ್ನು ಎನ್ ಡಿಎ ಮೈತ್ರಿಕೂಟದ ಕೈಗೊಂಬೆ ಎಂದು ಕರೆದಿದ್ದ ಬೆನ್ನಲ್ಲೇ ಗೋವಾ ಬಿಜೆಪಿ ವಕ್ತಾರರು ರಾಹುಲ್ ಗಾಂಧಿಯನ್ನು ಸಂಸತ್ ನಲ್ಲಿ ಕಣ್ಣು ಹೊಡಿದಿದ್ದಕ್ಕಾಗಿ ಲೋಫರ್ ಎಂದು ಕರೆದಿದ್ದಾರೆ. ಭಾರತದ ಜನತೆಗೆ ಸಂಬಂಧಿಸಿದ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದ ರಾಹುಲ್ ಗಾಂಧಿ ಲೋಫರ್ ರೀತಿಯಲ್ಲಿ, ಪ್ರಜಾಪ್ರಭುತ್ವದ ದೇವಾಲಯವಾಗಿರುವ ಸಂಸತ್ ನಲ್ಲಿ ಪ್ರಧಾನಿಯನ್ನು ಅಪ್ಪಿಕೊಂಡಿದ್ದೂ ಅಲ್ಲದೇ ಕಣ್ಣು ಹೊಡೆದಿದ್ದಾರೆ ಎಂದು ಬಿಜೆಪಿ ವಕ್ತಾರ ದತ್ತಪ್ರಸಾದ್ ನಾಯ್ಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕಾಲೇಜು ಹುಡುಗಿಯರತ್ತ ಕಣ್ಣು ಹೊಡೆಯುವ ಲೋಫರ್ ಗಳ ಬಗ್ಗೆಯಷ್ಟೇ ನಾವು ಕೇಳಿದ್ದೆವು, ಆದರೆ ಇಂತಹದ್ದೇ ಘಟನೆ ಪ್ರಜಾಪ್ರಭುತ್ವದ ದೇವಾಲಯದಂತಿರುವ ಸಂಸತ್ ನಲ್ಲಿಯೂ ನಡೆಯಿತು, ರಾಜ್ಯ ಕಾಂಗ್ರೆಸ್ ಮುಖ್ಯಸ್ಥರೂ ಸಹ ಗಾಂಧಿ ವಂಶದ ಕೈಗೊಂಬೆಯಾಗಿದ್ದಾರೆ ಎಂದು ದತ್ತಪ್ರಸಾದ್ ನಾಯ್ಕ್ ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ
ಕಳಮಶ್ಶೇರಿ ಘಟನೆ ಬಾಂಬ್ ಸ್ಪೋಟದಿಂದ- ಖಚಿತಪಡಿಸಿದ ಡಿಜಿಪಿ ಶೇಖ್ ದರ್ವೇಶ್